ವಿವೇಕಾನಂದರು ಭಾರತದ ಸಂಸ್ಕೃತಿ ಎತ್ತಿಹಿಡಿದ ಮಹಾಜ್ಞಾನಿ: ಡಾ. ಮಲ್ಲಿಕಾರ್ಜುನ

| Published : Jan 14 2024, 01:30 AM IST / Updated: Jan 14 2024, 05:39 PM IST

ವಿವೇಕಾನಂದರು ಭಾರತದ ಸಂಸ್ಕೃತಿ ಎತ್ತಿಹಿಡಿದ ಮಹಾಜ್ಞಾನಿ: ಡಾ. ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಮಿ ವಿವೇಕಾನಂದರು ನಮ್ಮ ದೇಶದ ಮಹಾನ್ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿ, ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ಸರ್ವಧರ್ಮ ಸಮ್ಮೇಳನ-೧೮೯೩ರ ಮೂಲಕ ತಿಳಿಸಿಕೊಟ್ಟು, ಭಾರತವನ್ನು ವಿಶ್ವದಲ್ಲಿ ಎತ್ತಿ ಹಿಡಿದ ಮಹಾಜ್ಞಾನಿ ಎಂದು ಡಾ. ಮಲ್ಲಿಕಾರ್ಜುನ ನಾಯಕ ಹೇಳಿದರು.

ಗದಗ: ಸ್ವಾಮಿ ವಿವೇಕಾನಂದರು ನಮ್ಮ ದೇಶದ ಮಹಾನ್ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿ, ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ಸರ್ವಧರ್ಮ ಸಮ್ಮೇಳನ-೧೮೯೩ರ ಮೂಲಕ ತಿಳಿಸಿಕೊಟ್ಟು, ಭಾರತವನ್ನು ವಿಶ್ವದಲ್ಲಿ ಎತ್ತಿ ಹಿಡಿದ ಮಹಾಜ್ಞಾನಿ ಎಂದು ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ನಾಯಕ ಹೇಳಿದರು.

ನಗರದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ರಾಷ್ಟೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರವರ ವಿಚಾರಗಳನ್ನು ಅಧ್ಯಯನ ಮಾಡಿ, ತಮ್ಮ ಆತ್ಮವಿಶ್ವಾಸ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ದೇಶದ ಭೌತಿಕ ಮತ್ತು ಭೌದ್ಧಿಕ ಪ್ರಗತಿಗೆ ಶ್ರಮಿಸಬೇಕು ಎಂದರು

ದೇಶ ನಿರ್ಮಾಣದಲ್ಲಿ ಹಾಗೂ ವೈಯಕ್ತಿಕ ಸಾಧನೆಯಲ್ಲಿ ಭಾಗವಹಿಸಬೇಕು ಹಾಗೂ ವಿವೇಕಾನಂದರ ಬದುಕಿನ ಆದರ್ಶಗಳನ್ನು ತಮ್ಮೊಳಗಿನ ಆತ್ಮವಿಶ್ವಾಸವನ್ನು ಹಾಗೂ ಸಾಮರ್ಥ್ಯವನ್ನು ಅಳವಡಿಸಿಕೊಳ್ಳಬೇಕು ಹಾಗೂ ದೇಶದ ಸಂಸ್ಕೃತಿಯ ಮೌಲ್ಯಗಳನ್ನು ಪಾಶ್ಚಿಮಾತ್ಯರಿಗೆ ಮನವರಿಕೆ ಮಾಡಿಕೊಟ್ಟಂತ ಮಹಾಜ್ಞಾನಿ. ವಿದ್ಯಾರ್ಥಿಗಳು ವಿವೇಕಾನಂದರವರ ವಿಚಾರಧಾರೆಗಳನ್ನು ಅರ್ಥಮಾಡಿಕೊಂಡು ತಮ್ಮನ್ನು ದೇಶದ ಅಭಿವೃದ್ಧಿಗೆ ಶ್ರಮಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.