ಚನ್ನಪಟ್ಟಣದಲ್ಲಿ ಮತದಾನ ಜಾಗೃತಿ ಜಾಥಾ

| Published : Mar 23 2024, 01:00 AM IST

ಸಾರಾಂಶ

ಚನ್ನಪಟ್ಟಣ: ಲೋಕಸಭಾ ಚುನಾವಣೆ-2024ರ ಅಂಗವಾಗಿ ಮತದಾನ ಜಾಗೃತಿಗಾಗಿ ತಾಲೂಕಿನ ಸ್ವೀಪ್ ಸಮಿತಿ ಹಾಗೂ ಮಳೂರು ಗ್ರಾಮ ಪಂಚಾಯಿತಿ ವತಿಯಿಂದ ತಾಲೂಕಿನ ಸ್ವ-ಸಹಾಯ ಒಕ್ಕೂಟದ ಮಹಿಳೆಯರನ್ನು (ಎಂಬಿಕೆ) ಒಗ್ಗೂಡಿಸಿ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಜಾಥಾ ತಾಪಂ ಇಒ ಪಿ.ಕೆ. ಮನು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಮನು, ಮತದಾನದಿಂದ ಯಾರು ದೂರ ಉಳಿಯಬಾರದು. ಮತದಾನ ನಮ್ಮೆಲ್ಲರ ಹಕ್ಕು, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಇದರ ಪ್ರಬುದ್ಧತೆಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಸ್ವ-ಸಹಾಯ ಒಕ್ಕೂಟದ ಮಹಿಳೆಯರು ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿ ಏಪ್ರಿಲ್ 26ರಂದು ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡಬೇಕು ಎಂದು ತಿಳಿಸಿದರು.

ತಾಪಂ ಸಹಾಯಕ ನಿದೇಶಕರಾದ ಸಿದ್ದರಾಜು ಮಾತನಾಡಿ, ನಮ್ಮ ಭಾರತ ಪ್ರಜಾಪ್ರಭುತ್ವ ದೇಶದಲ್ಲೆ ಅತಿ ದೊಡ್ಡ ದೇಶವಾಗಿದೆ. ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಸ್ವೀಪ್ ಕಾರ್ಯಕ್ರಮವನ್ನು ಹಮ್ಮಿಕೊಂಡು ಚುನಾವಣೆಯಲ್ಲಿ ಶೇ. 100 ರಷ್ಟು ಮತದಾನವಾಗಲು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಡಿಒ ಶಶಿಕಿರಣ್, ತಾಲೂಕು ಐಇಸಿ ಸಂಯೋಜಕರಾದ ಭವ್ಯ, ಎನ್‌ಆರ್‌ಎಲ್‌ಎಂ ಒಕ್ಕೂಟದ ಸಿಬ್ಬಂದಿಗಳಾದ ಹರೀಶ್ ಬಾಬು, ಹೇಮಂತ್ ಕುಮಾರ್, ನಿಂಗರಾಜು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ತಾಲ್ಲೂಕಿನ ಎಂಬಿಕೆಗಳು ಭಾಗಿಯಾಗಿ ಕಾಯಕ್ರಮವನ್ನು ಯಶಸ್ವಿಗೊಳಿಸಿದರು.

22ಕೆಆರ್ ಎಂಎನ್ 10.ಜೆಪಿಜಿ

ಚನ್ನಪಟ್ಟಣ ತಾಲೂಕಿನ ಸ್ವ-ಸಹಾಯ ಒಕ್ಕೂಟದ ಮಹಿಳೆಯರನ್ನು (ಎಂಬಿಕೆ) ಒಗ್ಗೂಡಿಸಿ ಆಯೋಜಿಸಲಾಗಿದ್ದ ಜಾಥಕ್ಕೆ ತಾಪಂ ಇಒ ಪಿ.ಕೆ ಮನು ಚಾಲನೆ ನೀಡಿದರು.