ಡಿ.ಕೆ. ಶಿವಕುಮಾರ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಭಾಗ್ಯ ಲಭಿಸುತ್ತಿರುವುದು ಸಂತೋಷ ಸಂಗತಿ. ಡಿ.ಕೆ. ಶಿವಕುಮಾರ ಅವರು ಮುಕ್ತಿಮಂದಿರದ ಧರ್ಮಕ್ಷೇತ್ರದ ನಿರ್ಮಾತೃ ವೀರ ಗಂಗಾಧರ ಸ್ವಾಮಿಗಳ ಪರಮ ಭಕ್ತರಾಗಿದ್ದಾರೆ ಮುಕ್ತಿಮಂದಿರ ಧರ್ಮಕ್ಷೇತ್ರದ ಧರ್ಮಾಧಿಕಾರಿ ವಿಮಲರೇಣುಕ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಲಕ್ಷ್ಮೇಶ್ವರ: ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಏ. 19ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಭೇಟಿ ನೀಡಿ, ವೀರಗಂಗಾಧರ ಸ್ವಾಮಿಗಳ ಗದ್ದುಗೆಯ ದರ್ಶನಾಶೀರ್ವಾದ ಪಡೆದು, ತಮ್ಮ ಮನದ ಆಸೆ ಬೇಗ ಈಡೇರುವಂತೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ದರು. ಅದರ ಫಲ ಈಗ ಸಿಕ್ಕಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಧರ್ಮಾಧಿಕಾರಿ ವಿಮಲರೇಣುಕ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಶುಕ್ರವಾರ ''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ಅವರು, ತಮ್ಮ ಸಂತಸ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಭಾಗ್ಯ ಲಭಿಸುತ್ತಿರುವುದು ಸಂತೋಷ ಸಂಗತಿ. ಡಿ.ಕೆ. ಶಿವಕುಮಾರ ಅವರು ಮುಕ್ತಿಮಂದಿರದ ಧರ್ಮಕ್ಷೇತ್ರದ ನಿರ್ಮಾತೃ ವೀರ ಗಂಗಾಧರ ಸ್ವಾಮಿಗಳ ಪರಮ ಭಕ್ತರಾಗಿದ್ದಾರೆ. ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ ಅವರು ವೀರಗಂಗಾಧರ ಸ್ವಾಮಿಗಳ ಗದ್ದುಗೆಯ ಮುಂದೆ ಒಂದು ಗಂಟೆಗಳ ಕಾಲ ಪೂಜೆ ಸಲ್ಲಿಸಿ, ತಮ್ಮ ಮನದಾಳದ ಆಸೆಗಳನ್ನು ಅಜ್ಜನೊಂದಿಗೆ ಹಂಚಿಕೊಂಡಿದ್ದರು. ಅದರ ಫಲವಾಗಿ ಈಗ ಮುಖ್ಯಮಂತ್ರಿಯಾಗಿ ಅಧಿಕಾರ ದೊರೆಯುವ ಕ್ಷಣ ಸನ್ನಿಹಿತವಾಗಿದ್ದು, ನಮಗೆ ಹೆಚ್ಚು ಸಂತೋಷ ತಂದಿದೆ ಎಂದರು.

ರಂಭಾಪುರಿ ಲಿಂ. ವೀರಗಂಗಾಧರ ಸ್ವಾಮಿಗಳು ಮಹಾನ್ ತಪೋನಿಷ್ಠರಾಗಿದ್ದರು. ಅವರ ತ್ರಿಕೋಟಿ ಲಿಂಗಗಳ ಸ್ಥಾಪನೆಯ ಕನಸು ಸದ್ಯದಲ್ಲಿಯೇ ಈಡೇರುವ ಎಲ್ಲ ಕ್ಷಣಗಳು ಹತ್ತಿರವಾಗುತ್ತಿದೆ. ಮುಕ್ತಿಮಂದಿರ ಧರ್ಮಕ್ಷೇತ್ರ ದೇಶದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿ ಮೆರೆಯುವ ದಿನಗಳ ದೂರವಿಲ್ಲ. ವೀರಗಂಗಾಧರ ಸ್ವಾಮಿಗಳ ಶಕ್ತಿ ಅಂತಹದ್ದು ಎಂದರು.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಿ: ಡಾ. ಪುರುಷೋತ್ತಮನಾಂದಪುರಿ ಶ್ರೀ

ಗದಗ: ಉಪ್ಪಾರ ಸಮಾಜ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದೆ. ಇಂತಹ ಸಮಾಜದ ಏಕೈಕ ಶಾಸಕರಾಗಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಭಗೀರಥ ಗುರುಪೀಠದ ಡಾ. ಪುರುಷೋತ್ತಮನಾಂದಪುರಿ ಶ್ರೀಗಳು ಒತ್ತಾಯಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಟ್ಟರಂಗಶೆಟ್ಟಿ ಸತತ ನಾಲ್ಕು ಬಾರಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಟ್ಟರಂಗಶೆಟ್ಟಿ ಅವರಿಗೆ ಈ ಹಿಂದೆ ಸಚಿವ ಸ್ಥಾನ ನೀಡುತ್ತೇವೆ ಅಂತ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಲಿಲ್ಲ. ಈಗ ಮತ್ತೆ ಮಂತ್ರಿ ಮಂಡಲ ಪುನರ್ ರಚನೆ ಆಗಲಿದ್ದು, ಈ ಬಾರಿಯಾದರೂ ನೀಡಲಿ ಎಂದು ಆಗ್ರಹಿಸಿದರು.ಉಪ್ಪಾರ ನಿಗಮದ ಅಧ್ಯಕ್ಷ ಭರಮಣ್ಣ ಇತರರು ಇದ್ದರು.