ವಿರಕ್ತ ಮಠಗಳು ಸಾರ್ವಜನಿಕ ಸ್ವತ್ತು, ಮಠಾಧೀಶರ ಆಸ್ತಿಗಳಲ್ಲ

| Published : Jan 16 2024, 01:45 AM IST

ವಿರಕ್ತ ಮಠಗಳು ಸಾರ್ವಜನಿಕ ಸ್ವತ್ತು, ಮಠಾಧೀಶರ ಆಸ್ತಿಗಳಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ರಾಮದುರ್ಗ ತಾಲೂಕಿನ ಹೊಸಕೇರಿ-ಬಸವ ನಗರದಲ್ಲಿ ಶನಿವಾರ ಫಲಹಾರೇಶ್ವರ ಸಮಗ್ರ ಅಭಿವೃದ್ಧಿ ಟ್ರಸ್ಟ್ ಕಮಿಟಿ ಕೋರಣೇಶ್ವರ ಮಠದ ಭಕ್ತಾದಿಗಳ ನೇತೃತ್ವದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಜ.13 ರಿಂದ 15 ರವರೆಗೆ ಏರ್ಪಡಿಸಿದ ಬಸವಧರ್ಮ ದರ್ಶನ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಖಜೂರಿ ಕೋರಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳ ಹೇಳಿದ್ದು ಹೀಗೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ವಿರಕ್ತಮಠಗಳು ಭಕ್ತಾದಿಗಳ ಬೆವರು ಸುರಿಸಿದ ದುಡ್ಡಿನಲ್ಲಿ, ಅವರ ಕಾಣಿಕೆಯಲ್ಲಿ ನಿರ್ಮಾಣವಾಗಿವೆ. ಅವುಗಳ ಯಾವಾಗಲು ಸಾರ್ವಜನಿಕ ಸ್ವತ್ತಾಗಬೇಕು, ಹೊರತು ವೈಯಕ್ತಿಕ ಮಠಾಧೀಶರ ಆಸ್ತಿಗಳಲ್ಲ. ಅದನ್ನು ವಿರಕ್ತ ಮಠಾಧಿಪತಿಗಳು ಅರಿತುಕೊಂಡು ನಡೆಯಬೇಕಿದೆ ಎಂದು ಖಜೂರಿ ಕೋರಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು ನುಡಿದರು.

ತಾಲೂಕಿನ ಹೊಸಕೇರಿ-ಬಸವ ನಗರದಲ್ಲಿ ಶನಿವಾರ ಫಲಹಾರೇಶ್ವರ ಸಮಗ್ರ ಅಭಿವೃದ್ಧಿ ಟ್ರಸ್ಟ್ ಕಮಿಟಿ ಕೋರಣೇಶ್ವರ ಮಠದ ಭಕ್ತಾದಿಗಳ ನೇತೃತ್ವದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಜ.13 ರಿಂದ 15 ರವರೆಗೆ ಏರ್ಪಡಿಸಿದ ಬಸವಧರ್ಮ ದರ್ಶನ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಫಲಹಾರ ಶಿವಯೋಗಿಗಳ ಸಂಚಾರಿ ಪುರಾಣ ಕಾರ್ಯಕ್ರಮ ಹಾಕಿಕೊಂಡು ಈ ಭಾಗದ ಭಕ್ತರದಲ್ಲಿ ಧರ್ಮ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ವ ಭಕ್ತಾಧಿಗಳೊಂದಿಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಜಗಜ್ಯೋತಿ ಬಸವೇಶ್ವರರ ತತ್ವಗಳನ್ನು ಪಾಲಿಸಿದ ಫಲಹಾರ ಶಿವಯೋಗಿಗಳು ಹೊಸಕೇರಿ ತಪೋಭೂಮಿಯಲ್ಲಿ ತಪಸ್ಸು ಮಾಡಿದ ಪ್ರತಿಫಲವಾಗಿ ಮುಂಬರುವ ದಿನಗಳಲ್ಲಿ ಭಕ್ತಾದಿಗಳ ಪರಿಶ್ರಮ, ಭಕ್ತಿಯ ಪರಾಕಾಷ್ಠೆಯಲ್ಲಿ ಹೊಸಕೇರಿ-ಬಸವ ನಗರ ಜಾಗೃತ ಕ್ಷೇತ್ರವಾಗಿ ಹೊರಹೊಮ್ಮಲಿದೆ ಎಂದು

ಹೊಸಕೇರಿ ಬಸವನಗರ ಗ್ರಾಮದ ಯುವ ಮುಖಂಡ ಪ್ರಕಾಶ ತಳವಾರ ಸಸಿಗೆ ನೀರುಣಿಸುವ ಮೂಲಕ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದರು.ಸಮಾರಂಭದ ಸಮ್ಮುಖ ವಹಿಸಿದ್ದ ಮಾತೆ ನೀಲಲೋಚನ ತಾಯಿ ಆಶೀರ್ವಚನ ನೀಡಿದರು. ವೇದಮೂರ್ತಿ ಬಸವಕುಮಾರ ಶಾಸ್ತ್ರಿಗಳು ಪ್ರವಚನ ನೀಡಿದರು. ಪತ್ರಕರ್ತ ಗೌಡಪ್ಪಗೌಡ ಪಾಟೀಲ ಮಾತನಾಡಿದರು.

ಗ್ರಾಪಂ ಮಾಜಿ ಸದಸ್ಯ ಶಿವಪ್ಪ ಕಿತ್ತಲಿ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷೆ ಶಂಕ್ರವ್ವ ತಳವಾರ ಅಧ್ಯಕ್ಷತೆ ವಹಿಸಿದ್ದರು. ಉಮೇಶ ಕನಕನ್ನವರ ಜ್ಯೋತಿ ಬೆಳಗಿಸಿದರು.

ವೇದಮೂರ್ತಿ ಮಹಾಲಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಂಗಪ್ಪ ಕಿತ್ತಲಿ, ಬಸಪ್ಪ ಗಾಡದ, ಉಮೇಶ ಕನಕನ್ನವರ, ಈರಪ್ಪ ಮಲಕನ್ನವರ, ಬಾಲಪ್ಪ ಕನಕನ್ನವರ, ಹುಸೇನಸಾಬ ಖಾಕಂಡಕಿ, ನಿಂಗಪ್ಪ ಕಿತ್ತಲಿ, ದೊಡ್ಡನಿಂಗಪ್ಪ ತಳವಾರ, ಶಂಕರ ಅಂಗಡಿ, ಪ್ರತಾಪ ಕನಕನ್ನವರ, ಬಾಲಪ್ಪ ಕನಕನ್ನವರ, ಬಸವರಾಜ ಹುಲ್ಲೂರ, ಮಹಾಂತೇಶ ಹೂಗಾರ, ಈರಣ್ಣ ಹೂಗಾರ ಸೇರಿದಂತೆ ಇತರಿದ್ದರು. ರವಿ ಜಾಲಪ್ಪನವರ ಸ್ವಾಗತಿಸಿದರು.