ಸ್ವಯಂ ಸೇವಕರಿಗೆ ನಿಸ್ವಾರ್ಥ ಮನೋಭಾವ ಅಗತ್ಯ: ರವಿ ಎಲ್. ಗುಂಜೀಕರ

| Published : Oct 22 2024, 12:11 AM IST

ಸ್ವಯಂ ಸೇವಕರಿಗೆ ನಿಸ್ವಾರ್ಥ ಮನೋಭಾವ ಅಗತ್ಯ: ರವಿ ಎಲ್. ಗುಂಜೀಕರ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ಗದಗ ನಗರದ ಪ್ರವಾಸಿ ಮಂದಿರದಲ್ಲಿ ಅಮ್ಮಾ ಫೌಂಡೇಶನ್ ಬೆಂಗಳೂರು ವತಿಯಿಂದ ನಡೆದ ಸದಸ್ಯತ್ವ ಅಭಿಯಾನ ನಡೆಯಿತು.

ಗದಗ: ಸಮಾಜಮುಖಿ ಸಂಘಟನೆಗಳಲ್ಲಿ ಕೆಲಸ ಮಾಡುವ ಸ್ವಯಂ ಸೇವಕರು ನಿಸ್ವಾರ್ಥ ಮನೋಭಾವ ಹೊಂದಿರಬೇಕಾದ ಅಗತ್ಯವಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಎಲ್. ಗುಂಜೀಕರ ಹೇಳಿದರು.

ಸೋಮವಾರ ಗದಗ ನಗರದ ಪ್ರವಾಸಿ ಮಂದಿರದಲ್ಲಿ ಅಮ್ಮಾ ಫೌಂಡೇಶನ್ ಬೆಂಗಳೂರು ವತಿಯಿಂದ ನಡೆದ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

ಉದ್ಘಾಟಕರಾಗಿ ಆಗಮಿಸಿದ ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತೆದಾರ್ ಮಾತನಾಡಿ, ಸರ್ಕಾರದಡಿ ಹಾಗೂ ನಮ್ಮ ಇಲಾಖೆಯಲ್ಲಿ ಹಲವಾರು ಸಾಮಾಜಿಕ ಯೋಜನೆಗಳಿದ್ದು ಅವುಗಳನ್ನು ಅಮ್ಮ ಫೌಂಡೇಶನ್ನಂತಹ ಸಂಘಟನೆಗಳು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಮಾತನಾಡಿ, ಫೌಂಡೇಶನ್ ಮಾಡುವ ಹಲವಾರು ಕಾರ್ಯಕ್ರಮಗಳನ್ನು ನಾನು ನೋಡಿದ್ದು, ಕನ್ನಡ ನಾಡು-ನುಡಿಗಾಗಿ ಮತ್ತು ಕನ್ನಡದ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಸಾರುವ ಎಲ್ಲ ಕಾರ್ಯಕ್ರಮಗಳಿಗೂ ನಮ್ಮ ಇಲಾಖೆ ಸಹಕಾರ ನೀಡುತ್ತದೆ ಎಂದರು.

ಗಿರಿಜಾ ಬಸವ ಆಸ್ಪತ್ರೆಯ ವೈದ್ಯ ಪ್ರಕಾಶ ಹೊಸಮನಿ ಮಾತನಾಡಿ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಆರೋಗ್ಯ ಮತ್ತು ಸ್ವಚ್ಛತೆಯ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜಿಸುವಂತೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ನೌಕಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ, ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ಡಾ. ಬಸವರಾಜ್ ಬಳ್ಳಾರಿ ಮುಂತಾದವರು ಮಾತನಾಡಿದರು.

ಫೌಂಡೇಶನ್‌ ಸಾಂಸ್ಕೃತಿಕ ಕಾರ್ಯದರ್ಶಿ ಪರಶುರಾಮ್ ತಳವಾರ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಸುರೇಶ ಹಾಳಕೇರಿ ಸ್ವಾಗತಿಸಿದರು.

ಪ್ರಧಾನ ಕಾರ್ಯದರ್ಶಿ ವಿಶ್ವನಾಥ ದಲಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಮಾರುತಿ ಜಿ.ಎಚ್. ವಂದಿಸಿದರು. ಭೋವಿ ಸಮಾಜದ ಜಿಲ್ಲಾಧ್ಯಕ್ಷ ಹುಚ್ಚಪ್ಪ ಸಂದಕದ, ಗೌರವಾಧ್ಯಕ್ಷ ಪ್ರಶಾಂತ್ ನಾಗರಳ್ಳಿ ಹಾಗೂ ಸದಸ್ಯರು ಉಪಸ್ಥಿತರದ್ದರು. ಅಮ್ಮಾ ಫೌಂಡೇಶನ್ ಅಧ್ಯಕ್ಷ ಮೈಲಾರಪ್ಪ ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.