ಇಡೀ ಜಗತ್ತಿಗೆ ಭಾರತೀಯ ಸಂಸ್ಕೃತಿ ಸಾರಿದ ವಿವೇಕಾನಂದರು

| Published : Jan 14 2024, 01:32 AM IST

ಸಾರಾಂಶ

ಯಮಕನಮರಡಿ ಸಮೀಪದ ಹಿಡಕಲ್ ಡ್ಯಾಮ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ದಾನಿಗಳ ಸತ್ಕಾರ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಸಮೀಪದ ಹಿಡಕಲ್ ಡ್ಯಾಮ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ದಾನಿಗಳ ಸತ್ಕಾರ ಸಮಾರಂಭ ಜರುಗಿತು.

ಹಿಡಕಲ್ ಡ್ಯಾಮ್‌ನ ವಿಶ್ವೇಶ್ವರಯ್ಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಉದಯಕುಮಾರ ಕಮ್ಮಾರ ಮಾತನಾಡಿ, ಸ್ವಾಮಿ ವಿವೇಕಾನಂದರ ಭಾರತೀಯ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಸಾರಿದ್ದಾರೆ. ಯುವ ಪಿಳಿಗೆಯು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭವ್ಯ ಭಾರತ ಕಟ್ಟಲು ಸನ್ನದ್ಧರಾಗಲು ಸಲಹೆ ನೀಡಿದರು.

ಸಿಆರ್‌ಪಿ ರಾಜಗೋಪಾಲ ಮಿತ್ರನ್ನವರ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶಮಯ ಜೀವನ ಅವರ ತತ್ವಗಳನ್ನು ವಿಧ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಎಂದರು.

ಸ್ವಾಮಿ ವಿವೇಕಾನಂದ ಕುರಿತು ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಾಲೆಗೆ ದೇಣಿಗೆ ನೀಡಿದ ಗಣೇಶ ಪೂಜಾರ, ಮುಖ್ಯ ಶಿಕ್ಷಕ ಉದಯಕುಮಾರ ಕಮ್ಮಾರ, ಚಂದ್ರು ಶೆಟ್ಟಿ, ಮಹಾಂತೇಶ ಪಂಚನ್ನವರ, ಶಂಕರ ಮತ್ತಿಕೊಪ್ಪ, ಶ್ರೀಮತಿ ಎಂ. ಎಸ್.ತಳವಾರ ಅವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಶಾಲಾ ಪ್ರಧಾನ ಗುರುಗಳು ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಕುಮಾರ.ಡಿ ಸ್ವಾಗತಿಸಿ, ನಿರೂಪಿಸಿದರು.