ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜೀವನ ಕೌಶಲ ಕಲಿಸುವ ವೃತ್ತಿಶಿಕ್ಷಣ ಸ್ವಾವಲಂಬಿ ಬದುಕಿಗೆ ಗಟ್ಟಿಯಾದ ಬುನಾದಿಯಾಗಿದ್ದು, ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ ಸಹಕಾರಿಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕರಾದ ಎಸ್.ಆರ್.ವೀಣಾ ತಿಳಿಸಿದರು.ನಗರದ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ವೃತ್ತಿಶಿಕ್ಷಣ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಮಾಸಿಕ ಸಭೆ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದರು.ಕಲಿಕೆಯ ಜತೆಗೆ ಗಳಿಕೆ
ಕಲಿಕೆಯ ಜತೆಗೆ ಗಳಿಕೆ ಹಾಗೂ ಸ್ವಾವಲಂಬಿ ಬದುಕಿಗೆ ದಾರಿ ತೋರುವ ಜೀವನ ಶಿಕ್ಷಣವೇ ವೃತ್ತಿ ಶಿಕ್ಷಣವಾಗಿದೆ, ಪಠ್ಯದ ಜತೆಯಲ್ಲೇ ಪಠ್ಯೇತರ ಚಟುವಟಿಕೆಗಳು ಸಹಾ ಸಮಗ್ರ ಶಿಕ್ಷಣದ ಭಾಗವಾಗಿದ್ದು, ಮಕ್ಕಳ ಮುಂದಿನ ಬದುಕಿಗೆ ಆಸರೆಯಾಗುವ ವೃತ್ತಿ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ. ವೃತ್ತಿ ಕೌಶಲ್ಯ ರೂಪಿಸಿಕೊಂಡು ದೇಶದಲ್ಲಿ ಪ್ರತಿಯೊಬ್ಬರೂ ಸ್ವಾವಲಂಬನೆಯಿಂದ ಸದೃಢ ಆರ್ಥಿಕ ಶಕ್ತಿ ರೂಪಿಸಿಕೊಳ್ಳುವಂತಾಗಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಮಾತನಾಡಿ, ಶಾಲೆಗಳಲ್ಲಿ ವೃತ್ತಿಶಿಕ್ಷಣ ಮತ್ತು ದೈಹಿಕ ಶಿಕ್ಷಣ ತರಗತಿಯ ಅವಧಿ ಸದಾ ಪಠ್ಯ ಓದು, ಗೃಹಪಾಠ ಬರೆ ಎಂಬ ಇತರ ವಿಷಯಗಳ ಒತ್ತಡ ಕಡಿಮೆ ಮಾಡಿ ಮಕ್ಕಳಲ್ಲಿ ನೆಮ್ಮದಿ,ಸಂತೃಪ್ತಿ ತಂದುಕೊಡುತ್ತದೆ. ಕೃಷಿ, ತೋಟಗಾರಿಕೆ, ಹೊಲಿಗೆ, ರೇಷ್ಮೆ, ಬಡಗಿ, ಚಿತ್ರಕಲೆ, ಸಂಗೀತ ಮತ್ತಿತರ ತರಗತಿಗಳು ಮಕ್ಕಳಲ್ಲಿ ಕೌಶಲ್ಯ ತುಂಬಿ ಅವರು ಬದುಕುಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುತ್ತವೆ ಎಂದರು.
ಗೃಹ ಕೈಗಾರಿಕೆಗೆ ಒತ್ತು ನೀಡಿವಿಷಯ ಪರಿವೀಕ್ಷ ಸಮೀವುಲ್ಲಾ ಮಾತನಾಡಿ, ಗಾಂಧೀಜಿಯವರ ಕನಸಾದ ಗೃಹ ಕೈಗಾರಿಕೆಗಳನ್ನು ನಾವು ಮರೆತಿದ್ದರಿಂದಲೇ ಇಂದು ನಿರುದ್ಯೋಗ ತಾಂಡವವಾಡುತ್ತಿದೆ, ಬಾಪು ಕನಸಿಕನ ಮೂಲ ಶಿಕ್ಷಣವನ್ನು ನಾವು ಬಲಗೊಳಿಸಬೇಕಾಗಿದೆ ಎಂದು ತಿಳಿಸಿದರು. ವಿಷಯ ಪರಿವೀಕ್ಷಕಿ ಬಬಿತಾ ಮಾತನಾಡಿ, ವೃತ್ತಿಶಿಕ್ಷಕರು ಹಸಿರೀಕರಣ ಮಾಡುವುದು ಮಾತ್ರವಲ್ಲ ಶಾಲೆಯ ವಿವಿಧ ಚಟುವಟಿಕೆಗಳಲ್ಲೂ ಮುಖ್ಯಪಾತ್ರ ವಹಿಸುತ್ತಿದ್ದು, ನಮಗೆ ಪ್ರತ್ಯೇಕ ಪಠ್ಯ ಪುಸ್ತಕ ಇಲ್ಲ, ಈ ಕೊರಗು ನಿವಾರಿಸಲು ಇಲಾಖೆ ಅಗತ್ಯ ಕ್ರಮವಹಿಸಬೇಕು ಎಂದರು.ನಿಕಟಪೂರ್ವ ವಿಷಯ ಪರಿವೀಕ್ಷಕ ವೆಂಕಟೇಶಬಾಬು ಮಾತನಾಡಿ, ಇತರೆ ಪಠ್ಯ ವಿಷಯಗಳಂತೆ ನಮ್ಮ ಪಠ್ಯಕ್ಕೂ ಮಾನ್ಯತೆ ಇದೆ. ಮಕ್ಕಳಲ್ಲಿ ಸ್ವಚ್ಛತೆ, ಶುಚಿತ್ವದ ಅರಿವು ನೀಡುವ ಮೂಲಕ ಶಾಲೆಯ ಪರಿಸರವನ್ನು ರೋಗ ಮುಕ್ತಗೊಳಿಸುವ ಕಾರ್ಯದಲ್ಲಿ ನಮ್ಮ ಪಾತ್ರ ಮರೆಯಲು ಸಾಧ್ಯವಿಲ್ಲ ಎಂದರು.ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೃತ್ತಿಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ವೃತ್ತಿಶಿಕ್ಷಣ ವಸ್ತುಪ್ರದರ್ಶನ ನಡೆಸಿದ್ದು ಕೋಲಾರ ಜಿಲ್ಲೆ. ಅದಕ್ಕೆ ಕಾರಣ ಹಿಂದಿನ ವಿಷಯ ಪರಿವೀಕ್ಷಕ ಶಿವಮಾದಯ್ಯ ಎಂದು ಸ್ಮರಿಸಿ, ಜಿಲ್ಲೆಯಲ್ಲಿ ಸಂಘ ಬಲಪಡಿಸುವ ಮೂಲಕ ಶಾಲೆಗಳ ಸವಾಂಗೀಣ ಅಭಿವೃದ್ದಿಯಲ್ಲಿ ಒಂದಾಗಿ ಕೆಲಸ ಮಾಡೋಣ ಎಂದರು.ಅಧಿಕಾರಿಗಳಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ರೂಪಣಾತ್ಮಕ, ಸಂಕಲನಾತ್ಮಕ ಚಟುವಟಿಕೆ ನಡೆಸುವುದು, ದಾಖಲೆಗಳ ನಿರ್ವಹಣೆ, ಕ್ರೋಢೀಕೃತ ಅಂಕಗಳ ವಹಿ ಸಿದ್ದತೆ ಸೇರಿದಂತೆ ಶಾಲೆಗಳಲ್ಲಿ ವಿಶೇಷ ಶಿಕ್ಷಕರು ನಿರ್ವಹಿಸಬೇಕಾದ ದಾಖಲೆಗಳ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಲಾಯಿತು. ಶಾಲಾ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕರಾದ ಎಸ್.ಆರ್.ವೀಣಾ,ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಪತಿ ಪಡುವಣೆ, ವಿಷಯ ಪರಿವೀಕ್ಷಕರಾದ ಸಮೀವುಲ್ಲಾ, ಬಬಿತಾ, ವೆಂಕಟೇಶಬಾಬುರನ್ನು ಸನ್ಮಾನಿಸಲಾಯಿತು.ವೃತ್ತಿಶಿಕ್ಷಕರ ಸಂಘದ ರಾಜ್ಯಪ್ರತಿನಿಧಿ ಜಿ.ಟಿ.ರಾಮಚಂದ್ರ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಟಿ.ಎ.ಪ್ರಕಾಶ್‌ಬಾಬು, ಉಪಾಧ್ಯಕ್ಷೆ ಧನಲಕ್ಷ್ಮಿ, ಮುರಳಿ, ಚಿತ್ರಕಲಾ ಮತ್ತು ವೃತ್ತಿ ಶಿಕ್ಷಕರಾದ ನಾಗರಾಜ್, ರಾಜಶೇಖರ್, ಚಲಪತಿ, ಆರ್.ವೆಂಕಟಪತಿ, ನಾಗರತ್ನಮ್ಮ, ಚೌಡಮ್ಮ,ಪದ್ಮಾವತಿ,ಶಾಂತಮ್ಮ ಮತ್ತಿತರರಿದ್ದು, ಚಿತ್ರಕಲಾಶಿಕ್ಷಕ ಗುಲ್ಜಾರ್ ಪ್ರಾರ್ಥಿಸಿ, ಶ್ರೀನಿವಾಸಲು ಸ್ವಾಗತಿಸಿದರು.