ಕಠಿಣ ಕಾಯ್ದೆಗಳಿದ್ದರೂ ಹೆಣ್ಣಿನ ಮೇಲೆ ದೌರ್ಜನ್ಯ ನಿಂತಿಲ್ಲ: ಜಸ್ಚೀಸ್‌ ಗಣಪತಿ ಗುರುಸಿದ್ದ ಬಾದಾಮಿ

| Published : Jan 17 2024, 01:47 AM IST

ಕಠಿಣ ಕಾಯ್ದೆಗಳಿದ್ದರೂ ಹೆಣ್ಣಿನ ಮೇಲೆ ದೌರ್ಜನ್ಯ ನಿಂತಿಲ್ಲ: ಜಸ್ಚೀಸ್‌ ಗಣಪತಿ ಗುರುಸಿದ್ದ ಬಾದಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭ ಕೋಶದ ಬೆಳವಣಿಗೆ ಪೂರ್ಣಗೊಳ್ಳದ ಗರ್ಭಪಾತ, ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ, ವಿಕಲಾಂಗ ಮಕ್ಕಳು ಜನಿಸುವ ಸಂಭವಿರುತ್ತದೆ, ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ

ಕನ್ನಡಪ್ರಭ ವಾರ್ತೆ ಕೆಜಿಎಫ್

ಸರ್ಕಾರ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸಾಕಷ್ಟು ಕಾಯ್ದೆ, ಕಾರ್‍ಯಕ್ರಮಗಳನ್ನು ರೂಪಿಸಿದ್ದರೂ ಅತ್ಯಾಚಾರ, ಶೋಷಣೆ, ದೌಜನ್ಯ, ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಕಳವಳ ವ್ಯಕ್ತಪಡಿಸಿದರು.

ಸರ್ಕಾರ ಬಾಲಕಿಯರ ಪ್ರೌಢಶಾಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೆಹಲಿಯ ನಿರ್ಭಯ ಪ್ರಕರಣವು ದೇಶದಲ್ಲಿ ಸಂಚಲನ ಮೂಡಿಸಿದಾಗ ಹೆಣ್ಣು ಮಕ್ಕಳ ರಕ್ಷಣೆಗೆ ಪೋಕ್ಸೋ ಕಾಯ್ದೆ ಜಾರಿಗೆ ತರಲಾಯಿತು ಎಂದರು.

ಮದುವೆ ವಯಸ್ಸು ನಿಗದಿಹಿರಿಯ ನ್ಯಾಯಾಧೀಶರಾದ ಮುಜಾಫರ್.ಎ ಮಾಂಜರಿ ಮಾತನಾಡಿ, ಬಾಲ್ಯ ವಿವಾಹ ನಿಷೇದ ಕಾಯ್ದೆ ೨೦೦೬ರ ಪ್ರಕಾರ ಮದುವೆಯ ಕನಿಷ್ಠ ವಯಸ್ಸು ಪುರುಷರಲ್ಲಿ ೨೧ ವರ್ಷಗಳು ಮತ್ತು ಹೆಣ್ಣುಮಕ್ಕಳ ಕನಿಷ್ಟ ವಯಸ್ಸನ್ನು ೧೮ ವರ್ಷಕ್ಕೆ ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭ ಕೋಶದ ಬೆಳವಣಿಗೆ ಪೂರ್ಣಗೊಳ್ಳದ ಗರ್ಭಪಾತ, ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ, ವಿಕಲಾಂಗ ಮಕ್ಕಳು ಜನಿಸುವ ಸಂಭವಿರುತ್ತದೆ, ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ ಮಕ್ಕಳು ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಇದರಿಂದ ದೇಶದ ಅಭಿವೃದ್ದಿ ಕುಂಠಿತವಾಗುತ್ತದೆ ಎಂದರು. ಕಾನೂನು ಉಲ್ಲಂಘಿಸಿದರೆ ಜೈಲು

ಸರ್ಕಾರ ೨೦೦೬ ಬಾಲ್ಯ ವಿವಾಹ ನಿಷೇದ ಕಾಯ್ದೆ ಜಾರಿಗೆ ತರಲಾಗಿದ್ದು, ಹಿಂದೆ ೧೯೨೯ ಮತ್ತು ೧೯೮೬ ಇತ್ತು, ಅದರೆ ಭಾರತ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ೧೯೯೨ ಡಿ.೧೧ ರಂದು ಸಹಿ ಮಾಡಿದ ಮೇಲೆ ಕೆಲವು ಮಕ್ಕಳ ಸ್ನೇಹಿ ಕಾನೂನು ತರಲಾಗಿದೆ, ಕಾನೂನು ಉಲ್ಲಂಘಿಸಿದವರಿಗೆ ೨ ವರ್ಷ ಕಠಿಣ ಜೈಲು ವಾಸ ಒಂದು ಲಕ್ಷ ದಂಡ ವಿಧಿಸಲಾಗುವುದೆಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ಅಪರಿಚಿತ ವ್ಯಕ್ತಿಗಳ ಬಗ್ಗೆ ಹೆಣ್ಣು ಮಕ್ಕಳು ಎಚ್ಚರಿಕೆಯಿಂದ ಇರಬೇಕು, ಕಾಲೇಜಿಗೆ ಬರುವುದು ವಿದ್ಯಾಭ್ಯಾಸ ಮಾಡಲು ಮಾತ್ರ, ಹೆಣ್ಣು ಮಕ್ಕಳು ತಮ್ಮ ಓದಿನ ಜೊತೆಗೆ ಶಿಕ್ಷಕರ ಮಾರ್ಗದರ್ಶನ ಪಡೆದುಕೊಂಡು ಎಚ್ಚರಿಕೆಯಿಂದ ತಮ್ಮ ವಿದ್ಯಾಭ್ಯಾಸ ಮುಗಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನ್ಯಾಯಾಧೀಶರಾದ ಮಂಜುನಾಥ್, ಸರ್ಕಾರ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಬಿಇಒ ಮುನಿವೆಂಕಟರಾಮಚಾರಿ ಇದ್ದರು.