ಸಾರಾಂಶ
ಹಾವೇರಿಯ ಸುಭಾಸ್ ಸರ್ಕಲ್‌ನ ಹಾವೇರಿ ಕಾ ರಾಜಾ ಗಜಾನನ ಉತ್ಸವ ಸಮಿತಿಯ 16 ಜನ ಪದಾಧಿಕಾರಿಗಳು ಹಾಗೂ ಡಿಜೆ ಸೌಂಡ್ ಸಿಸ್ಟಂ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಗದ್ದಿಗೇರ ಓಣಿ ಕಾ ಸಾಮ್ರಾಟ್ ಶ್ರೀ ಗಜಾನನ ಸೇವಾ ಸಮಿತಿ 13 ಜನ ಹಾಗೂ ಡಿಜೆ ಸೌಂಡ್ ಸಿಸ್ಟಂ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.
ಹಾವೇರಿ: ಗಣೇಶೋತ್ಸವ ಶೋಭಾಯಾತ್ರೆ ಮೆರವಣಿಗೆ ಸಂದರ್ಭದಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಮಂಗಳವಾರ ಡಿಜೆ ಬಳಕೆ ಮಾಡಿದ ಆರೋಪದಡಿ ಹಾವೇರಿಯ ಎರಡು ಗಣೇಶೋತ್ಸವ ಸೇವಾ ಸಮಿತಿ ಆಯೋಜಕರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.ಹಾವೇರಿಯ ಸುಭಾಸ್ ಸರ್ಕಲ್‌ನ ಹಾವೇರಿ ಕಾ ರಾಜಾ ಗಜಾನನ ಉತ್ಸವ ಸಮಿತಿಯ 16 ಜನ ಪದಾಧಿಕಾರಿಗಳು ಹಾಗೂ ಡಿಜೆ ಸೌಂಡ್ ಸಿಸ್ಟಂ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಗದ್ದಿಗೇರ ಓಣಿ ಕಾ ಸಾಮ್ರಾಟ್ ಶ್ರೀ ಗಜಾನನ ಸೇವಾ ಸಮಿತಿ 13 ಜನ ಹಾಗೂ ಡಿಜೆ ಸೌಂಡ್ ಸಿಸ್ಟಂ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.ನೀರಿನ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು
ಬ್ಯಾಡಗಿ: ತಾಲೂಕಿನ ಹಂಸಭಾವಿ ಕ್ರಾಸ್ ಬಳಿಯ ಚಿಕ್ಕಣಜಿ ಗ್ರಾಮದ ಜೋಪಡಿಗಳ ಕಾಲನಿಯಲ್ಲಿ ಮನೆ ಬಳಿ ಆಟವಾಡುತ್ತಿದ್ದ ಮಗುವೊಂದು ನೀರಿನ ಗುಂಡಿಗೆ ಬಿದ್ದು ಸಾವಿಗೀಡಾದ ಘಟನೆ ಬುಧವಾರ ಜರುಗಿದೆ.ಪೂಜಾ ನಾಗಪ್ಪ ದುರಮುರಗಿ(2) ವರ್ಷದ ಮಗು ಆಟವಾಡುತ್ತಿದ್ದಾಗ ಜೋಪಡಿ ಪಕ್ಕದಲ್ಲಿರುವ ನೀರಿನ ಗುಂಡಿಗೆ ಬಿದ್ದು ಮೃತಪಟ್ಟಿದೆ. ಜೋಪಡಿಗಳ ಕಾಲನಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ಎಲ್ಲರೂ ಅಲೆಮಾರಿ ಕುಟುಂಬಕ್ಕೆ ಸೇರಿದ್ದು, ಸುತ್ತಲೂ ಕೆರೆ ಹಾಗೂ ದೊಡ್ಡ ನೀರಿನ ಗುಂಡಿಗಳಿವೆ. ತೀವ್ರ ಅಪಾಯ ತಂದೊಡ್ಡುತ್ತಿವೆ. ಈ ಕುರಿತು ಸಂಬಂಧಿಸಿದ ಗ್ರಾಮ ಪಂಚಾಯಿತಿಯವರಿಗೆ ತಿಳಿಸಿದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.