ವಿಪ್ರರು ಧರ್ಮ ಕಾಪಾಡಿ, ಮಕ್ಕಳಿಗೂ ಸಂಸ್ಕಾರ ನೀಡಿ

| Published : Jul 01 2024, 01:50 AM IST

ಸಾರಾಂಶ

ವಿಪ್ರ ಸಮುದಾಯದ ಸನಾತನ ಧರ್ಮದ ಪಾವನತೆಯನ್ನು ಕಾಪಾಡುವುದಲ್ಲದೆ, ಅದು ಮುಂದಿನ ಪೀಳಿಗೆಗೆ ಸರಿಯಾಗಿ ತಲುಪುವಂತೆ ನಾವು ಶ್ರಮಿಸಬೇಕು. ನಮ್ಮ ಮಕ್ಕಳು ಮಾತ್ರ ನಮ್ಮ ಧರ್ಮ, ಸಂಸ್ಕೃತಿಕ, ಹಾಗೂ ಪರಂಪರೆಯ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಕ್ಷರಾಗುತ್ತಾರೆ.

ಕನ್ನಡಪ್ರಭ ವಾರ್ತೆ ಆಳಂದ

ವಿಪ್ರ ಸಮುದಾಯದ ಸನಾತನ ಧರ್ಮದ ಪಾವನತೆಯನ್ನು ಕಾಪಾಡುವುದಲ್ಲದೆ, ಅದು ಮುಂದಿನ ಪೀಳಿಗೆಗೆ ಸರಿಯಾಗಿ ತಲುಪುವಂತೆ ನಾವು ಶ್ರಮಿಸಬೇಕು. ನಮ್ಮ ಮಕ್ಕಳು ಮಾತ್ರ ನಮ್ಮ ಧರ್ಮ, ಸಂಸ್ಕೃತಿಕ, ಹಾಗೂ ಪರಂಪರೆಯ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಕ್ಷರಾಗುತ್ತಾರೆ. ಅವರಲ್ಲಿ ಸಂಸ್ಕಾರವನ್ನು ಬೇರೂರಿಸಲು ನಾವು ಜವಾಬ್ದಾರರಾಗಿರಬೇಕು ಎಂದು ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠಾಧೀಶ ರಘುವಿಜಯ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.

ತಾಲೂಕಿನ ಖಜೂರಿಯ ಲಕ್ಷ್ಮೀ ವೇಂಕಟೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ಶ್ರೀಪಾದಂಗಳವರು ವೈಕುಂಠ ರಾಮ ದೇವರ ಪೂಜೆ ನೆರವೇರಿಸಿ ಅನುಗ್ರಹ ಸಂದೇಶದಲ್ಲಿ ಅವರು ಮಾತನಾಡಿದರು.

ಗುರು ಭಕ್ತಿ, ನೈತಿಕ ಮೌಲ್ಯಗಳು ಮತ್ತು ಧಾರ್ಮಿಕ ನಿಯಮಗಳನ್ನು ಪಾಲಿಸುವುದು ನಮ್ಮ ಬದುಕಿನ ಪ್ರಮುಖ ಭಾಗವಾಗಬೇಕು. ಇದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ, ಜೀವನದ ಸಾರ್ಥಕತೆಯನ್ನು ನೀಡುತ್ತದೆ. ಧರ್ಮ ಮತ್ತು ಸಂಸ್ಕೃತಿಯ ಬೌದ್ಧಿಕ ಅರಿವು ನಮ್ಮಲ್ಲಿ ಬೆಳೆಯಬೇಕಾಗಿದೆ. ನಾವು ಸದಾ ಹೊಂದಾಣಿಕೆಯಿಂದ, ಸತ್ಯ, ನಿಷ್ಠೆಯಿಂದ ಹಾಗೂ ಶ್ರದ್ಧೆಯಿಂದ ಜೀವನ ನಡೆಸಿದರೆ ಮಾತ್ರ ಸಮಾಜದ ಪ್ರಗತಿ ಸಾಧ್ಯವಾಗುತ್ತದೆ ಎಂದರು.

ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಸಮುದಾಯದವರನ್ನು ಒಂದಾಗಿ ಸೇರಿಸುವಲ್ಲಿ ಸಹಾಯ ಮಾಡುತ್ತದೆ, ಮತ್ತು ಪರಸ್ಪರ ಬೆಂಬಲದ ಮನೋಭಾವನೆ ಮೂಡುತ್ತದೆ. ಧರ್ಮದ ನಿಯಮಗಳನ್ನು ಪಾಲಿಸುವ ಮೂಲಕ ಮನಸ್ಸಿನ ಧಾರ್ಮಿಕ ಸನಾತನ ವಿಪ್ರರಿಗೆ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪೂಜೆಯ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕತೆ ಹಾಗೂ ಧಾರ್ಮಿಕ ಶ್ರದ್ಧೆಯನ್ನು ಹೆಚ್ಚಿಸುತ್ತದೆ. ಮಕ್ಕಳು ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರ ಪಡೆದು, ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅನುಸರಿಸುತ್ತಾರೆ. ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಸಮುದಾಯದವರನ್ನು ಒಂದಾಗಿ ಸೇರಿಸುವಲ್ಲಿ ಸಹಾಯ ಮಾಡುತ್ತದೆ, ಮತ್ತು ಪರಸ್ಪರ ಬೆಂಬಲದ ಮನೋಭಾವನೆ ಮೂಡುತ್ತದೆ ಎಂದು ಹೇಳಿದರು.

ಈ ಸಂದರ್ಭ ಭಕ್ತಾದಿಗಳು ಶ್ರೀಲಕ್ಷ್ಮೀ ವೇಂಕಟೇಶ್ವರ ದೇವರ ದರ್ಶನ ಪಡೆದು, ಪಾದ ಪೂಜೆ, ತೀರ್ಥ ಮಹಾ ಸ್ವೀಕರಿಸಿದರು. ಬಳಿಕ ಪಾದ ಪೂಜೆ, ತೀರ್ಥ ಮಹಾ ಪ್ರಸಾದ ನಾನಾ ಕಡೆಗಳಿಂದಲೂ ಆಗಮಿಸಿದ ಭಕ್ತರು ಶ್ರೀಲಕ್ಷ್ಮೀ ವೇಂಕಟೇಶ್ವರ ದೇವರ ಹಾಗೂ ಶ್ರೀಗಳ ದರ್ಶನ ಪಡೆದರು. ಪೂಜೆಯ ನಾನಾ ಭಂಗಿಗಳನ್ನು ಭಕ್ತಿಯಿಂದ ವೀಕ್ಷಣೆ ಮಾಡಿದ ಭಕ್ತಾಧಿಗಳು ಪ್ರಸಾದ ಸವಿದರು.

ದೇವಸ್ಥಾನದ ಪ್ರಮುಖ ಡಾ. ಶ್ರೀನಿವಾಸರಾವ ದೇಶಮುಖ ಅವರು ಪೂಜ್ಯರಿಗೆ ಗೌರವಿಸಿದರು. ಈ ಸಂದರ್ಭದಲ್ಲಿ ಯಶ್ವಂತರಾವ ದೇಶಮುಖ, ಪ್ರಸನ್ನ ಆಚಾರ್ಯ, ಭಾರ್ಗವ ಆಚಾರ್ಯ, ಪವನ ಆಚಾರ್ಯ, ಶ್ರೀನಿಧಿ ಆಚಾರ್ಯ, ಶ್ರೀಕಾಂತ ಆಚಾರ್ಯ, ಉಲ್ಲಾಸ ಆಚಾರ್ಯ, ಮಿಲಿಂದ ದೇಶಮುಖ, ಅನೀಲ್ ದಾಸ ದೇಶಮುಖ, ಸಂತೋಷ ಕಾಮೇಗಾಂವಕರ್, ಹೃಷಿಕೇಶ ದೇಶಮುಖ, ಬಾವುರಾವ ಕುಲಕರ್ಣಿ, ಪ್ರಭಾಕರರಾವ ದೇಶಮುಖ, ಸಂಜೀವನ ದೇಶಮುಖ, ಹಣಮಂತ ಕುಲಕರ್ಣಿ, ಮೋಹನರಾವ ಕುಲಕರ್ಣಿ, ಮಾಣಿಕ ಕುಲಕರ್ಣಿ ಸೇರಿದಂತೆ ಇತರರು ಭಾಗವಹಿಸಿದರು.