ಸಿಂಧನೂರು ನಗರಕ್ಕೆ ಉಜ್ಜನಿ ಪೀಠದ ಜಗದ್ಗುರುಗಳ ಭೇಟಿ

| Published : Apr 13 2024, 01:03 AM IST

ಸಾರಾಂಶ

ಸಿಂಧನೂರಿನ ಹಿರಿಯ ವಕೀಲ ಎಂ.ಅಮರೇಗೌಡ ಅವರ ನಿವಾಸಕ್ಕೆ ಉಜ್ಜನಿ ಪೀಠದ ಜಗದ್ಗುರುಗಳಾದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮೀಜಿ ಭೇಟಿ ನೀಡಿದರು

ಸಿಂಧನೂರು: ನಗರದ ಹಿರಿಯ ವಕೀಲ ಎಂ.ಅಮರೇಗೌಡ ಅವರ ನಿವಾಸಕ್ಕೆ ಉಜ್ಜನಿ ಪೀಠದ ಜಗದ್ಗುರುಗಳಾದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮೀಜಿ ಶುಕ್ರವಾರ ಭೇಟಿ ನೀಡಿದರು.

ಇದೇ ಸಂದರ್ಭದಲ್ಲಿ ಎಂ.ಅಮರೇಗೌಡ ಮತ್ತು ರೇಖಾ ಪಾಟೀಲ್ ದಂಪತಿಗಳು ಜಗದ್ಗುರುಗಳ ಪಾದಪೂಜೆ ನೆರವೇರಿಸಿದರು. ಫಲಪುಷ್ಪ ನೀಡಿ ಶ್ರೀಗಳನ್ನು ಸನ್ಮಾನಿಸಲಾಯಿತು. ಉಜ್ಜನಿಯಲ್ಲಿ ಮೇ.12 ರಂದು ಜಾತ್ರಾ ಮಹೋತ್ಸವ, 13 ರಂದು ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿ ಶಿಖರ ತೈಲಾಭಿಷೇಕ, 17ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಲಿದ್ದು, ಈ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದರು.

ರಂಭಾಪುರಿ ಖಾಸಾಶಾಖಾಮಠದ ಸೋಮನಾಥ ಶಿವಾಚಾರ್ಯರು, ಮಸ್ಕಿಯ ಗಚ್ಚಿನಮಠದ ವರರುದ್ರಮುನಿ ಮಹಾಸ್ವಾಮಿ, ರೌಡಕುಂದ ಸಂಸ್ಥಾನ ಹಿರೇಮಠದ ಶಿವಯೋಗಿ ಶಿವಾಚಾರ್ಯರು, ಬಂಗಾರಿ ಕ್ಯಾಂಪಿನ ಡಾ.ಸಿದ್ದರಾಮೇಶ್ವರ ಶರಣರು, ಶಾಸಕ ಹಂಪನಗೌಡ ಬಾದರ್ಲಿ, ಅಮರಯ್ಯ ಸ್ವಾಮಿ ಅಲಬನೂರು, ಬಸವರಾಜ ಸ್ವಾಮಿ ಗೊರೇಬಾಳ, ಡಾ.ಬಿ.ಎನ್.ಪಾಟೀಲ್, ದೊಡ್ಡಬಸನಗೌಡ ಬಾದರ್ಲಿ, ಮುತ್ತು ಪಾಟೀಲ್ ಇದ್ದರು