ವಿಶ್ವೇಶ್ವರಯ್ಯ ದೂರದೃಷ್ಟಿ, ಜನಸ್ನೇಹಿ ಚಿಂತನೆ ಎಲ್ಲರಿಗೂ ಮಾದರಿ

| Published : Sep 17 2025, 01:05 AM IST

ವಿಶ್ವೇಶ್ವರಯ್ಯ ದೂರದೃಷ್ಟಿ, ಜನಸ್ನೇಹಿ ಚಿಂತನೆ ಎಲ್ಲರಿಗೂ ಮಾದರಿ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ, ಲಯನ್ಸ್‌ ಕ್ಲಬ್‌ ಆಫ್‌ ಆರ್‌ಎಲ್‌ಜೆಐ ಸಹಯೋಗದಲ್ಲಿ ರಾಷ್ಟ್ರೀಯ ಅಭಿಯಂತರರ ದಿನ ಆಚರಿಸಲಾಯಿತು.

ದೊಡ್ಡಬಳ್ಳಾಪುರ: ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ, ಲಯನ್ಸ್‌ ಕ್ಲಬ್‌ ಆಫ್‌ ಆರ್‌ಎಲ್‌ಜೆಐ ಸಹಯೋಗದಲ್ಲಿ ರಾಷ್ಟ್ರೀಯ ಅಭಿಯಂತರರ ದಿನ ಆಚರಿಸಲಾಯಿತು.

ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್‌, ದೂರದೃಷ್ಟಿ ಹಾಗೂ ಜನಸ್ನೇಹಿ ಚಿಂತನೆಗಳಿಂದ ವಿಶ್ವೇಶ್ವರಯ್ಯ ನಾಡಿನ ಎಲ್ಲ ವರ್ಗಗಳ ಆಶಾಕಿರಣ. ಅವರ ದೂರಗಾಮಿ ಯೋಜನೆಗಳು ನಾಡಿನ ಪ್ರಗತಿಗೆ ಹೊಸ ದಿಕ್ಕನ್ನು ನೀಡಿದೆ. ಜಗತ್ತೇ ನಿಬ್ಬೆರಗಾಗುವಂತೆ ತಮ್ಮ ಯೋಜನೆಗಳ ಮೂಲಕ ದೇಶ ಸೇವೆ ಮಾಡಿದ ಅವರ ಬದುಕು ಎಲ್ಲರಿಗೂ ಮಾದರಿ. ತೀಕ್ಷ್ಣ ಆಲೋಚನೆಗಳು ಹಾಗೂ ಜನೋಪಯೋಗಿ ಕೆಲಸಗಳಿಂದ ಒಬ್ಬ ಅಭಿಯಂತರ ಹೇಗೆ ಸಾಮಾಜಿಕ ಕಾಳಜಿ ಮೈಗೂಡಿಸಿಕೊಳ್ಳಬೇಕು ಎಂಬುದಕ್ಕೆ ಅವರೇ ಸ್ಪಷ್ಟ ಉದಾಹರಣೆ ಎಂದರು.

ಇದೇ ವೇಳೆ ಹಿರಿಯ ಅಭಿಯಂತರ ಐ.ಎಂ.ರಮೇಶ್‌ಕುಮಾರ್, ಯುವ ಅಭಿಯಂತರ ಮಾರುತಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಡೀನ್‌ ಡಾ.ಶ್ರೀನಿವಾಸರೆಡ್ಡಿ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಕಾಲೇಜಿನ ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಎಸ್‌ಡಿಯುಐಎಂ ಪ್ರಾಂಶುಪಾಲ ಡಾ.ಗೌರಪ್ಪ, ಪಾಲಿಟೆಕ್ನಿಕ್‌ ಪ್ರಾಂಶುಪಾಲ ನರಸಿಂಹರೆಡ್ಡಿ, ಐಟಿಐ ಪ್ರಾಂಶುಪಾಲ ರವಿಕುಮಾರ್, ಪ್ರೌಢಶಾಲೆ ಮುಖ್ಯಶಿಕ್ಷಕ ಜಿಯಾವುಲ್ಲಾ ಖಾನ್, ಪಿಯುಸಿಯ ಜೆ.ವಿ.ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್‌, ವ್ಯವಸ್ಥಾಪಕ ಎಸ್.ಯತಿನ್‌ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

15ಕೆಡಿಬಿಪಿ1-

ದೊಡ್ಡಬಳ್ಳಾಪುರದ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಜಿನಿಯರುಗಳ ದಿನಾಚರಣೆಯಲ್ಲಿ ಕ್ಯಾಂಪಸ್‌ನ ಅಭಿಯಂತರರನ್ನು ಸನ್ಮಾನಿಸಲಾಯಿತು.