ಬೆಂಬಲಿಗರು, ಕಾರ್ಯಕರ್ತರ ಸಭೆ ಸಭೆ ನಡೆಸಿದ ಎಂಎಲ್‌ ಸಿ ಮಧು ಜಿ.ಮಾದೇಗೌಡ

| Published : Mar 23 2024, 01:00 AM IST

ಬೆಂಬಲಿಗರು, ಕಾರ್ಯಕರ್ತರ ಸಭೆ ಸಭೆ ನಡೆಸಿದ ಎಂಎಲ್‌ ಸಿ ಮಧು ಜಿ.ಮಾದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ಗ್ರಾಮದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಮತ್ತೊಮ್ಮೆ ಜಿ.ಮಾದೇಗೌಡ ಮತ್ತು ಮಧು ಜಿ.ಮಾದೇಗೌಡರ ಕಡೆಗೆ ಹೋಗೋಣ ಎಂದು ಸಂದೇಶ ನೀಡುತ್ತಿರುವುದು ಸಂತಸ ತಂದಿದೆ. ಕಳೆದ 20 ವರ್ಷಗಳಿಂದಲೂ ನಾನು ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಯಾರಿಗೂ ಸಹ ನೋವು ಮಾಡಿಲ್ಲ. ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದೇನೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಅಣ್ಣೂರು ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರು ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆ ನಡೆಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಳೆದ 1 ವರ್ಷಗಳಿಂದ ಗ್ರಾಮಗಳಿಗೆ ಭೇಟಿ ಕೊಡುವುದನ್ನು ಕಡಿಮೆಗೊಳಿಸಿದ್ದೆ. ಆದರೆ, ಒಬ್ಬ ಶಾಸಕನಾಗಿ ಕಾರ್ಯಕರ್ತರ ನೋವು, ಸಮಸ್ಯೆ ಆಲಿಸಲು ಪ್ರತಿ ಗ್ರಾಮಗಳಿಗೂ ಭೇಟಿ ನೀಡುತ್ತಿದ್ದೇನೆ ಎಂದರು.

ಎಲ್ಲಾ ಗ್ರಾಮದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಮತ್ತೊಮ್ಮೆ ಜಿ.ಮಾದೇಗೌಡ ಮತ್ತು ಮಧು ಜಿ.ಮಾದೇಗೌಡರ ಕಡೆಗೆ ಹೋಗೋಣ ಎಂದು ಸಂದೇಶ ನೀಡುತ್ತಿರುವುದು ಸಂತಸ ತಂದಿದೆ. ಕಳೆದ 20 ವರ್ಷಗಳಿಂದಲೂ ನಾನು ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಯಾರಿಗೂ ಸಹ ನೋವು ಮಾಡಿಲ್ಲ. ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದೇನೆ ಎಂದು ತಿಳಿಸಿದರು. ಪ್ರತೀ ಗ್ರಾಮಗಳಲ್ಲೂ ನನ್ನನ್ನು ಅದ್ಧೂರಿಯಾಗಿ ಆಹ್ವಾನಿಸಿ ಅಭಿನಂದಿಸುತ್ತಿರುವುದು ನನಗೆ ಸಂತಸ ತಂದಿದೆ. ನನಗೆ ಅದ್ಧೂರಿ ಸ್ವಾಗತ ಬೇಕಿಲ್ಲ. ನಿಮ್ಮ ಪ್ರೀತಿ ವಿಶ್ವಾಸ ಸಾಕು ಎಂದರು.

ನಾನು ಕಳೆದ ಮೂರು ಭಾರಿ ವಿಧಾನ ಸಭಾ ಚುನಾವಣೆಯಲ್ಲಿ ಸೋತ್ತಿದ್ದೇನೆ. ಈ ವೇಳೆ ನಿಷ್ಠಾವಂತ ಕಾರ್ಯಕರ್ತರು ನನ್ನನ್ನು ಕೈಬಿಟ್ಟಿಲ್ಲ. ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನನ್ನು ಆಯ್ಕೆಗೊಳಿಸುವಲ್ಲಿ ಶ್ರಮಿಸಿದವರನ್ನು ಎಂದಿಗೂ ಮರೆಯುವಂತಿಲ್ಲ ಎಂದು ತಿಳಿಸಿದರು.

ಮನ್ಮುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್ ಮಾತನಾಡಿ, ನಮ್ಮ ಗ್ರಾಮಕ್ಕೆ ಮಧು ಜಿ. ಮಾದೇಗೌಡ 2 ಬಾರಿ ಜಿಪಂ, 2 ಬಾರಿ ತಾಪಂ, ಮೂರು ಬಾರಿ ಮಂಡ್ಯ ಜಿಲ್ಲಾಹಾಲು ಒಕ್ಕೂಟ, 1 ಬಾರಿ ಮಂಡ್ಯಜಿಲ್ಲಾ ಸಹಕಾರ ಬ್ಯಾಂಕ್ ಸೇರಿದಂತೆ ಒಟ್ಟು 8 ಬಿ.ಫಾರಂಗಳನ್ನು ವಿಶೇಷವಾಗಿ ನೀಡಿ ಗೌರವ ನೀಡುತ್ತಾ ಬಂದಿದ್ದಾರೆ. ಅವರಿಗೆ ನಾನು ಅನ್ಯಾಯ ಮಾಡಿದರೆ ನಮಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಶಾಸಕ ಮಧು ಜಿ.ಮಾದೇಗೌಡರನ್ನು ಭಾರಿ ಗಾತ್ರದ ಹೂವಿನ ಹಾರ ಹಾಕಿ ಅಭಿನಂದಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ಬಿ.ಎಂ.ನಂಜೇಗೌಡ, ಮನ್ಮುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್, ಸೊಸೈಟಿ ಸದಸ್ಯ ಆರ್.ಸಿದ್ದಪ್ಪ, ನಿರ್ದೇಶಕ ಸುನೀಲ್, ಮಾಜಿ ನಿರ್ದೇಶಕ ಜಿ.ರವಿ, ಗ್ರಾಪಂ ಸದಸ್ಯ ನಾಗರಾಜು, ಮಾಜಿ ಅಧ್ಯಕ್ಷ ಜಯರಾಮು, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಮುಖಂಡರಾದ ಪಾಪಣ್ಣ, ಶಿವಣ್ಣ, ದೇವರಾಜು, ರವಿಛೇರ್‍ಮೇನ್‌ ಕೃಷ್ಣಪ್ಪ, ರಾಜಣ್ಣ, ರಾಮು, ಸಂದೀಪ್, ಶಿವುಕುಮಾರ್, ಶರತ್, ಚಂದ್ರು, ವರ, ಮಧು, ಮನು, ರಮೇಶ್, ಅಭಿ, ಅಪ್ಪಾಜಿ, ಮಹೇಶ, ಅರವಿಂದ, ಬೋರೇಗೌಡ, ಬವಾಳಿ ಸಿದ್ದರಾಮು, ಪರಮೇಶ್, ಮಲ್ಲೇಶ್, ಸಿದ್ದರಾಜು ಸೇರಿದಂತೆ ಹಲವು ಯುವ ಮುಖಂಡರು ಉಪಸ್ಥಿತರಿದ್ದರು.