ಸಾರಾಂಶ
ಸಿರವಾರ ತಾಲೂಕಿನ ನವಲಕಲ್ ಬೃಹನ್ಮಠದಲ್ಲಿ ವಿವೇಕ ಮಾಲೆ ಧಾರಣೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಸಿರವಾರ
ಭವ್ಯ ಭಾರತ ನಿರ್ಮಾಣಕ್ಕಾಗಿ ಯುವಕರನ್ನು ದುಶ್ಚಟದಿಂದ ಮುಕ್ತರನ್ನಾಗಿಸಲು ಯುವ ಬ್ರಿಗೇಡ್‌ನಿಂದ ಪ್ರತಿವರ್ಷ ವಿವೇಕ ಮಾಲಾಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಸ್ಫೂರ್ತಿದಾಯಕ ಕಾರ್ಯ ಎಂದು ನವಲಕಲ್ ಬೃಹನ್ಮಠದ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ನವಲಕಲ್ ಬೃಹನ್ಮಠದಲ್ಲಿ ಯುವ ಬ್ರಿಗೇಡ್ ತಂಡದಿಂದ ಪ್ರತಿವರ್ಷದಂತೆ ರಾಕ್ ಡೇ ಅಂಗವಾಗಿ ‘ವಿವೇಕ ಮಾಲೆ ಧಾರಣೆ’ ಕಾರ್ಯಕ್ರಮದಲ್ಲಿ ತಮ್ಮ ಅಮೃತ ಹಸ್ತದಿಂದ ಮಾಲೆಯನ್ನು ಹಾಕಿ ಮಾತನಾಡಿದ ಅವರು, ದೇಹ ಸದೃಢವಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದು ವಿವೇಕಾನಂದರ ಸಂದೇಶವಾಗಿದೆ ಎಂದು ತಿಳಿಸಿದರು.
ರಾಕ್ ಡೇ ನಿಮಿತ್ತ ಯುವಬ್ರಿಗೇಡ್ ಆಚರಣೆ ಹಿನ್ನೆಲೆಯಲ್ಲಿ 15ಕ್ಕೂ ಹೆಚ್ಚು ಯುವಕರು ವಿವೇಕ ಮಾಲೆ ಧರಿಸಿದರು.ಸ್ವಾಮೀವಿವೇಕ ನಂದರ ಜನ್ಮದಿನವಾದ ಜ.12 ರವರೆಗೆ ಮಾಲಾಧಾರಣೆಯ ವ್ರತ ನಡೆಯುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಿದ್ಧರಾಮೇಶ್ವರ ಪತ್ತಾರ, ನರಸಿಂಹರಾವ್ ಕುಲಕರ್ಣಿ, ಮಹಾಂತೇಶ ನಾಗಡದಿನ್ನಿ, ಕೆ.ಶ್ರೀನಿವಾಸ್ ಬಸಾಪುರ್, ವಸಂತ ಹಿರೇಮಠ, ಆಕಾಶ ಹಿರೇಮಠ, ಅಯ್ಯನಗೌಡ ಮಾಲಿ ಪಾಟೀಲ್, ಪವನ್ ಕುಮಾರ್ ಪತ್ತಾರ್, ಧರ್ಮತೇಜ್, ಪೃಥ್ವಿ ಪರಂಗಿ, ಗಣೇಶ ಸೇರಿದಂತೆ ಇತರರು ಇದ್ದರು.