ಸಾರಾಂಶ
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಶಾಂತ ರೀತಿಯಲ್ಲಿ ಹೊರಟಿದ್ದ ಹಿಂದೂಗಳ ಮೇಲೆ ಮುಸ್ಲಿಂ ಕಿಡಿಗೇಡಿಗಳು ನಡೆಸಿದ ದಾಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ. ಇನ್ನು ಮುಂದೆ ಹಿಂದುಗಳ ಮೇಲಿನ ಇಂತಹ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು.
ಹಾವೇರಿ: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಶಾಂತ ರೀತಿಯಲ್ಲಿ ಹೊರಟಿದ್ದ ಹಿಂದೂಗಳ ಮೇಲೆ ಮುಸ್ಲಿಂ ಕಿಡಿಗೇಡಿಗಳು ನಡೆಸಿದ ದಾಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ. ಇನ್ನು ಮುಂದೆ ಹಿಂದುಗಳ ಮೇಲಿನ ಇಂತಹ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತ ರೀತಿಯಲ್ಲಿ ಹೊರಟಿದ್ದ ಗಣೇಶ ವಿಸರ್ಜನೆ ಮೆರವಣಿಗೆ ಮಸೀದಿ ಬಳಿ ಬರುತ್ತಿದ್ದಂತೆ ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆದು ಗಲಭೆ ಮಾಡಿದ್ದಾರೆ. ಮಸೀದಿ ಮುಂದೆ ಹೋಗುವುದು, ವಾದ್ಯಗಳನ್ನು ಬಾರಿಸಬಾರದಾ? ಅದು ಸಾರ್ವಜನಿಕ ರಸ್ತೆ. ಮುಸ್ಲಿಂರನ್ನು ಕಾಂಗ್ರೆಸ್‌ನವರು ತಲೆಯ ಮೇಲೆ ಹೊತ್ತು ಕುಣಿಸುತ್ತಿದ್ದಾರೆ. ಇದರಿಂದಲೇ ಅವರು ಆ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಸ್ಲಿಂ ಸಮಾಜಕ್ಕೆ ಎಚ್ಚರಿಕೆ ಕೊಡುತ್ತೇನೆ. ಇನ್ನುಮುಂದೆ ಹೀಗೆ ಆದರೆ ಸಹಿಸಲ್ಲ. ಮುಸ್ಲಿಂ ಮುಲ್ಲಾ, ಮೌಲ್ವಿಗಳು ನೆಲಮಂಗಲ ಘಟನೆಯ ಗಲಭೆಕೋರರನ್ನು ನಿಷೇಧಿಸಿ ಫತ್ವಾ ಹೊರಡಿಸಲಿ. ಆಗ ನಿಮ್ಮನ್ನು ನಂಬುತ್ತೇವೆ. ಗಣೇಶ ವಿಸರ್ಜನೆ ವೇಳೆ ಡಿಜೆ ಹಚ್ಚಲು ನನ್ನದೂ ವಿರೋಧವಿದೆ. ಈಗ ಡಬಲ್ ಡಿಜೆ ಹಚ್ಚಿ ಎನ್ನುವೆ. ಸರ್ಕಾರ ಮೊದಲು ದಿನಕ್ಕೆ ಐದು ಬಾರಿ ಮಸೀದಿ ಮೇಲೆ ಆಜಾನ್ ಕೂಗುವುದರ ವಿರುದ್ಧ ಕ್ರಮ ಕೈಗೊಳ್ಳಲಿ, ಆಗ ನಾನೇ ರಾಜ್ಯದಲ್ಲಿ ಡಿಜೆ ನಿಲ್ಲಿಸುತ್ತೇನೆ ಎಂದರು.ನಾಗಮಂಗಲ ಗಲಭೆ ಪೂರ್ವನಿಯೋಜಿತ ಕೃತ್ಯ. ಕಳೆದ ವರ್ಷವೂ ಇದೇ ಸ್ಥಳದಲ್ಲಿ ಗಲಾಟೆ ನಡೆದಿತ್ತು. ಈ ಸಲ ಯಾಕೆ ಮುನ್ನೆಚ್ಚರಿಕೆ ವಹಿಸಲಿಲ್ಲ. ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ರಾಜೀನಾಮೆ ಕೊಡಬೇಕು. ಗುಪ್ತಚರ ಇಲಾಖೆ ವಿಫಲವಾಗಿದೆ. ಮುನ್ನೆಚ್ಚರಿಕೆ ವಹಿಸಿದ್ದರೆ ಗಲಭೆ ತಡೆಯಬಹುದಿತ್ತು. ಶುಕ್ರವಾರ ನಾಗಮಂಗಲಕ್ಕೆ ಹೋಗುತ್ತೇನೆ. ಇಡೀ ನಾಗಮಂಗಲ ಜನತೆ ಮುಸ್ಲಿಂ ಸಮಾಜಕ್ಕೆ ಬಹಿಷ್ಕಾರ ಹಾಕಿ, ಅವರ ಬಳಿ ವ್ಯಾಪಾರ ಮಾಡಬೇಡಿ ಎಂದು ಕರೆ ಕೊಡುತ್ತೇನೆ. ಹಿಂದುಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದರು. ರಟ್ಟಿಹಳ್ಳಿ ನಿಷೇಧ ಕುರಿತು ಹೈಕೋರ್ಟ್ ಮೊರೆ: ಗುರುವಾರ ಸಂಜೆ ರಟ್ಟಿಹಳ್ಳಿಯಲ್ಲಿ ಹಿಂದು ಮಹಾಸಭಾ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಇದು ಕರ್ನಾಟಕವೋ ಅಥವಾ ಪಾಕಿಸ್ತಾನವೋ. ಮುಸ್ಲಿಮರಿಗೆ ಕುಮ್ಮಕ್ಕು ಕೊಡಲು ನಿರ್ಬಂಧ ಹೇರಿದ್ದೀರಾ. ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಎಲ್ಲೂ ಗಲಭೆ ಆಗಿಲ್ಲ. ಈ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವೆ ಎಂದರು. ಸಾವಿರಾರು ಎಕರೆ ವಕ್ಫ್ ಆಸ್ತಿ ನುಂಗಿರುವ ಕುರಿತು ಅನ್ವರ್ ಮಣಿಪ್ಪಾಡಿ ದಾಖಲೆ ಸಮೇತ ಬಿಡುಗಡೆ ಮಾಡಿರುವ ವರದಿಯನ್ನು ಸಚಿವ ಜಮೀರ್ ಅಹ್ಮದ್ ಅವರು ತಾಕತ್ ಇದ್ದರೆ ಜಾರಿಗೊಳಿಸಲಿ ಎಂದು ಪ್ರಮೋದ ಮುತಾಲಿಕ್ ಸವಾಲು ಹಾಕಿದರು. ಸಂಸತ್‌ನಲ್ಲಿ ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿರುವುದನ್ನು ಸ್ವಾಗತಿಸುವೆ. ರಾಜ್ಯಾದ್ಯಂತ ಸಹಿ ಅಭಿಯಾನ ಮಾಡುತ್ತೇವೆ. ಸುಮಾರು 10 ಲಕ್ಷ ಎಕರೆ ಆಸ್ತಿ ವಕ್ಫ್ ಬೋರ್ಡ್ ಬಳಿ ಇದೆ. ಜಗತ್ತಿನ 50ಕ್ಕೂ ಅಧಿಕ ಮುಸ್ಲಿಂ ರಾಷ್ಟ್ರಗಳಷ್ಟು ಜಾಗ ದೇಶದ ವಕ್ಫ್ ಬೋರ್ಡ್‌ನಲ್ಲಿದೆ ಎಂದು ಹೇಳಿದರು.