ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಾಂತರಾಜ್ ಸಲ್ಲಿಸಿರುವ ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿವಾಗಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾಧ್ಯಕ್ಷ ಯಲವಹಳ್ಳಿ.ಎನ್. ರಮೇಶ್ ತಿಳಿಸಿದರುನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ವಕ್ಕಲಿಗರ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವರದಿಯಲ್ಲಿ ಒಕ್ಕಲಿಗ ಜನಸಂಖ್ಯೆಯ ಕಡಿಮೆ ತೋರಿಸಲಾಗಿದೆ ಎಂದರು.
117 ಕ್ಕೂ ಹೆಚ್ಚು ಉಪಜಾತಿಒಕ್ಕಲಿಗ ಜಾತಿಯಲ್ಲಿ ಮರುಸುವಕ್ಕಲಿಗರು, ಗೌಡ ವಕ್ಕಲಿಗರು, ದಾಸ ವಕ್ಕಲಿಗರು, ಗಂಗಾಟಕಾರ ವಕ್ಕಲಿಗರು, ರೆಡ್ಡಿ ವಕ್ಕಲಿಗರು ಇತರದ ಹಲವಾರು ರೀತಿಯ 117 ಕ್ಕೂ ಹೆಚ್ಚು ಉಪ ಪಂಗಡಗಳಿದ್ದು ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಒಕ್ಕಲಿಗರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಒಕ್ಕಲಿಗ- ಲಿಂಗಾಯತರಿಗೆ ಅನ್ಯಾಯಈ ಉಪ ಪಂಗಡಗಳ ಸಂಖ್ಯೆಯನ್ನು ಕಡಿಮೆಗೊಳಿಸಿ ನಮ್ಮಲ್ಲಿಯೇ ವೈರತ್ವ ಮೂಡಿಸಲು ಯತ್ನಿಸಲಾಗಿದೆ. ರಾಜ್ಯದಲ್ಲಿ ಆಧಾರ್ ಸಂಖ್ಯೆ ಪ್ರಕಾರ ಅಂದಾಜು 7 ಕೋಟಿ ಜನಸಂಖ್ಯೆ ಇದೆ. 1 ಕೋಟಿ ಜನರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ವರದಿ ನ್ಯೂನತೆಯಿಂದ ಕೂಡಿದೆ. ಸಮೀಕ್ಷೆ ವೇಳೆ ಸಾಕಷ್ಟು ಲೋಪದೋಷಗಳಾಗಿವೆ. ವರದಿ ಅನುಷ್ಠಾನದಿಂದ ಒಕ್ಕಲಿಗ, ಲಿಂಗಾಯತ ಸೇರಿ ಹಲವು ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ಹಾಗಾಗಿ, ಪ್ರತಿಯೊಬ್ಬರ ಆಧಾರ್ ಕಾರ್ಡ್ ನೊಂದಿಗೆ ಜಿಯೋ ಟ್ಯಾಗ್ ಮೂಲಕ ಸವೇ ನಡೆಸಿದರೆ ಎಲ್ಲ ವರ್ಗಗಳ ಜನಸಂಖ್ಯೆ ನಿಖರವಾಗಿ ತಿಳಿಯಲಿದೆ ಎಂದರು.
ಎಷ್ಟೇ ರ್ಖಚಾದರೂ ಸರಿ ಪ್ರತ್ಯೇಕ ಜಾತಿಗಣತಿ ಸಮೀಕ್ಷೆ ಮಾಡುತ್ತೇವೆ. ಇದಕ್ಕಾಗಿ ಸಾಫ್ಟ್‌ವೇರ್ ಸಿದ್ಧಪಡಿಸಲಾಗುವುದು. ಬೆಂಗಳೂರಿನಲ್ಲಿ ದೊಡ್ಡಮಟ್ಟದ ಸಭೆ ಕರೆದು ಹೋರಾಟಕ್ಕೆ ಕರೆ ನೀಡುತ್ತೇವೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ಹೋರಾಟ ನಡೆಸಲಾಗುವುದು. ಸಭೆ ಯಾವಾಗ ಮಾಡಬೇಕೆಂದು ಸಮುದಾಯದ ಮೂವರು ಸ್ವಾಮೀಜಿಗಳು ನಿರ್ಧರಿಸುತ್ತಾರೆ ಎಂದರು.ಜನಾಂಗದ ಶಾಸಕರು ವಿರೋಧಿಸಲಿ
ಸಮುದಾಯದ ಜನರ ಉಪಯೋಗ ಪಡೆದು ಸರ್ಕಾರದಲ್ಲಿ ಮಂತ್ರಿ ಹಾಗೂ ಶಾಸಕರಾಗಿರುವ ಸಮುದಾಯದ ರಾಜಕೀಯ ಪ್ರತಿನಿಧಿಗಳು ವರದಿಯನ್ನು ಕಡ್ಡಿಮುರಿದಂತೆ ವಿರೋಧಿಸಬೇಕು. ಸಮುದಾಯದ ಮೂವರು ಸ್ವಾಮೀಜಿಗಳು ಹೇಳುದ್ದಾರೆ. ಸರಿಯಾದ ಪ್ರಮಾಣದಲ್ಲಿ ಮತ್ತೊಮ್ಮೆ ವೈಜ್ಞಾನಿಕವಾಗಿ ಯಾವುದೇ ಜಾತಿಯನ್ನು ನಿರ್ಲಕ್ಷಿಸದೆ ಎಲ್ಲಾ ಜಾತಿಯಲ್ಲೂ ಬಡಬಗ್ಗರು ಇರುವುದರಿಂದ ಸರಿಯಾದ ಜನಗಣತಿಯನ್ನು ಮಾಡಿ ಸಂಖ್ಯೆಗಳ ಅನುಗುಣವಾಗಿ ಮೀಸಲಾತಿಗಳನ್ನು ಕೊಡುವುದನ್ನು ಸರ್ಕಾರಗಳು ಪಾಲಿಸಬೇಕು ಮತ್ತು ವರದಿಗಳನ್ನು ನಿಖರವಾಗಿ ಮುಂದಿಡುವಂತಹ ಪ್ರಯತ್ನವನ್ನು ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.ದಶಕದಷ್ಟು ಹಳೆಯ ವರದಿ
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯರಾಗಿದ್ದ ಕಾಂತರಾಜು ಅವಧಿಯಲ್ಲಿ ಸಿದ್ಧಪಡಿಸಲಾಗಿದ್ದ ಈ ವರದಿ ಅವೈಜ್ಞಾನಿಕ. ವರದಿ ತಯಾರಿಸಿ 10 ವರ್ಷ ಸಮೀಪಿಸುತ್ತಿದೆ. 10 ವರ್ಷಕ್ಕೊಮ್ಮೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕೆಂಬ ನಿಯಮ ಇರುವುದರಿಂದ ಈ ವರದಿ ಅಪ್ರಸ್ತುತ. 10 ವರ್ಷದಲ್ಲಿ ಸಮಾಜದಲ್ಲಿ ಹಲವು ಬದಲಾವಣೆಗಳಾಗಿವೆ ಎಂದರು.ಆದ್ದರಿಂದ, ನಿಖರ ದತ್ತಾಂಶ ಪಡೆದು ಹೊಸದಾಗಿ ಜಾತಿಗಣತಿ ವರದಿ ತಯಾರಿಸುವುದು ಸೂಕ್ತ. ನಾನು ನನ್ನ ಒಕ್ಕಲಿಗ ಸಂಘವು ಜನಾಂಗಕ್ಕೆ ಆಗಿರುವ ಅನ್ಯಾಯದ ವಿರುದ್ಧ ಹೋರಾಡಲಿದೆ. ಇದರ ಪರಿಣಾಮವಾಗಿ ನನಗೆ ನೀಡಿರುವ ಗ್ಯಾರಂಟಿ ಯೋಜನೆಗಳ ಅಧ್ಯಕ್ಷಗಿರಿ ಹೋದರು ಚಿಂತೆ ಇಲ್ಲ ಎಂದು ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಒಕ್ಕಲಿಗ ಮುಖಂಡರಾದ ಪುರದಗಡ್ಡೆ ಕೃಷ್ಣಪ್ಪ, ಚಂದ್ರಣ್ಣ, ಲಕ್ಷ್ಮಣ್, ಯಲುವಹಳ್ಳಿ ಜನಾರ್ಧನ್, ಮಂಜುನಾಥ್, ಮತ್ತಿತರರು ಇದ್ದರು.