ಸಾರಾಂಶ
ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿನಯ್ ಗುರೂಜಿ ಅವರು ಮಂಗಳವಾರ ಹಾಸನಂಬೆ ದೇವಾಲಯಕ್ಕೆ ಭೇಟಿ ನೀಡಿ ತಾಯಿ ದರ್ಶನ ಪಡೆದು ಪುನೀತರಾದರು. ನಂತರ ಬಡವರಿಗೆ ಬಟ್ಟೆ ವಿತರಿಸಿದರು. ಈ ಬಾರಿ ವಿಶೇಷ ಏನೆಂದರೇ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರಿಗೆ ತುಂಬ ಧನ್ಯವಾದ ಹೇಳಬೇಕು. ಇಲ್ಲಿನ ಜಿಲ್ಲಾಡಳಿತ ಹಾಗೂ ಎಲ್ಲಾ ವರ್ಗದವರಿಂದ ತುಂಬ ಉತ್ತಮವಾಗಿ ದರ್ಶನವಾಗಿದೆ. ದೇವರಿಗೆ ಬಡವರು ಮತ್ತು ಶ್ರೀಮಂತರಿಲ್ಲ. ಈ ದೇವಸ್ಥಾನವು ಎಲ್ಲಾ ಕ್ಷೇತ್ರಗಳಿಗೆ ಮಾದರಿಯಾಗಲಿ ಎನ್ನುವುದು ನಮ್ಮ ಕಳಕಳಿಯ ಪ್ರಾರ್ಥನೆ ಎಂದು ಹೇಳಿದರು.
ಹಾಸನ: ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿನಯ್ ಗುರೂಜಿ ಅವರು ಮಂಗಳವಾರ ಹಾಸನಂಬೆ ದೇವಾಲಯಕ್ಕೆ ಭೇಟಿ ನೀಡಿ ತಾಯಿ ದರ್ಶನ ಪಡೆದು ಪುನೀತರಾದರು. ನಂತರ ಬಡವರಿಗೆ ಬಟ್ಟೆ ವಿತರಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿ, ಕಲ್ಲಿನ ರೂಪದಲ್ಲಿ ವೈಷ್ಣವಿ ರೂಪದಲ್ಲಿ ಹೇಗೆ ಇದ್ದಾಳೆ. ಅದೇ ರೀತಿ ಹಾಸನಂಬೆಯಾಗಿ ಮೂರು ದೇವರು ದೀಪವಳಿ ಸಮಯದಲ್ಲಿ ದರ್ಶನವನ್ನು ಕೊಡುತ್ತಾಳೆ. ನಮ್ಮ ಜೀವನದ ಒಳಗಿನ ಕತ್ತಲು, ಅಜ್ಞಾನ, ಹೊರಗಿನ ಕತ್ತಲು, ಸಮಸ್ಯೆಗಳು, ಎರಡನೆಯವರು ಆ ತಾಯಿ ದರ್ಶನ ದೂರ ಮಾಡುತ್ತದೆ ಎನ್ನುವ ಕಾರಣ, ಬಾಡದ ಹೂವು ನಮ್ಮ ಬಾಳನ್ನು ಬೆಳಗುತ್ತದೆ. ಹಾಳಾಗದ ನೈವೇದ್ಯ ನಮ್ಮ ದೇಶದ ಅನ್ನದ ಕೊರತೆ ನೀಗಿಸುತ್ತದೆ. ಅಲ್ಲಿರುವ ಜ್ಯೋತಿ ನಮ್ಮ ಅಂತರಂಗವನ್ನು ಬೆಳಗುತ್ತದೆ ಎನ್ನುವುದು ನಮ್ಮೆಲ್ಲರ ನಂಬಿಕೆಯಾಗಿದೆ ಎಂದರು. ಈ ಬಾರಿ ವಿಶೇಷ ಏನೆಂದರೇ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರಿಗೆ ತುಂಬ ಧನ್ಯವಾದ ಹೇಳಬೇಕು. ಇಲ್ಲಿನ ಜಿಲ್ಲಾಡಳಿತ ಹಾಗೂ ಎಲ್ಲಾ ವರ್ಗದವರಿಂದ ತುಂಬ ಉತ್ತಮವಾಗಿ ದರ್ಶನವಾಗಿದೆ. ದೇವರಿಗೆ ಬಡವರು ಮತ್ತು ಶ್ರೀಮಂತರಿಲ್ಲ. ಈ ದೇವಸ್ಥಾನವು ಎಲ್ಲಾ ಕ್ಷೇತ್ರಗಳಿಗೆ ಮಾದರಿಯಾಗಲಿ ಎನ್ನುವುದು ನಮ್ಮ ಕಳಕಳಿಯ ಪ್ರಾರ್ಥನೆ ಎಂದು ಹೇಳಿದರು.