ವಿಶ್ವಕರ್ಮರು ವಿಶ್ವಮಾನ್ಯರು: ತಹಸೀಲ್ದಾರ್‌

| Published : Sep 18 2024, 01:53 AM IST

ವಿಶ್ವಕರ್ಮರು ವಿಶ್ವಮಾನ್ಯರು: ತಹಸೀಲ್ದಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಕರ್ಮರು ವಿಶ್ವಮಾನ್ಯರು. ಅವರು ವಿಶ್ವದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಸೇವೆಯನ್ನು ನೀಡಿರುತ್ತಾರೆ. ಹಾಗಾಗಿ ವಿಶ್ವಕರ್ಮ ಸಮಾಜದವರನ್ನು ವಿಶ್ವಮಾನ್ಯರು ಎಂದು ಕರೆಯಲಾಗಿದೆ ಎಂದು ತಹಸೀಲ್ದಾರ್ ಕುಂ.ಇ.ಅಹಮದ್ ಹೇಳಿದರು

ಕನ್ನಡಪ್ರಭ ವಾರ್ತೆ ತುರುವೇಕೆರೆ

ವಿಶ್ವಕರ್ಮರು ವಿಶ್ವಮಾನ್ಯರು. ಅವರು ವಿಶ್ವದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಸೇವೆಯನ್ನು ನೀಡಿರುತ್ತಾರೆ. ಹಾಗಾಗಿ ವಿಶ್ವಕರ್ಮ ಸಮಾಜದವರನ್ನು ವಿಶ್ವಮಾನ್ಯರು ಎಂದು ಕರೆಯಲಾಗಿದೆ ಎಂದು ತಹಸೀಲ್ದಾರ್ ಕುಂ.ಇ.ಅಹಮದ್ ಹೇಳಿದರು. ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ಭಗವಾನ್ ವಿಶ್ವಕರ್ಮ ಜಯಂತಿ ಅಂಗವಾಗಿ ನಡೆದ ಪೂಜಾ ಕಾರ್ಯದಲ್ಲಿ ಅವರು ಭಾಗಿಯಾಗಿ ಮಾತನಾಡುತ್ತಿದ್ದರು. ವಿಶ್ವಕರ್ಮ ಸಮಾಜದಲ್ಲಿ ಸಾಕಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರ ಪುನಶ್ವೇತನಕ್ಕಾಗಿ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇದನ್ನು ವಿಶ್ವಕರ್ಮ ಸಮುದಾಯದವರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ವಿಶ್ವಕರ್ಮ ಸಮುದಾಯದ ಮುಖಂಡ ಗಣಪತಿ ದೇವರಾಜ್ ಮಾತನಾಡಿ ರಾಜ್ಯದಲ್ಲಿ ಭಗವಾನ್ ವಿಶ್ವಕರ್ಮ ಜಯಂತಿ ನಡೆಯಲು ನಮ್ಮ ಸಮುದಾಯದ ನಂಜುಂಡಿಯವರು ಕಾರಣ. ಅವರ ಪರಿಶ್ರಮದಿಂದಾಗಿ ಇಂದು ರಾಜ್ಯಾದ್ಯಂತ ಭಗವಾನ್ ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತಿದೆ. ನಂಜುಂಡಿಯವರ ಶ್ರಮದಿಂದಾಗಿ ವಿಶ್ವಕರ್ಮ ಸಮುದಾಯದ ಕಾರ್ಮಿಕರಿಗೆ ವಿವಿಧ ಸವಲತ್ತುಗಳು ಸರ್ಕಾರದಿಂದ ದೊರೆಯುವಂತಾಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಭಗವಾನ್ ವಿಶ್ವಕರ್ಮ ದೇವರ ಪೋಟೋಗೆ ಪೂಜೆ ಸಲ್ಲಿಸಿ ಸಿಹಿ ಹಂಚಲಾಯಿತು. ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಆಶಾರಾಣಿ ರಾಜಶೇಖರ್, ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ದೇವರಾಜು, ತಾಲೂಕು ಅಧ್ಯಕ್ಷ ಟಿ.ಎನ್.ಅರುಣ್, ಉಪಾಧ್ಯಕ್ಷರಾದ ಪ್ರೇಮ್ ಕುಮಾರ್, ನಾಗರಾಜು, ಕಾರ್ಯದರ್ಶಿ ಸತೀಶ್, ಖಜಾಂಚಿ ಸೀನಾಚಾರ್, ಮುಖಂಡರಾದ ವಿಶ್ವನಾಥ್, ಗೌತಮ್, ಯಶವಂತ್, ನಂದೀಶ್, ಲಿಂಗರಾಜ್, ಪುನೀತ್, ಆಶೋಕ್ ಸೇರಿದಂತೆ ಇತರರು ಇದ್ದರು.