ಸಾರಾಂಶ
ಹಿಂದೂ ಮಲೆಯಾಳಿ ಸಂಘದಿಂದ ವಿಷು ಕಣಿ ಹಾಗೂ ವಿಷು ಕೈನೀಟಂ ಅದ್ಧೂರಿಯಾಗಿ ನಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಯ ಹಿಂದೂ ಮಲಯಾಳಿ ಸಂಘದ ವತಿಯಿಂದ ವಿಷು ಕಣಿ ಹಾಗೂ ವಿಷು ಕೈನೀಟಂ ಅದ್ದೂರಿಯಾಗಿ ನಡೆಯಿತು.ಸಂಘದ ಕಚೇರಿಯಲ್ಲಿ ವಿಷು ಹಬ್ಬದ ಪ್ರಯುಕ್ತ ವಿಷು ಹಬ್ಬಕ್ಕೆ ಮುಖ್ಯವಾಗಿ ಬೇಕಾದಂತಹ (ಕೊನ್ನ ಪೂ) ಹೊನ್ನೇ ಹೂವನ್ನು ಜನಾಂಗ ಬಾಂಧವರಿಗೆ ವಿತರಣೆ ಮಾಡಲಾಯಿತು.
ಈ ಸಂದರ್ಭ ಹಿಂದೂ ಮಲಯಾಳಿ ಸಂಘ ಅಧ್ಯಕ್ಷ ಅನಿಲ್, ಮಹಿಳಾ ಅಧ್ಯಕ್ಷೆ ಸುಮಿತ್ರಾ, ಕಾರ್ಯದರ್ಶಿ ರಾಮು, ಉಪಾಧ್ಯಕ್ಷ ಅಭಿಲಾಷ್, ಖಜಂಚಿ ಮಣಿ, ಸಂಘಟನಾ ಕಾರ್ಯದರ್ಶಿ ಸತೀಶ್, ಚೇತನ್, ಮುಖ್ಯ ಅತಿಥಿಗಳಾಗಿ ಮುತ್ತಪ್ಪ ದೇವಾಲಯದ ಅಧ್ಯಕ್ಷ ಚಂದ್ರ ಮತ್ತು ವಿನಿಲ್, ಮನ್ಮದನ್ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಮಲಯಾಳಿ ಬಾಂಧವರು ಪಾಲ್ಗೊಂಡಿದ್ದರು.