ಬೀಳಗಿಯಲ್ಲಿ ಇಂದಿನಿಂದ 2 ದಿನ ವಿವೇಕ ಉತ್ಸವ ಆಚರಣೆ

| Published : Jan 12 2024, 01:45 AM IST

ಬೀಳಗಿಯಲ್ಲಿ ಇಂದಿನಿಂದ 2 ದಿನ ವಿವೇಕ ಉತ್ಸವ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಮಿ ವಿವೇಕಾನಂದರ ೧೬೧ನೇ ಜಯಂತಿ ಪ್ರಯುಕ್ತ ವಿವೇಕ ಉತ್ಸವ-೮ ಜ.೧೨ ಮತ್ತು ೧೩ ಶುಕ್ರವಾರ ಮತ್ತು ಶನಿವಾರ ನಡೆಯಲಿದೆ. ಮುಂಜಾನೆ ೧೦ಗಂಟೆಗೆ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಲಿದೆ ಎಂದು ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಪಾಟೀಲ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀಳಗಿ

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ಅನ್ನದಾತ ಸಹಕಾರಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ೧೬೧ನೇ ಜಯಂತಿ ಪ್ರಯುಕ್ತ ವಿವೇಕ ಉತ್ಸವ-೮ ಜ.೧೨ ಮತ್ತು ೧೩ ಶುಕ್ರವಾರ ಮತ್ತು ಶನಿವಾರ ನಡೆಯಲಿದೆ. ಮುಂಜಾನೆ ೧೦ಗಂಟೆಗೆ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಲಿದೆ ಎಂದು ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಪಾಟೀಲ ತಿಳಿಸಿದ್ದಾರೆ.

ಜ.೧೨ ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ಕರ್ನಾಟಕ ರಾಜ್ಯ ಗಣಿತ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನೆ ಹಾಗೂ ಗಣಿತ ಪ್ರಯೋಗಾಲಯದ ಕಿಟ್ ಅನಾವರಣ ಕಾರ್ಯಕ್ರಮದಲ್ಲಿ ಮರೇಗುದ್ದಿ ಅಡವಿ ಸಿದ್ದೇಶ್ವರ ಮಠದ ಶ್ರೀ ನಿರುಪಾಧೀಶ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಎಸ್.ಆರ್.ಪಾಟೀಲ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಸಜನಶೀಲ ಅಧ್ಯಾಪನ ಕೇಂದ್ರ ಅಧ್ಯಕ್ಷ ಡಾ, ಗುರುರಾಜ ಕರಜಗಿ ಕಾರ್ಯಕ್ರಮ ಉದ್ಘಾಟಿಸುವರು.

ಧಾರವಾಡದ ಪ್ರಾದೇಶಿಕ ವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವಿ.ಡಿ.ಬೋಳಿಶೆಟ್ಟಿ ವಿಶೇಷ ಸನ್ಮಾನಿತರು. ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಕೆ.ನಂದನೂರ, ಬಿಇಒ ಆರ್.ಎಸ್.ಆದಾಪೂರ, ಜಿಲ್ಲಾ ಗಣಿತ ಪರಿವೀಕ್ಷಕ ಎಸ್.ಎಸ್.ಹಾಲವರ, ಬಿ.ಆರ್.ಸಿ ಶಿವಾಜಿ ಕಾಂಬಳೆ ಭಾಗವಹಿಸುವರು.

ಜ ೧೩ ಶನಿವಾರ ಬೆಳಗ್ಗೆ ೧೦ಗಂಟೆಗೆ ರೋಬೋಟಿಕ್ ತಂತ್ರಜ್ಞಾನ ಮತ್ತು ಕತಕ ಬುದ್ಧಿಮತ್ತೆ ಕಾರ್ಯಾಗಾರವನ್ನು ಮಾಜಿ ಸಚಿವರು ಹಾಗೂ ಧಾರವಾಡ ಶಾಸಕ ವಿನಯ ಕುಲಕರ್ಣಿ ಉದ್ಘಾಟಿಸುವರು. ಮಾಜಿ ಸಚಿವರು ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮುಳುಗಡೆ ಹಿತರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ಎಸ್.ಟಿ.ಪಾಟೀಲ, ಬೆಂಗಳೂರು ಸಿಇಒ, ಸಿಟ್ಮ್ ಎಕ್ಷ, ಇಂಡಿಯಾ ಫೌಂಡರ್ ನರಸಿಂಹ ನಾಯ್ಡು, ಜಿಲ್ಲಾ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಉಪ ನಿರ್ದೇಶಕ ರಾಜಶೇಖರ ಎನ್.ಪಟ್ಟಣಶೆಟ್ಟಿ, ಶಿಕ್ಷಣ ಜ್ಞಾನ ಪತ್ರಿಕೆ ಸಂಪಾದಕ ಎಸ್.ವಿ.ನಾಗರಾಜ ಭಾಗವಹಿಸುವರು. ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದು ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಎಂ ಎನ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದರು.