ಸೂರ್ಯ ಪಥ ಆಧರಿಸಿ ಶಿಲ್ಪಕಲೆ ರೂಡಿಸಿಕೊಂಡಿದ್ದ ವಿಶ್ವ ಕರ್ಮರು: ಡಾ.ಕೆ.ಪಿ.ಅಂಶುಮಂತ್

| Published : Sep 18 2024, 01:47 AM IST

ಸೂರ್ಯ ಪಥ ಆಧರಿಸಿ ಶಿಲ್ಪಕಲೆ ರೂಡಿಸಿಕೊಂಡಿದ್ದ ವಿಶ್ವ ಕರ್ಮರು: ಡಾ.ಕೆ.ಪಿ.ಅಂಶುಮಂತ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಸಾವಿರಾರು ವರ್ಷಗಳ ಹಿಂದೆ ವಿಜ್ಞಾನ ಇಷ್ಟು ಮುಂದುವರಿಯದೆ ಇರುವ ಕಾಲದಲ್ಲೇ ವಿಶ್ವ ಕರ್ಮರು ಸೂರ್ಯ ಪಥವನ್ನು ಗುರುತಿಸಿ ವಾಸ್ತು ಶಿಲ್ಪ ಕಲೆ ಮೈಗೂಡಿಸಿಕೊಂಡಿದ್ದರು ಎಂದು ಶಿವಮೊಗ್ಗ ಭದ್ರಾ ಅಚ್ಚು ಕಟ್ಟು ಪ್ರದೇಶದ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌ ತಿಳಿಸಿದರು.

ಸಿಂಸೆಯ ವಿಶ್ವ ಕರ್ಮ ಸಮುದಾಯ ಭವನದಲ್ಲಿ ವಿಶ್ವ ಕರ್ಮ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸಾವಿರಾರು ವರ್ಷಗಳ ಹಿಂದೆ ವಿಜ್ಞಾನ ಇಷ್ಟು ಮುಂದುವರಿಯದೆ ಇರುವ ಕಾಲದಲ್ಲೇ ವಿಶ್ವ ಕರ್ಮರು ಸೂರ್ಯ ಪಥವನ್ನು ಗುರುತಿಸಿ ವಾಸ್ತು ಶಿಲ್ಪ ಕಲೆ ಮೈಗೂಡಿಸಿಕೊಂಡಿದ್ದರು ಎಂದು ಶಿವಮೊಗ್ಗ ಭದ್ರಾ ಅಚ್ಚು ಕಟ್ಟು ಪ್ರದೇಶದ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌ ತಿಳಿಸಿದರು.

ಮಂಗಳವಾರ ಸಿಂಸೆಯ ವಿಶ್ವ ಕರ್ಮ ಸಮುದಾಯ ಭವನದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿಶ್ವ ಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು. ಭಾರತ ದೇಶದ ವಾಸ್ತು ಶಿಲ್ಪ ಕಲೆಗಳಿಂದಲೇ ಪ್ರಪಂಚದಲ್ಲಿ ಗುರುತಿಸಲ್ಪಟ್ಟಿದೆ. ವಿಶ್ವಕರ್ಮರು ಸೃಷ್ಠಿಕರ್ತರಾಗಿದ್ದಾರೆ. ರೈತರ ಬೆನ್ನಲಬಾಗಿದ್ದಾರೆ. ಮನೆ ಕಟ್ಟಲು, ಮದುವೆ ಸಮಾರಂಭದಲ್ಲೂ ವಿಶ್ವಕರ್ಮರು ಬೇಕಾಗುತ್ತದೆ. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರವನ್ನು ವಾಸ್ತು ಶಿಲ್ಪ ಕಲೆ ಮೂಲಕ ಅನಾವರಣ ಗೊಳಿಸುತ್ತಾರೆ. ಈ ಭಾಗದಲ್ಲಿ 300 ವಿಶ್ವ ಕರ್ಮರ ಕುಟುಂಭಗಳಿವೆ. ನಿಮ್ಮ ಮಕ್ಕಳಲ್ಲಿರುವ ಪ್ರತಿಭೆ ಬೆಳೆಯಲು ಪ್ರೋತ್ಸಾಹ ನೀಡಬೇಕು. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ಸರ್ಕಾರದಿಂದಲೇ ವಿಶ್ವ ಕರ್ಮ ಜಯಂತಿ ಆಚರಣೆ ಪ್ರಾರಂಭವಾಯಿತು. ಪ್ರಸ್ತುತ ವಿಶ್ವ ಕರ್ಮ ನಿಗಮ ಸ್ಥಾಪನೆಯಾಗಿದ್ದು ಕಡಿಮೆ ಬಡ್ಡಿಯಲ್ಲಿ 1 ಲಕ್ಷ ರು.ವರೆಗೂ ಸಾಲ ನೀಡುವ ಸೌಲಭ್ಯವಿದೆ. ಇದನ್ನು ವಿಶ್ವ ಕರ್ಮ ಸೇವಾ ಸಂಘದವರು ನಿಮ್ಮ ಸಮಾಜದವರಿಗೆ ಕೊಡಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ವಿಶ್ವ ಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಕೃಷ್ಣಯ್ಯ ಆಚಾರ್‌ ಮಾತನಾಡಿ, ವಿಶ್ವ ಕರ್ಮರು ದೇಶದ, ರಾಜ್ಯದ ಸೃಷ್ಠಿಕರ್ತರಾಗಿದ್ದಾರೆ. ತಾಲೂಕು ವಿಶ್ವ ಕರ್ಮ ಸೇವಾ ಸಂಘ 1991 ರಲ್ಲಿ ಅಧಿಕೃತವಾಗಿ ಪ್ರಾರಂಭವಾಗಿದೆ. ಕಳೆದ 14 ವರ್ಷದಿಂದ ಸರ್ಕಾರವೇ ವಿಶ್ವ ಕರ್ಮ ಜಯಂತಿ ಆಚರಿಸುತ್ತಿದೆ. ಸಮಾಜದ ಹಿರಿಯ ಮುಖಂಡರಾದ ಸುಬ್ರಾಯ ಆಚಾರ್‌, ನಾರಾಯಣ ಆಚಾರ್‌, ಪದ್ಮನಾಭ ಆಚಾರ್‌ ಮುಂತಾದವರ ನಾಯಕತ್ವದಲ್ಲಿ ಸಮಾಜ ಬೆಳೆದಿದೆ. ಸಂಘದ ಮೂಲಕ ಕಾಳಿಕಾಂಬ ದೇವಸ್ಥಾನ ಕಟ್ಟಲು ಪ್ರಾರಂಭಿಸಿ ದ್ದೇವೆ. ಅಂದಾಜು 75 ರಿಂದ 80 ಲಕ್ಷ ರು. ಖರ್ಚಾಗಲಿದೆ. ಸಿಂಸೆಯ ವಿಶ್ವ ಕರ್ಮ ಸಮುದಾಯ ಭವನ ಈಗಾಗಲೇ ನಿರ್ಮಿಸಲಾಗಿದೆ. ಇದಕ್ಕೆ ಬೇಕಾದ ಅಡಿಗೆ ಮನೆಗೆ ಶಾಸಕ ಟಿ.ಡಿ.ರಾಜೇಗೌಡರು 15 ಲಕ್ಷ ರು. ನೀಡುವ ಭರವಸೆ ನೀಡಿದ್ದಾರೆ. ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್‌ ಕಾಳಿಂಕಾಬ ದೇವಸ್ಥಾನಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ವಿಶ್ವ ಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಜೇಶ್‌ ಆಚಾರ್ಯ ವಹಿಸಿದ್ದರು. ಅತಿಥಿಗಳಾಗಿ ತಹಸೀಲ್ದಾರ್‌ ತನುಜ ಚಿ.ಸವದತ್ತಿ, ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್‌, ಗಾಯಿತ್ರಿ ವಿಶ್ವ ಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕೃಷ್ಣಯ್ಯ ಆಚಾರ್‌ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರದೇಶ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌ ಅವರನ್ನು ಸನ್ಮಾನಿಸಲಾಯಿತು. ವಿಶ್ವ ಕರ್ಮ ಸಮಾಜದ ಹಿರಿಯರಾದ ನೇತ್ರಮ್ಮ, ಉಪೇಂದ್ರ, ಗಿರಿಜಮ್ಮ, ಅಮ್ಮಣ್ಣಿ, ಮೋಹನ ಅ‍ವರನ್ನು ಸನ್ಮಾನಿಲಾಯಿತು.ಸೌಮ್ಯ ಸ್ವಾಗತಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಾಸು ಕಾರ್ಯಕ್ರಮ ನಿರೂಪಿಸಿದರು.