ದೇಶದ ಉಳಿವಿಗಾಗಿ ಬಿಜೆಪಿಗೆ ಮತ ನೀಡಿ: ಪಾಟೀಲ

| Published : Apr 30 2024, 02:02 AM IST

ಸಾರಾಂಶ

ತಿಕೋಟಾ: ದೇಶದ ಉಳಿವಿಗಾಗಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಬೇಕು, ಬಿಜೆಪಿ ಗೆದ್ದರೆ ಮಾತ್ರ ಈ ದೇಶದ ಸುರಕ್ಷತೆ ಸಾಧ್ಯ. ಹೀಗಾಗಿ, ಜನರು ಬಿಜೆಪಿಯನ್ನು ಬೆಂಬಲಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ ನೀಡಿ ಬಹುಮತದಿಂದ ಗೆಲ್ಲಿಸುವಂತೆ ಬಿಜೆಪಿ ಜಲ್ಲಾಧ್ಯಕ್ಷ ಆರ್.ಎಸ್.ಪಟೀಲ ಮನವಿ ಮಾಡಿದರು.

ತಿಕೋಟಾ ಪಟ್ಟಣದಲ್ಲಿ ರಮೇಶ ಜಿಗಜಿಣಗಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಮೇಶ ಜಿಗಜಿಣಗಿ ಅವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದರೆ, ಪ್ರಚಾರ ಮಾಡಿಲ್ಲ. ಮೋದಿ ಅವರ ಕೈ ಬಲಪಡಿಸುವ ಉದ್ದೇಶದಿಂದ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು।

ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಸಂತೋಷ ಕುರದ್ದಡಿ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಅರುಣ ಶಹಾಪುರ, ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿದರು.

ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೋಳಕುರ, ಸಂಜುಗೌಡ ಪಾಟೀಲ, ಸುಭಾಶಗೌಡ ಬಿರಾದಾರ, ಸಾಬು ಮಶ್ಯಾಳ, ಗುರಲಿಂಗಪ್ಪ ಅಂಗಡಿ, ರಾಜು ಕಡಿಬಾಗಿಲ, ರಾವತ ಕಂಬಾರ, ರಾಜೇಂದ್ರ ಕುಲಕರ್ಣಿ, ಗಿರೀಶ ಕುಲಕರ್ಣಿ, ಮಾನಿಂಗ ಮಂಟೂರ, ಶಿವಾನಂದ ಇಂಚಗೇರಿ, ರಾಜು ಮೇತ್ರಿ, ಬಸವರಾಜ ಬಂಡಿ, ಸಂಗಮೇಶ ತಾಳಿಕೋಟಿ, ಸಿದ್ರಾಮ ಪೂಜಾರಿ, ಪ್ರಕಾಶ ಕಡಿಬಾಗಿಲ, ಚಂದ್ರಕಾಂತ ಕಡಿಬಾಗಿಲ, ಕಲ್ಲಪ್ಪ ಮಾಳಿ, ಸುರೇಶ ಜತ್ತಿ ಇದ್ದರು,