- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿಕೆ । ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಪರ ಪ್ರಚಾರ । ಕಾಲ್ನಡಿಗೆಯಲ್ಲಿ ತೆರಳಿ ಮತಯಾಚನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರತಿ ವರ್ಷ ನಮ್ಮ ಕಾಂಗ್ರೆಸ್ ಸರ್ಕಾರ ಸುಮಾರು ₹50 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ನೀಡುತ್ತಿದೆ. ಇಡೀ ದೇಶದಲ್ಲಿ ಜನರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಗ್ಯಾರಂಟಿ ನೀಡುತ್ತಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ಡಾ.ಸಂಸದೆ ಪ್ರಭಾ ಮಲ್ಲಿಕಾರ್ಜುನ ಹೇಳಿದರು.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಳ್ಳಿಗಳಾದ ಕೈದಾಳೆ, ಕೈದಾಳೆ ಕ್ಯಾಂಪ್, ಗಿರಿಯಾಪುರ, ಕುಕ್ಕುವಾಡ, ಹಳೇ ಕೊಳೆನಹಳ್ಳಿ, ಹೊಸ ಕೊಳೆನಹಳ್ಳಿ, ನಾಗರಸನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಕಾಲ್ನಡಿಗೆ ಮೂಲಕ ಮನೆಮನೆಗೆ ಭೇಟಿ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಸಮರ್ಥ್ ಅವರು ಯುವಕರಾಗಿದ್ದಾರೆ. ಅವರಿಗೆ ಒಂದು ಯೂತ್ ವಿಜ಼ನ್ ಇದೆ. ಚಿಕ್ಕ ವಯಸ್ಸಿನಿಂದಲೇ ರಾಜಕಾರಣ ನೋಡಿದವರು. 2019ರಿಂದ ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಎಲ್ಲರ ಪರ ಪ್ರಚಾರ ಮಾಡಿದ್ದಾರೆ. ಮೊಮ್ಮಗನಾಗಿ ಅಪ್ಪಾಜಿ ಅವರ ಜೊತೆ ಒಳ್ಳೆಯ ಒಡನಾಟ ಹೊಂದಿದ್ದರು. ದಕ್ಷಿಣ ಕ್ಷೇತ್ರದ ಜನ ಅಪ್ಪಾಜಿ ಅವರನ್ನು ಸತತವಾಗಿ 6 ಬಾರಿ ಆಯ್ಕೆ ಮಾಡಿದ್ದಾರೆ. ಇದು ಅಪ್ಪಾಜಿ ಅವರ ಭದ್ರಕೋಟೆ. ಇಡೀ ದಾವಣಗೆರೆ ದಕ್ಷಿಣ ಭಾಗದಲ್ಲಿ ಅಪ್ಪಾಜಿ ಅವರು ಎಲ್ಲ ರಸ್ತೆಗಳನ್ನು ಸಿಮೆಂಟೀಕರಣಗೊಳಿಸಿದ್ದಾರೆ. ಪ್ರಚಾರದ ವೇಳೆ ಜನರು ಮನೆಗಳನ್ನು ಕೇಳುತ್ತಿದ್ದಾರೆ. ಎಲ್ಲ ಕೆಲಸಗಳನ್ನು ಜನಗಳಿಗಾಗಿ ಮಾಡುತ್ತೇವೆ ಎಂದರು.
ಸಮರ್ಥ್ ಆಲೋಚನೆ ಉತ್ತಮವಾಗಿವೆ. ಶಿಕ್ಷಣದ ವಿಚಾರದಲ್ಲಿ ಅದರಲ್ಲೂ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಅವರ ಆಶಯ. ಮತ್ತು ಜನರಿಗೆ ಒಳ್ಳೆಯ ಆರೋಗ್ಯ ನೀಡಬೇಕು. ವೈದ್ಯರ ಸಂಖ್ಯೆ ಹೆಚ್ಚಿಸುವಲ್ಲಿ ನಮ್ಮ ಸರಕಾರ ಕಾರ್ಯ ಪ್ರವೃತ್ತವಾಗಿದೆ. ಜನರ ಬೆಂಬಲ ಧನಾತ್ಮಕವಾಗಿದೆ. ಜನರು ಉಪ ಚುನಾವಣೆಯಲ್ಲಿ ಸಮರ್ಥಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರು ಇದ್ದರು.- - -
* (ಮಿಡ್ಲ್) ಜನರ ನಂಬಿಕೆಗೆ ತಕ್ಕಂತೆ ಕೆಲಸ: ಸಮರ್ಥ್ ಭರವಸೆದಾವಣಗೆರೆ: ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡುವುದು ನನ್ನ ಮೊದಲ ಆದ್ಯತೆ. ಹಿರಿಯರ ಆಶೀರ್ವಾದ ಹಾಗೂ ಯುವಕರ ಬೆಂಬಲದಿಂದ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ನನ್ನ ಗುರಿಯಾಗಿದೆ ಎಂದು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಕ್ಷೇತ್ರದ ಶೇಖರಪ್ಪ ನಗರ, ಆರ್‌ಎಂಸಿ ಲಿಂಕ್ ರಸ್ತೆ, ವಿನಾಯಕ ನಗರ, ದೇವರಾಜ ಅರಸು ಬಡಾವಣೆ, ಬಂಬೂಬಜಾರ್, ಚೌಕಿಪೇಟೆ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು, ಗ್ಯಾರಂಟಿ ಯೋಜನೆಗಳ ಮೂಲಕ ಜನರ ಜೀವನ ಸುಧಾರಿಸಿದೆ. ಮುಂದುವರಿದ ಅಭಿವೃದ್ಧಿಗಾಗಿ ಕ್ರಮಸಂಖ್ಯೆ 3 ಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.ಮಹಾವೀರ ಜಯಂತಿ ಅಂಗವಾಗಿ ಚೌಕಿಪೇಟೆಯಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ ಅವರು, ಅಹಿಂಸೆ, ಸತ್ಯ ಮತ್ತು ಸಹನೆಯ ಮೌಲ್ಯಗಳನ್ನು ಪಾಲಿಸುವಂತೆ ಕರೆ ನೀಡಿದರು. ನನ್ನ ತಾತನವರ ಮಾರ್ಗದರ್ಶನದಂತೆ ಜನಸೇವೆ ಮುಂದುವರಿಸುತ್ತೇನೆ. ಏ.9ರಂದು ನಡೆಯುವ ಉಪ ಚುನಾವಣೆಯಲ್ಲಿ ಆಶೀರ್ವದಿಸಿ ಗೆಲ್ಲಿಸಿ ಎಂದು ಸಮರ್ಥ್ ಶಾಮನೂರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಯಿಪೇಟೆಯ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.- - -
-30ಕೆಡಿವಿಜಿ45:- - -
-30ಕೆಡಿವಿಜಿ44:ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆ ತಾ. ದಕ್ಷಿಣ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.