ಗ್ರಾಪಂ ಸದಸ್ಯರಿಗೆ ದೂರದೃಷ್ಟಿ, ಗುರಿ ತರಬೇತಿ ಶಿಬಿರ

| Published : Feb 12 2024, 01:35 AM IST

ಸಾರಾಂಶ

ಚಳ್ಳಕೆರೆ ತಾಲೂಕಿನ ಸಿದ್ದಾಪುರದ ಅಂಬೇಡ್ಕರ್ ಭವನದಲ್ಲಿ ದೂರದೃಷ್ಠಿ ಮತ್ತು ಗುರಿ ತರಬೇತಿ ಕಾರ್ಯಕ್ರಮ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಗ್ರಾಮೀಣ ಭಾಗಗಳಲ್ಲಿ ಚುನಾಯಿತ ಗ್ರಾಪಂ ಸದಸ್ಯರಿಗೆ ಗ್ರಾಪಂ ಆಡಳಿತದಿಂದ ಅನುಷ್ಠಾನಗೊಳಿಸುವ ಅಭಿವೃದ್ಧಿ ಕಾಮಗಾರಿ, ಸಾರ್ವಜನಿಕ ಸೌಲಭ್ಯಗಳು, ಕಂದಾಯ ವಸೂಲಿ, ಸ್ವಚ್ಛತಾ ಆಂದೋಲನ ಮುಂತಾದ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸದಸ್ಯರಿಗೆ ದೂರದೃಷ್ಠಿ ಮತ್ತು ಗುರಿತರಬೇತಿ ಶಿಬಿರವನ್ನು ಸರ್ಕಾರದ ಸೂಚನೆ ಮೇರೆಗೆ ನಡೆಸಲಾಗುತ್ತಿದ್ದು, ಸದಸ್ಯರು ಶಿಬಿರದಲ್ಲಿ ಭಾಗವಹಿಸಿ ಸಲಹೆ ಸೂಚನೆ ಪಡೆದು ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ರಾಮಚಂದ್ರಪ್ಪ ತಿಳಿಸಿದರು.

ಶುಕ್ರವಾರ ನಗರಂಗೆರೆ ಗ್ರಾಪಂ ವ್ಯಾಪ್ತಿಯ ಸಿದ್ದಾಪುರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ದೂರದೃಷ್ಠಿ ಮತ್ತು ಗುರಿತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿ ಗ್ರಾಪಂ ಮಟ್ಟದಲ್ಲಿ ಇಂತಹ ಶಿಬಿರ ಆಯೋಜನೆ ಮಾಡಲಾಗುತ್ತಿದೆ. ಇದರಿಂದ ಆಡಳಿತ ನಡೆಸುವ ಸದಸ್ಯರು ಮತ್ತು ಅನುಷ್ಠಾನಗೊಳಿಸುವ ಅಧಿಕಾರಿ ಮತ್ತು ಸಿಬ್ಬಂದಿ ನಡುವೆ ಸಾಮರಸ್ಯ ಮೂಡುತ್ತದಲ್ಲದೆ, ಸಾರ್ವಜನಿಕರಿಗೂ ಸಹ ಜಾಗೃತಿ ಮೂಡಿಸುವಲ್ಲಿ ಇದು ಸಹಕಾರಿಯಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ನಾಗವೇಣಿ ಕರಿಯಣ್ಣ ಮಾತನಾಡಿ, ಶಿಬಿರವನ್ನು ಗ್ರಾಪಂ ಸದಸ್ಯರಿಗೆ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಸರ್ಕಾರ ನಿಯಮ ಮತ್ತು ಅನುಷ್ಠಾನ ಕುರಿತಂತೆ ಚುನಾಯಿತ ಸದಸ್ಯರಿಗೆ ಸ್ಪಷ್ಟ ನಿರ್ದೇಶನ ಇರುವುದಿಲ್ಲ. ಇಂತಹ ಶಿಬಿರಗಳಿಂದ ಸದಸ್ಯರು ಹೆಚ್ಚು, ಹೆಚ್ಚು ಕಲಿತು ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸಬಹುದಾಗಿದೆ ಎಂದರು.

ಗ್ರಾಪಂ ಸದಸ್ಯರಾದ ಎನ್.ಮಂಜುನಾಥ, ಅಂಗಡಿ ರಮೇಶ್, ಮಂಗಳಮ್ಮ, ರಂಗಸ್ವಾಮಿ, ರುದ್ರೇಶ್, ಚಂದ್ರಕುಮಾರ್, ಅನೋಡ್ ಗರ್ವನೆನ್ಸ್ ಫೌಂಡೇಶ್‌ನ ಲಿಂಗದೇವರು, ಕ್ರಿಸ್ಟಿಸನ್ನಿ, ಕ್ಷೇತ್ರ ಸಂಯೋಜಕ ಡಿ.ರವಿ, ಎಚ್.ಆರ್.ಮಧು, ಮಧುಸೂಧನ್, ಲಿಂಗರಾಜು ಮುಂತಾದವರಿದ್ದರು.