ಸಾರಾಂಶ
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದ್ದು, ಚರಿತಾರ್ಹ ಸಂದರ್ಭಕ್ಕೆ ಚಿತ್ರದುರ್ಗದ ಶಿಲ್ಪಿಯೋರ್ವ ತನ್ನದೊಂದು ಅಳಿಲು ಸೇವೆ ಸಮರ್ಪಣೆ ಮಾಡಿದ್ದಾನೆ. ಆಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ ಕಂಬದಲ್ಲಿ ಎರಡು ಮುಕ್ಕಾಲು ಅಡಿ ವಿನಾಯಕ ವಿಗ್ರಹವನ್ನು ಚಿತ್ರದುರ್ಗ ನಗರದ ಯುವ ಶಿಲ್ಪಿ ಕೀರ್ತಿ ನಂಜುಂಡಸ್ವಾಮಿ ಕೆತ್ತನೆ ಮಾಡುವುದರ ಮೂಲಕ ಗಮನ ಸೆಳೆದಿದ್ದಾನೆ.
ಎರಡು ಮುಕ್ಕಾಲು ಅಡಿ ಗಣಪತಿ ವಿಗ್ರಹ ಕೆತ್ತನೆ ಮಾಡಿದ ಕೀರ್ತಿ ನಂಜುಂಡಸ್ವಾಮಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದ್ದು, ಚರಿತಾರ್ಹ ಸಂದರ್ಭಕ್ಕೆ ಚಿತ್ರದುರ್ಗದ ಶಿಲ್ಪಿಯೋರ್ವ ತನ್ನದೊಂದು ಅಳಿಲು ಸೇವೆ ಸಮರ್ಪಣೆ ಮಾಡಿದ್ದಾನೆ.ಆಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ ಕಂಬದಲ್ಲಿ ಎರಡು ಮುಕ್ಕಾಲು ಅಡಿ ವಿನಾಯಕ ವಿಗ್ರಹವನ್ನು ಚಿತ್ರದುರ್ಗ ನಗರದ ಯುವ ಶಿಲ್ಪಿ ಕೀರ್ತಿ ನಂಜುಂಡಸ್ವಾಮಿ ಕೆತ್ತನೆ ಮಾಡುವುದರ ಮೂಲಕ ಗಮನ ಸೆಳೆದಿದ್ದಾನೆ. ಕಳೆದ ಡಿಸೆಂಬರ್ 7 ರಂದು ಅಯೋಧ್ಯೆಗೆ ತೆರಳಿ ಭವ್ಯ ರಾಮಮಂದಿರಕ್ಕೆ ಗಣೇಶನ ಮೂರ್ತಿ ಕೆತ್ತಿ ವಾಪಾಸ್ಸಾಗಿದ್ದಾನೆ. ವಿಘ್ನ ನಿವಾರಕನ ವಿಗ್ರಹ ಕೆತ್ತನೆಯ ಅವಕಾಶವನ್ನು ಕೊಟ್ಟಿರುವುದು ಸಂತೋಷದ ಸಂಗತಿ ಎಂದು ಪ್ರತಿಕ್ರಿಯಿಸುತ್ತಾನೆ.
ನಾವು ಮೊದಲಿನಿಂದಲೂ ಕರಸೇವಕರಾಗಿ ಹೋರಾಟ ಮಾಡಿದ್ದೀವಿ. ಮಡಿವಾಳ ಸಮುದಾಯದವರಾದ ನಮ್ಮ ಕಸುಬು ಬೇರೆಯಾಗಿದೆ. ಶ್ರೀರಾಮನೇ ನನ್ನ ಮಗನನ್ನು ಗುರುತಿಸಿ ಅಯೋಧ್ಯೆಗೆ ಕರೆಸಿಕೊಂಡಿದ್ದಾರೆ. ಕಾರ್ಕಳದಲ್ಲಿ ಕಲೆ ವಿಷಯದಲ್ಲಿ ತರಬೇತಿ ಪಡೆದು ಇಂದು ಅನೇಕ ವಿಗ್ರಹ ಕೆತ್ತನೆ ಮಾಡ್ತಿದ್ದಾನೆ. ನನ್ನ ಮಗ ಕೋಟಿಗೆ ಒಬ್ಬ ಎನ್ನುವ ಸಂತೋಷ ನಮಗಿದೆ ಎನ್ನುತ್ತಾರೆ ಪೋಷಕ ನಂಜುಂಡಸ್ವಾಮಿ.ಇಡೀ ಜಿಲ್ಲೆಗೆ ನನ್ನ ಮಗ ಹೆಸರಿಗೆ ತಕ್ಕಂತೆ ದೊಡ್ಡ ಕೀರ್ತಿ ತಂದಿದ್ದಾನೆ. ಮಗನ ವಿನಾಯಕನ ಕೆತ್ತನೆ ತುಂಬಾ ಚೆನ್ನಾಗಿ ಆಗಿದೆ ಎನ್ನುವ ಪ್ರಶಂಸೆ ಬಂದಿದೆ.ಕರ್ನಾಟಕದ ನಾಲ್ವರು ಶಿಲ್ಪಿಗಳ ಕಾರ್ಯವನ್ನು ಎಲ್ಲರೂ ಶ್ಲಾಫಿಸುತ್ತಿದ್ದಾರೆ. ಮಗನ ಕೆತ್ತನೆಯ ವಿನಾಯಕನ ವಿಗ್ರಹ ನೋಡಲು ನಾವು ಕಾತುರದಿಂದ ಇದ್ದೇವೆ.ಜನ ಕಡಿಮೆ ಆದ್ಮೇಲೆ ನಾವು ಹೋಗಿ ನೋಡಿಕೊಂಡು ಬರುತ್ತೇವೆ ಎನ್ನುತ್ತಾರೆ ನಂಜುಂಡಸ್ವಾಮಿ