ಚಾಮರಾಜನಗರದಲ್ಲಿ ವೀರಮದಕರಿ ನಾಯಕರ ಜಯಂತಿ ಆಚರಣೆ

| Published : Oct 14 2024, 01:31 AM IST

ಚಾಮರಾಜನಗರದಲ್ಲಿ ವೀರಮದಕರಿ ನಾಯಕರ ಜಯಂತಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಡಳಿತ ಮಾಡುವ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಿ, ಸಮುದಾಯದಿಂದಲೇ ಅದ್ಧೂರಿ ವಾಲ್ಮೀಕಿ ಜಯಂತಿ ಆಚರಣೆಗೆ ಚಾಮರಾಜನಗರದಲ್ಲಿ ನಾಯಕ ಸಮುದಾಯದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದಲ್ಲಿ ನಾಯಕ ಸಮುದಾಯದ ವತಿಯಿಂದ ವೀರಮದಕರಿ ನಾಯಕ ಜಯಂತಿ ಆಚರಿಸಲಾಯಿತು.ನಾಯಕ ಸಮುದಾಯದ ಬಹು ವರ್ಷಗಳ ಬೇಡಿಕೆಯಾದ ಶ್ರೀವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿರುವ ಕಾರಣದಿಂದ ಜಿಲ್ಲಾಡಳಿತ ಮಾಡುವ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಿ, ಸಮುದಾಯದಿಂದಲೇ ಅದ್ಧೂರಿ ವಾಲ್ಮೀಕಿ ಜಯಂತಿ ಆಚರಣೆಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ನಾಯಕರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ನಾಯಕ ಸಮುದಾಯದ ಮುಖಂಡರ ಸಭೆಯಲ್ಲಿ ವೀರಮದಕರಿ ನಾಯಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಜಿಲ್ಲಾಡಳಿತ ನಮ್ಮ ಬೇಡಿಕೆ ಈಡೇರಿಸದ ಕಾರಣದಿಂದ ಸರ್ಕಾರಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಬಹಿಷ್ಕಾರ ಮಾಡಿ ಜಿಲ್ಲಾ ಕೇಂದ್ರದಲ್ಲಿ ಸಮುದಾಯದ ವತಿಯಿಂದಲೇ ಅದ್ಧೂರಿ ವಾಲ್ಮೀಕಿ ಜಯಂತಿ ಆಚರಣೆಗೆ ತೀರ್ಮಾನಿಸಲಾಯಿತು.

ಸಭೆಯ ನೇತೃತ್ವ ವಹಿಸಿದ್ದ ನಾಯಕರ ವಿದ್ಯಾಭಿವೃದ್ದಿ ಸಂಘದ ಉಪಾಧ್ಯಕ್ಷ ಪು.ಶ್ರೀನಿವಾಸ ನಾಯಕ ಮಾತನಾಡಿ, ಜಿಲ್ಲಾಡಳಿತ ಬಹು ವರ್ಷಗಳಿಂದಲೂ ವಾಲ್ಮೀಕಿ ಪುತ್ಥಳಿ ನಿರ್ಮಿಸಲು ತಾರತಮ್ಯ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು. ಕಾರ್ಯಕ್ರಮ ಬಹಿಷ್ಕಾರ ಮಾಡಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಅಲ್ಲದೆ ಸಮುದಾಯದ ವತಿಯಿಂದ ಅದ್ಧೂರಿ ವಾಲ್ಮೀಕಿ ‌ಜಯಂತಿ ಆಚರಣೆ ಮಾಡಲಾಗುವುದು ಎಂದರು. ಸಭೆಯಲ್ಲಿ ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ. ನಗರಸಭಾ ಅಧ್ಯಕ್ಷ ಎಸ್.ಸುರೇಶ್, ಮುಖಂಡರಾದ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ವಿರಾಟ್ ಶಿವು, ಚೆಂಗುಮಣಿ, ಜಯಸುಂದರ್, ಯ.ರಾಜುನಾಯಕ, ಕಂದಹಳ್ಳಿ ಮಹೇಶ್, ಪಾಳ್ಯ ಜಗದೀಶ್, ಹನೂರು ಪುಟ್ಟವೀರನಾಯಕ, ಸುರೇಶ್ ನಾಗ್, ಉಮಾಶಂಕರ್, ಭೀಮಪ್ಪನಾಯಕ, ಯಳಂದೂರು 10 ಬೀದಿಯ ಯಜಮಾನ ಮೂರ್ತಿ, ಗುಂಡ್ಲುಪೇಟೆ ಸುರೇಶ್ ಕುಮಾರ್, ಮಾಧು, ಇತರರು ಭಾಗವಹಿಸಿದ್ದರು.