೨೦ರಿಂದ ವಾಲಿಬಾಲ್ ತರಬೇತಿ ಉಚಿತ ಬೇಸಿಗೆ ಶಿಬಿರ

| Published : Apr 16 2024, 01:06 AM IST

ಸಾರಾಂಶ

ಏ.೨೦ರಂದು ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ಶಿಬಿರ ಆರಂಭಗೊಳ್ಳಲಿದ್ದು, ಈ ಬಾರಿ ೬೦ಕ್ಕೂ ಮಿಕ್ಕಿ ಆಸಕ್ತರಿಗೆ ಮುಖ್ಯ ತರಬೇತುದಾರ ಪಿ.ವಿ.ನಾರಾಯಣನ್ ಅವರ ನೇತೃತ್ವದಲ್ಲಿ ತರಬೇತಿ ನೀಡಲಾಗುವುದು. ೧೦ ರಿಂದ ೧೮ ವರ್ಷದೊಳಗಿನ ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರತಿದಿನ ಬೆಳಗ್ಗೆ ೬.೪೫ ರಿಂದ ೮.೪೫ ಹಾಗೂ ಸಂಜೆ ೪.೩೦ ರಿಂದ ೬.೩೦ ರ ತನಕ ತರಬೇತಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಮಿತ್ರವೃಂದ ವಾಲಿಬಾಲ್ ಅಕಾಡೆಮಿ, ಪುತ್ತೂರು ರೋಟರಿ ಕ್ಲಬ್ ಬಿರಮಲೆ ಹಿಲ್ಸ್ ಹಾಗೂ ದರ್ಬೆ ಲಿಟ್ಲ್ ಫ್ಲವರ್ ಶಾಲೆ ಆಶ್ರಯದಲ್ಲಿ ಒಂದು ತಿಂಗಳ ಉಚಿತ ಬೇಸಿಗೆ ವಾಲಿಬಾಲ್ ತರಬೇತಿ ಶಿಬಿರವು ನಡೆಯಲಿದ್ದು, ಏ.೨೦ರಂದು ದರ್ಬೆ ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ತರಬೇತಿ ಶಿಬಿರ ಪ್ರಾರಂಭಗೊಳ್ಳಲಿದೆ ಎಂದು ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕೆಮ್ಮಿಂಜೆ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೪೫ ವರ್ಷಗಳಿಂದ ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ ೧೫ ವರ್ಷಗಳಿಂದ ಆಸಕ್ತ ಕ್ರೀಡಾ ಪಟುಗಳಿಗೆ ಉಚಿತವಾಗಿ ಶಾಸ್ತ್ರೀಯ ರೀತಿಯಲ್ಲಿ ವಾಲಿಬಾಲ್ ತರಬೇತಿ ನೀಡುತ್ತಾ ಬಂದಿದೆ. ನಮ್ಮಲ್ಲಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡಿದೆ ಎಂದರು.

ಏ.೨೦ರಂದು ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ಶಿಬಿರ ಆರಂಭಗೊಳ್ಳಲಿದ್ದು, ಈ ಬಾರಿ ೬೦ಕ್ಕೂ ಮಿಕ್ಕಿ ಆಸಕ್ತರಿಗೆ ಮುಖ್ಯ ತರಬೇತುದಾರ ಪಿ.ವಿ.ನಾರಾಯಣನ್ ಅವರ ನೇತೃತ್ವದಲ್ಲಿ ತರಬೇತಿ ನೀಡಲಾಗುವುದು. ೧೦ ರಿಂದ ೧೮ ವರ್ಷದೊಳಗಿನ ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರತಿದಿನ ಬೆಳಗ್ಗೆ ೬.೪೫ ರಿಂದ ೮.೪೫ ಹಾಗೂ ಸಂಜೆ ೪.೩೦ ರಿಂದ ೬.೩೦ ರ ತನಕ ತರಬೇತಿ ನಡೆಯಲಿದೆ. ೬ಫೀಟ್ ಎತ್ತರದ ಮಾನದಂಡವನ್ನು ನೀಡಲಾಗಿದೆ. ಹೊರ ತಾಲೂಕುಗಳಿಂದ ಬಂದವರಿಗೂ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಅಧ್ಯಕ್ಷ ಪಿ.ವಿ.ಕೃಷ್ಣನ್, ಜೊತೆ ಕಾರ್ಯದರ್ಶಿ ಪ್ರಸನ್ನ ಕುಮಾರ್, ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ಪೊರ್ದಾಳ್, ಮುಖ್ಯ ತರಬೇತುದಾರ ಪಿ.ವಿ.ನಾರಾಯಣ, ಟ್ರಸ್ಟಿ ಪಿ.ವಿ. ರಾಘವನ್ ಉಪಸ್ಥಿತರಿದ್ದರು.