ಕನ್ನಡ ಸಾಹಿತ್ಯಕ್ಕೆ ವಿಸಾಜಿ ಕೊಡುಗೆ ಅಪಾರ: ಪ್ರೊ. ಹೆಬ್ಬಾಳೆ

| Published : Sep 28 2024, 01:31 AM IST

ಕನ್ನಡ ಸಾಹಿತ್ಯಕ್ಕೆ ವಿಸಾಜಿ ಕೊಡುಗೆ ಅಪಾರ: ಪ್ರೊ. ಹೆಬ್ಬಾಳೆ
Share this Article
  • FB
  • TW
  • Linkdin
  • Email

ಸಾರಾಂಶ

Visaji's contribution to Kannada literature is immense: Prof. Hebbale

-ಕರ್ನಾಟಕ ಸಾಹಿತ್ಯ ಸಂಘದಿಂದ ಸಾಹಿತಿ ಪ್ರೊ. ಜಿ.ಬಿ. ವಿಸಾಜಿ ಅವರ ನುಡಿ ನಮನ ಕಾರ್ಯಕ್ರಮ

--------

ಕನ್ನಡಪ್ರಭ ವಾರ್ತೆ ಬೀದರ್‌ಕರ್ನಾಟಕ ಗಡಿ ಭಾಲ್ಕಿಯಲ್ಲಿರುವ ಸಿಬಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರೊ. ಜಿ.ಬಿ. ವಿಸಾಜಿ ಅವರ ನಿಧನ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟ ಎಂದು ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ ಪ್ರೊ. ಜಗನ್ನಾಥ ಹೆಬ್ಬಾಳೆ ಹೇಳಿದರು.

ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಸಾಹಿತ್ಯ ಸಂಘದಿಂದ ಆಯೋಜಿಸಿದ ಹಿರಿಯ ಸಾಹಿತಿ ಪ್ರೊ. ಜಿ.ಬಿ. ವಿಸಾಜಿ ಅವರ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದ ಅನೇಕ ಉದಯೋನ್ಮುಖ ಬರಹಗಾರರನ್ನು ಬೆಳಸಿದ್ದಾರೆ. ವೇದಿಕೆಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ. ಭಾಲ್ಕಿಯ ಹಿರೇಮಠ ಸಂಸ್ಥಾನದೊಂದಿಗೆ ಕನ್ನಡದ ಕಾರ್ಯಕ್ರಮ ನಡೆಸಿದ್ದಾರೆ. ಮಠದ ಕಾರ್ಯಕ್ರಮಗಳಿಗೆ ಪ್ರೊ. ವಿಸಾಜಿ ಅವರ ಸೇವೆ ಕಡ್ಡಾಯವಾಗಿರುತ್ತಿತ್ತು ಎಂದರು.

ಬೀದರ್‌ನ ಕರ್ನಾಟಕ ಕಾಲೇಜಿನ ಎಂ.ಎ. ಕನ್ನಡ ತರಗತಿಗಳ ವಿದ್ಯಾರ್ಥಿಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಬೋಧನೆ ಮಾಡಿದ್ದು ಇನ್ನೂ ಹಿರಿಯ ವಿದ್ಯಾರ್ಥಿಗಳು ನೆನಪಿಸಿಕೊಳ್ಳುತ್ತಾರೆ. ಪ್ರೊ. ವಿಸಾಜಿ ಅವರು ನಮಗೆಲ್ಲ ಮಾದರಿ ಪ್ರಾಧ್ಯಾಪಕರೇ ಆಗಿದ್ದರೆಂದು ಪ್ರೊ. ಹೆಬ್ಬಾಳೆ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರೊ. ದೇವಿದಾಸ ತುಮಕುಂಟೆ, ಪ್ರೊ. ಎಸ್.ಬಿ. ಬಿರಾದಾರ, ಶಂಕರೆಪ್ಪ ಹೊನ್ನಾ, ಡಾ. ರಾಜಕುಮಾರ ಹೆಬ್ಬಾಳೆ, ಡಾ. ಸುರೇಖಾ ಬಿರಾದಾರ, ಎಸ್.ಬಿ. ಕುಚಬಾಳ, ಡಾ. ಸುನಿತಾ ಕೂಡ್ಲಿಕರ್, ನಾಟಕ ಕಂಪನಿ ಮಾಲಿಕರಾದ ಬಸವರಾಜ ಮುಂತಾದವರು ಪ್ರೊ. ವಿಸಾಜಿ ಕುರಿತು ಮಾತನಾಡಿದರು.

ವೀರಶೆಟ್ಟಿ ಮಣಗೆ, ಜಗನ್ನಾಥ ಪಾರಾ, ವೈಜಿನಾಥ ರಾಗಾ, ಶಿವಶರಣಪ್ಪ ಗಣೇಶಪೂರ, ಡಾ. ಸಾವಿತ್ರಿ ಹೆಬ್ಬಾಳೆ, ಪ್ರಕಾಶ ಕನ್ನಾಳೆ, ಶಿವರಾಜ ಮುದ್ದಾ, ಬಸವರಾಜ ಚಿಮಕೋಡೆ, ಉಮೇಶ ಮಾನಶೆಟ್ಟಿ, ಶಿವಕುಮಾರ ಕಮಠಾಣೆ, ಡಾ. ವಿಶಾಲ ಹೆಬ್ಬಾಳೆ, ಶಿವಾನಂದ ಗುಂದಗಿ, ಡಾ. ಸಂಜೀವಕುಮಾರ ಜುಮ್ಮಾ, ಡಾ. ಅಶೋಕ ಕೋರೆ, ಪತ್ರಕರ್ತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಡಾ. ಸಂಜೀವಕುಮಾರ ತಾಂದಳೆ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರೆ. ಜಂಟಿ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ವಂದಿಸಿದರು.

--

ಚಿತ್ರ 27ಬಿಡಿಆರ್52

ಬೀದರ್ ನಲ್ಲಿ ಕರ್ನಾಟಕ ಸಾಹಿತ್ಯ ಸಂಘದಿಂದ ಹಿರಿಯ ಸಾಹಿತಿ ಪ್ರೊ. ಜಿ.ಬಿ. ವಿಸಾಜಿ ಅವರ ನುಡಿ ನಮನ ಕಾರ್ಯಕ್ರಮ ನಡಡೆಯಿತು.

--