ವಾಸ್ತು ಶಿಲ್ಪಕ್ಕೆ ವಿಶ್ವ ಕರ್ಮರ ಕೊಡುಗೆ ಅಪಾರ

| Published : Sep 18 2024, 01:49 AM IST

ಸಾರಾಂಶ

ಕಲೆ ಮತ್ತು ವಾಸ್ತು ಶಿಲ್ಪದಲ್ಲಿ ವಿಶ್ವ ಕರ್ಮರ ಕೊಡುಗೆ ಅಪಾರವಾಗಿದೆ ಎಂದು ರಾಮಚಂದ್ರ ಬಡಿಗೇರ ಹೇಳಿದರು.

ಕಲಾದಗಿ: ಕಲೆ ಮತ್ತು ವಾಸ್ತು ಶಿಲ್ಪದಲ್ಲಿ ವಿಶ್ವ ಕರ್ಮರ ಕೊಡುಗೆ ಅಪಾರವಾಗಿದೆ ಎಂದು ರಾಮಚಂದ್ರ ಬಡಿಗೇರ ಹೇಳಿದರು.

ಶಾರದಾಳ ಗ್ರಾಮದಲ್ಲಿನ ವಿಶ್ವಕರ್ಮ ಸಮಾಜದವರು ಆಯೋಜಿಸಿದ್ದ ವಿಶ್ವಕರ್ಮರ ಜಯಂತಿಯಲ್ಲಿ ಅವರು ಮಾತನಾಡಿದರು.ಶ್ರೀ ದ್ಯಾಮವ್ವದೇವಿ ದೇವಸ್ಥಾನದಲ್ಲಿ ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಆರತಿ ಹಿಡಿದು ಭಕ್ತಿ ಭಾವಮೆರೆದರು.ಈ ವೇಳೆ ನಿಂಗಪ್ಪ ಬಡಿಗೇರ, ಮಲ್ಲಪ್ಪ ಬಡಿಗೇರ, ವಿ.ಐ.ಕಂಬಾರ, ಬಸವರಾಜ ಬಡಿಗೇರ, ಸುಖದೇವ ಬಡಿಗೇರ, ರಮೇಶ ಬಡಿಗೇರ, ನಾಗಪ್ಪ ಬಡಿಗೇರ, ವಿಠ್ಠಲ ಬಸುನಾಯಕ, ದುಸ್ಸಂಗೆಪ್ಪ ಕೊಪ್ಪದ, ನಿಂಗಪ್ಪ ಬಟಕುರ್ಕಿ ಇನ್ನಿತರರು ಇದ್ದರು.