ದೇಶದ ಸುಭದ್ರತೆಗಾಗಿ ಬಿಜೆಪಿಗೆ ಮತನೀಡಿ: ಸಂಸದ ಸಂಗಣ್ಣ ಕರಡಿ

| Published : Apr 02 2024, 01:02 AM IST

ದೇಶದ ಸುಭದ್ರತೆಗಾಗಿ ಬಿಜೆಪಿಗೆ ಮತನೀಡಿ: ಸಂಸದ ಸಂಗಣ್ಣ ಕರಡಿ
Share this Article
  • FB
  • TW
  • Linkdin
  • Email

ಸಾರಾಂಶ

ಇದು ಸ್ಥಳೀಯ ಹಾಗೂ ವಿಧಾನಸಭೆಯ ಚುನಾವಣೆ ಅಲ್ಲ. ಲೋಕಸಭೆಯ ಚುನಾವಣೆಯಾಗಿದ್ದು ದೇಶದ ಸುಭದ್ರತೆ, ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು.

ಬಿಜೆಪಿ ಮಂಡಲ ಬೂತ್ ವಿಜಯ ಅಭಿಯಾನ ಹಾಗೂ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಇದು ಸ್ಥಳೀಯ ಹಾಗೂ ವಿಧಾನಸಭೆಯ ಚುನಾವಣೆ ಅಲ್ಲ. ಲೋಕಸಭೆಯ ಚುನಾವಣೆಯಾಗಿದ್ದು ದೇಶದ ಸುಭದ್ರತೆ, ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಸಂಸದ ಸಂಗಣ್ಣ ಕರಡಿ ಮನವಿ ಮಾಡಿದರು.

ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಿಜೆಪಿ ಮಂಡಲ ಬೂತ್ ವಿಜಯ ಅಭಿಯಾನ ಹಾಗೂ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದರು.

ಕೊಪ್ಪಳ ಲೋಕಸಭೆಯ ಬಿಜೆಪಿಯ ಅಭ್ಯರ್ಥಿ ಡಾ. ಬಸವರಾಜ ಅವರಿಗೆ ನಿಮ್ಮ ಆಶೀರ್ವಾದ ಮಾಡಬೇಕು. ಅವರು ಒಳ್ಳೆಯ ವಿದ್ಯಾವಂತರು, ಯುವಕರಾಗಿದ್ದು, ಅವರಿಗೆ ಮತ ನೀಡಿ ಆಶೀರ್ವದಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಂಗ್ರೆಸ್‌ನವರು ಸುಮಾರು ಅರವತ್ತು ವರ್ಷ ಆಡಳಿತ ಮಾಡಿದರೂ ದೇಶದಲ್ಲಿ ಯಾವ ಅಭಿವೃದ್ಧಿಯೂ ಆಗಲಿಲ್ಲ. ಭಾರತೀಯರು ಬೇರೆ ದೇಶಕ್ಕೆ ಹೋದ್ರೆ ಸಾಲ ಕೇಳೋಕೆ ಬಂದಿದ್ದಾರೆ ಎನ್ನುವಂತಿತ್ತು. ಆದರಿಂದು ಭಾರತದ ಪ್ರಧಾನಿ ಮೋದಿಗೆ ರೆಡ್ ಕಾರ್ಪೆಟ್ ಹಾಕುವ ಮೂಲಕ ಸ್ವಾಗತ ನೀಡುವ ಹಂತಕ್ಕೆ ಬಂದು ತಲುಪಿದೆ ಎಂದರು.

ಅಬ್ ಕೀ ಬಾರ್ 400 ಪಾರ್ ಆಗಬೇಕಿದೆ. ಇಂಡಿಯಾ ಕೂಟದಲ್ಲಿ ಪ್ರಧಾನಿ ಯಾರಾಗಬೇಕು ಎಂದು ನಿರ್ಧಾರವಿಲ್ಲ. ಅವರಂಥ ಸಮರ್ಥ ನಾಯಕ ಈ ದೇಶ ಕಾಣಲು ಸಾಧ್ಯವಿಲ್ಲ. ಜಗತ್ತಿನಲ್ಲೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಭಾರತ ಮುಂದಿದೆ. ಅದು ಬಿಜೆಪಿಯಿಂದ, ಮೋದಿಯವರ ನಾಯಕತ್ವ ಕಾರಣ ಎಂದರು.

ಬಿಜೆಪಿ ಅಭ್ಯರ್ಥಿ ಡಾ. ಕೆ. ಬಸವರಾಜ ಮಾತನಾಡಿ, ಸದೃಢ ನಾಯಕತ್ವದಿಂದ ಇಡೀ ವಿಶ್ವವೇ ನಮ್ಮ ದೇಶದತ್ತನೋಡುವಂತೆ ಭದ್ರತೆ, ಆರ್ಥಿಕತೆ, ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗಿದೆ. ಇದು ಎಂಪಿ ಚುನಾವಣೆ ಅಲ್ಲ ಪಿಎಂ ಚುನಾವಣೆ. ನಾನು ವೈದ್ಯನಾಗುವುದರಲ್ಲಿ ಸಂಗಣ್ಣವರ ಪಾತ್ರವಿದೆ. ನಮ್ಮ ಅಪ್ಪನ ಆಸೆಯಂತೆ ಜನರ ಸೇವೆಗಾಗಿ ಆಗಮಿಸಿ ಸೇವೆ ಸಲ್ಲಿಸುತ್ತಿದ್ದೇನೆ. ರಾಜಕೀಯ ಅಂತ ಬಂದಾಗ ನಮ್ಮ ತಂದೆಯ ಜೊತೆ ಅನುಭವ ಪಡೆದಿದ್ದೇನೆ. ಬಿಜೆಪಿ ಪ್ರತಿ ಬೂತ್ ನಲ್ಲಿ ಕನಿಷ್ಠ 350 ಮತ ಹೆಚ್ಚಾಗಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.

ವಿರೋಧ ಪಕ್ಷದ ಮುಖ್ಯಸಚೇತಕ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಕುಷ್ಟಗಿ ಅಭ್ಯರ್ಥಿ ಎಂಪಿ ಅಗುವುದು ನಮ್ಮ ಹೆಮ್ಮೆಯ ವಿಷಯವಾಗಲಿದೆ. ನನ್ನ ಚುನಾವಣೆಯಲ್ಲಿ ಆಶೀರ್ವದಿಸಿದಂತೆ ಡಾ. ಬಸವರಾಜ ಅವರಿಗೆ ಆಶೀರ್ವಾದ ಮಾಡಬೇಕು. ಇಲ್ಲಿ ಜಾತಿ ಧರ್ಮ ಎಂದು ಬೇಧ ಭಾವ ಮಾಡದೆ ಒಗ್ಗಟ್ಟಿನಿಂದ ಮತ ಹಾಕಿ ಮೋದಿಗೆ ಬಲ ತುಂಬಬೇಕು ಎಂದರು.

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಕಾಂಗ್ರೆಸ್ ಗರ್ವಭಂಗ ಮಾಡುವುದು ನಿಶ್ಚಿತ. ಯಾವುದೇ ಅಭಿವೃದ್ಧಿ ಮಾಡದೇ ಇರುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ದೇಶದ ಭದ್ರತೆಗಾಗಿ, ಸರ್ವಾಂಗೀಣ ಅಭಿವೃದ್ಧಿಗಾಗಿ, ಭ್ರಷ್ಟಾಚಾರ ರಹಿತ ಸರಕಾರ ಬಿಜೆಪಿಯ ನರೇಂದ್ರ ಮೋದಿ ಸರಕಾರ ಮಾತ್ರ ಕೊಡಲು ಸಾಧ್ಯ. ಮೋದಿ ಮೋದಿ ಎಂದರೆ ಹೊಡೆಯಿರಿ ಎನ್ನುವ ಸಚಿವರಿಗೆ ಮಾತಿನಿಂದ ಹೊಡೆಯುವುದು ಬೇಡ, ಮತದಾನದಿಂದ ಹೊಡೆಯಿರಿ. ನಮ್ಮ ಕಾರ್ಯಕರ್ತರ ಮೇಲೆ ಅನಾವಶ್ಯಕ ಕೇಸ್ ದಾಖಲು ಮಾಡುತ್ತಾರೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದರು.

ಜೆಡಿಎಸ್ ಮುಖಂಡ ಸಿ.ವಿ. ಚಂದ್ರಶೇಖರ ಮಾತನಾಡಿ, ಕಾಂಗ್ರೆಸ್ ಶಾಸಕರ ದಬ್ಬಾಳಿಕೆ, ದೌರ್ಜನ್ಯ, ಅಕ್ರಮ, ಮರಳು ದಂಧೆ ಹೀಗೆ ಅನೇಕ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿ ಕಾರ್ಯಕರ್ತರನ್ನ ದುಡ್ಡು ಕೊಟ್ಟು ಖರೀದಿಸಿ ತಮ್ಮ ಅಭ್ಯರ್ಥಿ ಗೆಲ್ಲಿಸಲು ಕಾಂಗ್ರೆಸ್ ಹೊರಟಿದೆ. ನಾನು ಕೂಡ ಬಿಜೆಪಿಯವ. ನನಗೆ ಬಿಜೆಪಿಯ ಕಾರ್ಯಕರ್ತರ ನಂಟು ಇದೆ. ಬಿಜೆಪಿ ಗೆಲುವು ಶತಸಿದ್ಧ, ಜೆಡಿಎಸ್ ಮೈತ್ರಿ ಆಗಿದ್ದು, ಮೋದಿಯವನ್ನು ಮತ್ತೊಮ್ಮೆ ಪ್ರಧಾನಿ ಮಾಡಲು, ಕಾಂಗ್ರೆಸ್ ಕಿತ್ತೊಗೆಯಲು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬದಾಮಿ, ಮಾಜಿ ಶಾಸಕ ಬಸವರಾಜ ದಢೇಸೂಗುರ, ನಾಗಪ್ಪ ಸಾಲೋಣಿ, ಕೆ. ಶರಣಪ್ಪ, ಕೆ. ವಿರೂಪಾಕ್ಷಪ್ಪ, ಪರಣ್ಣ ಮುನವಳ್ಳಿ, ಪ್ರಭಾಕರ ಚಿಣಿ, ಬಸವರಾಜ ಹಳ್ಳೂರ, ನಾಗರಾಜ ತಳವಾರ, ಶರಣಪ್ಪ ಕುಂಬಾರ, ಅಮ್ನುದ್ದೀನ ಮುಲ್ಲಾ, ನಬಿಸಾಬ ಕುಷ್ಟಗಿ, ಫಕೀರಪ್ಪ ವಕೀಲರು ದೇವೇಂದ್ರಪ್ಪ ಬಳೂಟಗಿ, ಮಲ್ಲಣ್ಣ ಪಲ್ಲೇದ ಸೇರಿದಂತೆ ಇತರರು ಇದ್ದರು.