ವಿವೇಕಾನಂದರು ಭಾರತ ಸಂಸ್ಕೃತಿ ರಾಯಭಾರಿ

| Published : Jan 13 2024, 01:34 AM IST

ಸಾರಾಂಶ

ಭರತ ಭೂಮಿ ಸಂಸ್ಕೃತಿಯನ್ನು ವಿದೇಶದಲ್ಲೂ ಪಸರಿಸಿದ ಸ್ವಾಮಿ ವಿವೇಕಾನಂದರು ಭಾರತ ಸಂಸ್ಕೃತಿಯ ರಾಯಭಾರಿ ಆಗಿದ್ದಾರೆ ಎಂದು ಯುವ ಚಿಂತಕ ನಂದಾದೀಪ ಬೋರಾಳೆ ಹೇಳಿದರು.

ಔರಾದ್‌: ಭರತ ಭೂಮಿ ಸಂಸ್ಕೃತಿಯನ್ನು ವಿದೇಶದಲ್ಲೂ ಪಸರಿಸಿದ ಸ್ವಾಮಿ ವಿವೇಕಾನಂದರು ಭಾರತ ಸಂಸ್ಕೃತಿಯ ರಾಯಭಾರಿ ಆಗಿದ್ದಾರೆ ಎಂದು ಯುವ ಚಿಂತಕ ನಂದಾದೀಪ ಬೋರಾಳೆ ಹೇಳಿದರು.

ಅವರು ಸಂತಪೂರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಮಾತನಾಡಿ, ಮಹಿಳಾ ಗೌರವ, ಬಡವರ ಪರ ಕಾರ್ಯ, ದೇವರ ಕಲ್ಪನೆ ಇತ್ಯಾದಿಗಳಲ್ಲಿ ಕ್ರಿಯಾಶೀಲ ವಿಚಾರವಾದಿಗಳಾಗಿದ್ದರು ಎಂದರು.

ಪ್ರಾಂಶುಪಾಲ ನವೀಲಕುಮಾರ ಉತ್ಕಾರ್‌ ಮಾತನಾಡಿ, ಕೈಗೊಂಡ ಕಾರ್ಯದಲ್ಲಿ ತನು ಮನ ಸಂಪೂರ್ಣ ಸಮರ್ಪಣೆ ಮಾಡಿದಾಗ ಕಾರ್ಯದಲ್ಲಿ ಯಶಸ್ಸನ್ನು ಖಂಡಿತವಾಗಿ ಪಡೆಯುವಿರಿ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು.

ಉಪನ್ಯಾಸಕ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ರಾಜಕುಮಾರ ಹಳ್ಳಿಕರ್‌, ಮೀರಾತಾಯಿ ಕಾಂಬಳೆ, ಸಂತೋಷ ಮೇತ್ರೆ ಇದ್ದರು. ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಮಾಜಕ್ಕೆ ಅವರ ಕೊಡುಗೆ ಪ್ರಬಂಧದಲ್ಲಿ ಕ್ರಮವಾಗಿ ವಿಜೇತರಾದ ಪೂಜಾ ಹನಮಾರೆಡ್ಡಿ, ಸೋಪಾನ ಕಾಶಿನಾಥ, ರಾಜೇಶ್ವರಿ ಪಂಡಿತ ಸೇರಿದಂತೆ ಮತ್ತಿತರ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.