ಸಾರಾಂಶ
ತರಕಾರಿ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು, ಹಣ್ಣು ಹಾಗೂ ಎಳೆನೀರು ಮಾರಾಟಗಾರರಿಗೆ ವಿತರಿಸಲಾಯಿತು
ಕನ್ನಡಪ್ರಭ ವಾರ್ತೆ ಮೈಸೂರುಕುವೆಂಪುನಗರದ 47ನೇ ವಾರ್ಡ್ನ ವಿಶ್ವಮಾನವ ಜೋಡಿ ರಸ್ತೆಯ ಸುಮಸುಪಾನ ಉದ್ಯಾನವನದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ತಳ್ಳುಗಾಡಿ ವ್ಯಾಪಾರಸ್ಥರಿಗೆ ಉಚಿತವಾಗಿ 32 ಸ್ಟ್ಯಾಂಡಿಂಗ್ ಕೊಡೆಗಳನ್ನು ವಿತರಿಸಲಾಯಿತು. ತರಕಾರಿ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು, ಹಣ್ಣು ಹಾಗೂ ಎಳೆನೀರು ಮಾರಾಟಗಾರರಿಗೆ ವಿತರಿಸಲಾಯಿತು. ಎಚ್.ವಿ. ರಾಜೀವ್ ಸ್ನೇಹ ಬಳಗದ ಸದಸ್ಯರಾದ ಆರ್. ಕುಮಾರ್ ಮತ್ತು ಕೋರಿ ವೀರೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು. ಆಟೋ ಕುಮಾರ್, ಪ್ರಕಾಶ್, ಆಟೋ ರವಿ ಮೊದಲಾದವರು ಇದ್ದರು.