ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ: ಲೋಕಾಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮುಧೋಳ ತಾಲೂಕ ಸ್ವೀಪ್ ಸಮಿತಿ ಮತ್ತು ಶಿಶು ಅಭಿವೃದ್ದಿ ಯೋಜನೆ ಸಂಯುಕ್ತಾಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮುಧೋಳ: ಲೋಕಾಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮುಧೋಳ ತಾಲೂಕ ಸ್ವೀಪ್ ಸಮಿತಿ ಮತ್ತು ಶಿಶು ಅಭಿವೃದ್ದಿ ಯೋಜನೆ ಸಂಯುಕ್ತಾಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿ.ಪಿ.ಏಗನಗೌಡರ ಚಾಲನೆ ನೀಡಿದರು.
ಮುಧೋಳ ನಗರಸಭೆ ಆವರಣದಿಂದ ಹೊರಟು ಜಡಗಣ್ಣ-ಬಾಲಣ್ಣ ಸರ್ಕಲ್, ಶಿವಾಜಿ ಸರ್ಕಲ್ ಮಾರ್ಗವಾಗಿ ಹೊರಟು ತಾಲೂಕಾಡಳಿತ ಭವನದವರೆಗೆ ಸಂಚರಿಸಿ ನಂತರ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮತದಾನ ಜಾಗೃತಿ ಕುರಿತು ಎಲ್ಲರೂ ಪ್ರತಿಜ್ಞಾವಿಧಿಯನ್ನು ಪ್ರಮಾಣೀಕರಿಸಿದರು. ಈ ಕಾರ್ಯಕ್ರಮದಲ್ಲಿ ತಾಪಂ ಇಒ ವಿ.ಪಿ.ಏಗನಗೌಡರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾಶಿಬಾಯಿ ಜಿ.ಕೊರೆಗೋಳ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಮಲಾಕ್ಷಿ ಎನ್.ಬಂಗಾರೆಪ್ಪನವರ, ಹಿರಿಯ ಮೇಲ್ವಿಚಾರಕಿ ರಜಿನಿ ಹಿರೇಮಠ, ಇಂದಿರಾ ನಾಯ್ಕ ಹಾಗೂ ವಲಯ ಮೇಲ್ವಿಚಾರಕಿ ಶೋಭಾ ಮಂಟೂರ, ರಾಜೇಶ್ವರಿ ಲೆಂಕನ್ನವರ, ಲತಾ ಬೆನಕಟ್ಟಿ, ಉಷಾ ಮನ್ನೆಪ್ಪಗೋಳ, ಬೀಬೀ ಅಮನಾ ಫಿರಜಾದೆ, ವಾಣಿಶ್ರೀ ಮುನ್ನೊಳ್ಳಿ, ಸೈದುಭಾನು ಅನೋಜಿ, ಗಾಯತ್ರಿ ಮಹಾಜನ್, ಸುಜಾತಾ ಪತ್ತಾರ ಮತ್ತು ನಗರಸಭೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.--------