ಹಿಂದೂ ಪರಂಪರೆ, ಆಚರಣೆ, ಚಿಂತನೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಸಮಸ್ತ ಹಿಂದೂ ಸಮಾಜ ಜಾಗೃತಿಗಾಗಿ ಬೆಳಗಾವಿ ವಿಭಾಗ ಹಿಂದೂ ಸಮ್ಮೇಳನ ಸಮಿತಿಯು ಜ.18ರ ಸಂಜೆ 5.30ಕ್ಕೆ ಏಕಕಾಲಕ್ಕೆ ನಗರದ ವಿವಿಧೆಡೆ ವಿರಾಟ್‌ ಹಿಂದೂ ಸಮ್ಮೇಳನ ಆಯೋಜಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಿಂದೂ ಪರಂಪರೆ, ಆಚರಣೆ, ಚಿಂತನೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಸಮಸ್ತ ಹಿಂದೂ ಸಮಾಜ ಜಾಗೃತಿಗಾಗಿ ಬೆಳಗಾವಿ ವಿಭಾಗ ಹಿಂದೂ ಸಮ್ಮೇಳನ ಸಮಿತಿಯು ಜ.18ರ ಸಂಜೆ 5.30ಕ್ಕೆ ಏಕಕಾಲಕ್ಕೆ ನಗರದ ವಿವಿಧೆಡೆ ವಿರಾಟ್‌ ಹಿಂದೂ ಸಮ್ಮೇಳನ ಆಯೋಜಿದೆ.

ಛತ್ರಪತಿ ಸಂಭಾಜಿ ಮಹಾರಾಜ ಉದ್ಯಾನದಲ್ಲಿ:

ಕಪಿಲೇಶ್ವರ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ ಉದ್ಯಾನದಲ್ಲಿ ನಡೆಯುವ ಸಮ್ಮೇಳನಕ್ಕೆ ಕೊಲ್ಲಾಪುರದ ಸವ್ಯಸಾಚಿ ಗುರುಕುಲದ ಪ್ರಮುಖ ಆಚಾರ್ಯ ಲಖನ್‌ ಜಾಧವ ಪ್ರಮುಖ ವಕ್ತಾರರಾಗಿ ಆಗಮಿಸುವರು. ಹಿಂದೂ ಸಮ್ಮೇಳನದ ಸಮಿತಿಯ ಅನಿಲ ಚೌಧರಿ ಅಧ್ಯಕ್ಷತೆ ಹಾಗೂ ಹೊನ್ನಿಹಾಳದ ಬೃಹನ್ಮಠದ ಬಸವರಾಜ ಮಹಾರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.ಸುಭಾಷ್ ಚಂದ್ರ ಮೈದಾನದಲ್ಲಿ:

ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಟಿಳಕವಾಡಿ ವತಿಯಿಂದ ನಗರದ ಸುಭಾಷ್ ಚಂದ್ರ ಮೈದಾನ (ಲೇಲೆ ಗೌಂಡ್) ಟಿಳಕವಾಡಿಯಲ್ಲಿ ನಡೆಯುವ ಹಿಂದೂ ಸಮಾವೇಶದಲ್ಲಿ ಬೆಳಗಾವಿಯ ರುದ್ರಕೇಸರಿಮಠದ ಹರಿಗುರು ಮಹಾರಾಜ ಸಾನ್ನಿಧ್ಯ ವಹಿಸಲಿದ್ದಾರೆ. ಬೆಳಗಾವಿಯ ತಿಲಕವಾಡಿ ಹಿಂದೂ ಸಮಾಜದ ಕೃಷ್ಣಾ ಆಶ್ರಯ ದಾಸ್ ಇಸ್ಕಾನ್ ಕಾರ್ಯಕ್ರಮದ ಆಯೋಜಕರಾಗಿದ್ದಾರೆ. ಅಧ್ಯಕ್ಷ ರೋಹನ ಜವಳಿ, ಉಪಾಧ್ಯಕ್ಷ ವಸಂತ್ ಹೆಬ್ಬಾಳ್ಳರ್, ಉಪಾಧ್ಯಕ್ಷ ಸುರೇಶ ಪಾಟೀಲ್, ಕಾರ್ಯದರ್ಶಿ ಸುನಿಲ್ ನಾಡಗೌಡ ಭಾಗವಹಿಸಲಿದ್ದಾರೆ.ಸಂತ ಮೀರಾ ಇಂಗ್ಲಿಷ್‌ ಮಾಧ್ಯಮ ಶಾಲಾ ಮೈದಾನದಲ್ಲಿ:

ಅನಗೋಳ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಸಂತ ಮೀರಾ ಇಂಗ್ಲಿಷ್‌ ಮಾಧ್ಯಮ ಶಾಲಾ ಮೈದಾನದಲ್ಲಿ ನಡೆಯುವ ಹಿಂದೂ ಸಮ್ಮೇಳನದ ಸಾನ್ನಿಧ್ಯವನ್ನು ರುದ್ರಸ್ವಾಮಿಗಳ ಮಠ ಚನ್ನಬಸವ ದೇವರು ವಹಿಸಲಿದ್ದಾರೆ. ಹಿಂದೂ ಸೇನಾ ರಾಷ್ಟ್ರೀಯ ಅಧ್ಯಕ್ಷ ಧನ್ಮಜಯಭಾಯಿ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉತ್ತರ ಕರ್ನಾಟಕ ರಾ.ಸ್ವ.ಸಂಘ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ದಿಕ್ಷೂಚಿ ಭಾಷಣ ಮಾಡಲಿದ್ದಾರೆ. ನ್ಯಾಯವಾದಿ ಜಯಶ್ರೀ ಮಂಡೋಳಿ ವಕ್ತಾರಾಗಿ ಆಗಮಿಸಿಲ್ಲಿದ್ದಾರೆ. ಅಧ್ಯಕ್ಷ ದಿಗಂಬರ ರಾವೂಳ, ಉಪಾಧ್ಯಕ್ಷರು ಪ್ರಕಾಶ ಪೂಜಾರಿ, ಸುರೇಶ ಖರ್ಡೆ, ನಾಗೇಶ ಚಿಕ್ಕಮಠ, ಏಕನಾಥ್ ಚೌಗುಲೆ, ಹೇಮಾ ಅಂಬೇವಾಡಿಕರ, ಕಾರ್ಯದರ್ಶಿ ರಘುನಂದನ ಕೊಂಡೆಬೆಟ್ಟು ಭಾಗವಹಿಸಲಿದ್ದಾರೆ. ಬಿ.ಕೆ.ಮಾಡೆಲ್ ಶಾಲೆ ಮೈದಾನದಲ್ಲಿ:

ಬೆಳಗಾವಿ ವಿಭಾಗ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ನಗರದ ಬಿ.ಕೆ.ಮಾಡೆಲ್ ಶಾಲೆ ಮೈದಾನದಲ್ಲಿ ನಡೆಯುವ ಹಿಂದೂ ಸಮ್ಮೇಳನದಲ್ಲಿ ಕಾಡಸಿದ್ದೇಶ್ವರ ಮಠದ ಕೃಪಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬೆಳಗಾವಿ ವಿಭಾಗದ ಹಿಂದೂ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ನಾಗನಾಥ ಸ್ವಾಮೀಜಿ ಆಗಮಿಸಲಿದ್ದಾರೆ. ರಾ.ಸ್ವ.ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವಿಂದ್ರ ಪ್ರಮುಖ ವಕ್ತಾರರಾಗಿ ಆಗಮಿಸಲಿದ್ದಾರೆ. ಅಧ್ಯಕ್ಷ ಅ‌ರ್.ಎನ್.ಹರಗುಡೆ, ರಾಜ್ಯಾಧ್ಯಕ್ಷ ಕಾರ್ಯದರ್ಶಿ ಪ್ರಸಾದ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಸಮಾವೇಶ ನಿಮಿತ್ತ ವಿವಿಧ ಕಾರ್ಯಕ್ರಮಗಳು:

ಭಾರತೀಯರಲ್ಲಿ ಸಾಮಾಜಿಕ ಸಾಮರಸ್ಯ, ಉತ್ತಮ ಕುಟುಂಬ ಸಂಸ್ಕಾರ, ಪರಿಸರ ಸಂರಕ್ಷಣೆ, ಸ್ವದೇಶಿ ಭಾವ ಮತ್ತು ನಾಗರಿಕ ಶಿಷ್ಟಾಚಾರದ ಆಚರಣೆಗಳ ಕುರಿತಾಗಿ ಜಾಗೃತಿ ಮೂಡಿಸಿ ಈ ಪಂಚ ಅಂಶಗಳನ್ನು ದಿನ ನಿತ್ಯದ ಜೀವನದಲ್ಲಿ ಎಲ್ಲರೂ ಪಾಲಿಸುವಂತೆ ಪ್ರತಿಜ್ಞೆ ಬೋಧಿಸಲಾಗುವುದು.ವಿವಿಧ ಸ್ಪರ್ಧೆ:

ವಿರಾಟ ಹಿಂದೂ ಸಮಾವೇಶದ ನಿಮಿತ್ತ ಅನೇಕ ಸ್ಪರ್ಧೆಗಳನ್ನು ಕೂಡಾ ಆಯೋಜಿಸಲಾಗಿದೆ. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಕಲೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರಿಗೆ ಸನ್ಮಾನ ಜರುಗುವುದು.ಶೋಭಾಯಾತ್ರೆ:

ಕಾರ್ಯಕ್ರಮದ ಮುನ್ನ ಮಧ್ಯಾಹ್ನ 3.30ಕ್ಕೆ ನಗರದ ಶಿವಾಜಿ ಉದ್ಯಾನ ಮಾರ್ಗದಿಂದ ಎಸ್‌ಪಿಎಂ ರಸ್ತೆ, ಕಪಿಲೇಶ್ವರ ಮಂದಿರ, ಮಹಾದ್ವಾರ ರಸ್ತೆ ಮೂಲಕ ಶೋಭಾಯಾತ್ರೆ ಜರುಗಲಿದೆ. ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ಮಂಡಳಿಗಳು, ಮಕ್ಕಳಿಂದ ಮಹಾಪುರಷರ ಛದ್ಮವೇಷ, ಹೀಗೆ ಅನೇಕ ಸಂಗತಿಗಳಿಂದ ಕೂಡಿದ ಭವ್ಯ ಮೆರವಣಿಗೆಯನ್ನು ಶೋಭಾಯಾತ್ರೆ ಒಳಗೊಂಡಿರುತ್ತದೆ.ಸಾಮೂಹಿಕ ಹನುಮಾನ ಚಾಲೀಸಾ ಪಠಣ:

ವಿರಾಟ ಹಿಂದೂ ಸಮ್ಮೇಳನದ ನಿಮಿತ್ತ ಜ.17 ರಂದು ನಗರದ ವಿವಿಧ ಹನುಮಾನ ಮಂದಿರಗಳಲ್ಲಿ ಸಂಜೆ ಸಮಯದಲ್ಲಿ ಸಾಮೂಹಿಕ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮ ಆಯೋಜಿಸಲಾಗಿದೆ.