ತಾಜ್ಯ ವಿಲೇವಾರಿ ನಿಯಮ ಉಲ್ಲಂಘನೆ: ಕ್ಲಿನಿಕ್‌ಗೆ ವಿರಾಜಪೇಟೆ ಪುರಸಭೆ ದಂಡ

| Published : Oct 26 2024, 12:49 AM IST

ತಾಜ್ಯ ವಿಲೇವಾರಿ ನಿಯಮ ಉಲ್ಲಂಘನೆ: ಕ್ಲಿನಿಕ್‌ಗೆ ವಿರಾಜಪೇಟೆ ಪುರಸಭೆ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ವಿರಾಜಪೇಟೆ ನಗರದ ಎಸ್.ಎಸ್.ರಾಮಮೂರ್ತಿ ರಸ್ತೆಯಲ್ಲಿರುವ ಕ್ಲಿನಿಕ್‌ ನಿಯಮ ಪಾಲಿಸದೆ ರಸ್ತೆ ಬದಿಯಲ್ಲಿರಿಸಿದ ವೈದ್ಯಕೀಯ ತ್ಯಾಜ್ಯ ಅಸಮರ್ಪಕ ವಿಂಗಡಣೆ ಪ್ರಕರಣದಡಿ ವಿರಾಜಪೇಟೆ ಪುರಸಭೆ ಗುರುವಾರ ದಂಡ ವಿಧಿಸಿತು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಪಟ್ಟಣದಲ್ಲಿ ವೈದ್ಯಕೀಯ ಪರಿಕರಗಳು ಸೇರಿದಂತೆ ಕಾಗದ ಪತ್ರಗಳನ್ನು ವಿಂಗಡಿಸದೇ ಇದ್ದ ಖಾಸಗಿ ಕ್ಲಿನಿಕ್‌ಗಳಿಗೆ ವಿರಾಜಪೇಟೆ ಪುರಸಭೆ ದಂಡ ವಿಧಿಸಿದೆ.

ವಿರಾಜಪೇಟೆ ನಗರದ ಎಸ್.ಎಸ್.ರಾಮಮೂರ್ತಿ ರಸ್ತೆಯಲ್ಲಿರುವ ಕ್ಲಿನಿಕ್‌ ನಿಯಮ ಪಾಲಿಸದೆ ರಸ್ತೆ ಬದಿಯಲ್ಲಿರಿಸಿದ ವೈದ್ಯಕೀಯ ತ್ಯಾಜ್ಯ ಅಸಮರ್ಪಕ ವಿಂಗಡಣೆ ಪ್ರಕರಣದಡಿ ವಿರಾಜಪೇಟೆ ಪುರಸಭೆ ಗುರುವಾರ ದಂಡ ವಿಧಿಸಿತು.

ಮುಂಜಾನೆ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಸದಸ್ಯ ಡಿ.ಪಿ.ರಾಜೇಶ್‌ ಪದ್ಮನಾಭ ಹಾಗೂ ಸಿಬ್ಬಂದಿ ನಗರದಲ್ಲಿ ಕಸ ವಿಲೇ ಕಾರ್ಯಗಳ ಬಗ್ಗೆ ಪರಿಶೀಲನೆ ಮಾಡುತಿದ್ದರು. ಈ ಸಂದರ್ಭ ಕ್ಲಿನಿಕ್‌ ಎದುರು ಪ್ಲಾಸ್ಟಿಕ್ ಚೀಲದಲ್ಲಿ ಉಪಯೋಗಿಸಿದ ಸಿರಿಂಜ್‌, ಚುಚ್ಚುಮದ್ದು ( ಸೂಜಿ) ಹ್ಯಾಂಡ್ ಗ್ಲೌಸ್‌, ಟ್ಯೂಬ್, ಸೆಟ್, ಮತ್ತು ಕ್ಲಿನಿಕ್ ನಗದು ರಶೀದಿಗಳು ಲಭ್ಯವಾಗಿವೆ. ವೈದ್ಯಕೀಯ ತ್ಯಾಜ್ಯ ಎಲ್ಲೆಂದರಲ್ಲಿ ಹಾಕುವುದು ಕಾನೂನಿಗೆ ವಿರುದ್ಧವಾಗಿದೆ. ಪುರಸಭೆಯ ಪೌರ ಸಿಬ್ಬಂದಿ ಇಂತಹ ತ್ಯಾಜ್ಯ ವಿಂಗಡಣೆ ಮಾಡುವ ವೇಳೆ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂದು ಕ್ಲಿನಿಕ್ ಸಿಬ್ಬಂದಿಗೆ ವಿವರಿಸಲಾಯಿತು.

ವೈದ್ಯಕೀಯ ತ್ಯಾಜ್ಯ ವಿಂಗಡಣೆಗೆ ಖಾಸಗಿ ಸಂಸ್ಥೆಯೊಂದು ಕೆಲಸ ಮಾಡುತ್ತಿದೆ. ಮೂರು ದಿನಗಳಿಗೊಮ್ಮೆ ತ್ಯಾಜ್ಯ ಸಂಗ್ರಹಣ ವಾಹನ ಸ್ಥಳಕ್ಕೆ ಆಗಮಿಸಿ ತ್ಯಾಜ್ಯ ಸಂಗ್ರಹಿಸುವ ಕಾರ್ಯ ಮಾಡುತ್ತಿದೆ. ಪ್ರತಿ ಆಸ್ಪತ್ರೆ ಮತ್ತು ಕ್ಲಿನಿಕ್ ನಲ್ಲಿ ಪ್ರತಿದಿನ ಸಂಗ್ರಹವಾಗುವ ತ್ಯಾಜ್ಯಗಳನ್ನು ನಿರ್ದಿಷ್ಟ ಕಸದ ಡಬ್ಬಿಯಲ್ಲಿ ಸಂಗ್ರಹಿಸಿ ತ್ಯಾಜ್ಯ ವಾಹನಕ್ಕೆ ನೀಡಬೇಕು. ಪೂರ್ವ ನಿಗದಿತ ಹಣವನ್ನು ಕ್ಲಿನಿಕ್ ಮತ್ತು ಆಸ್ಪತ್ರೆಗಳು ನೀಡಬೇಕು ಎನ್ನುವ ಕಾನೂನು ಇದ್ದರು ಕಾನೂನು ಉಲ್ಲಂಘನೆಯಾಗಿದೆ ಎಂದು ಮೆಲ್ನೋಟಕ್ಕೆ ತಿಳಿದುಬಂದಿದೆ ಎಂದು ಪುರಸಭೆ ಪ್ರಮುಖರು ಮಾಹಿತಿ ನೀಡಿದರು.

ಪುರಸಭೆಯ ಪರಿಸರ ಅಭಿಯಂತರ ರೀತು ಸಿಂಗ್, ಪ್ರಬಾರ ಆರೋಗ್ಯ ಅಧಿಕಾರಿಗಳಾದ ಕೋಮಲ, ಪೌರ ಕಾರ್ಮಿರಾದ ಕವಿತಾ ಮತ್ತು ಸುಮಿತ್ರ ಇದ್ದರು.