ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲಬೈಲಹೊಂಗಲ ಮತಕ್ಷೇತ್ರ-16ರಲ್ಲಿರುವ ಪ್ರತಿಯೊಬ್ಬ ಮತದಾರರು ಬರುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತವನ್ನು ಚಲಾವಣೆ ಮಾಡುವ ಮೂಲಕ ಚುನಾವಣಾ ಪರ್ವ ದೇಶದ ಗರ್ವ ಎಂಬುವುದನ್ನು ಹೆಮ್ಮೆಯಿಂದ ಮತದಾನ ಮಾಡಬೇಕು ಎಂದು ಸ್ವೀಪ್ ಸಮಿತಿಯ ಅಧ್ಯಕ್ಷ, ತಾಪಂ ಇಒ ಗಂಗಾಧರ ಕಂದಕೂರ ಹೇಳಿದರು.ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತಿ ಹಾಗೂ ಗ್ರಾಮಗಳಲ್ಲಿ ಮತ್ತು ಪಟ್ಟಣ ಪಂಚಾಯತಿಯ ಮತಗಟ್ಟೆಗಳಲ್ಲಿ ಲೋಕಸಭಾ ಚುನಾವಣೆ-2024ರ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಯುವ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಈ ಚುನಾವಣಾ ಪರ್ವದಲ್ಲಿ ಪಾಲ್ಗೊಳ್ಳಿ ಹಾಗೂ ಹಿರಿಯ ನಾಗರಿಕರು, ಶತಾಯುಷಿಗಳು ವಿಶೇಷ ಚೇತನರು, ಮಹಿಳೆಯರು ತೃತೀಯ ಲಿಂಗಿಗಳು ಹಾಗೂ ಜನಸಾಮಾನ್ಯರು ಈ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ತಮ್ಮ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸುವಂತೆ ತಿಳಿಸಿದರು.ಸಹಾಯಕ ನಿರ್ದೇಶಕ (ಗ್ರಾ.ಉ) ವಿಜಯ ಪಾಟೀಲ, ಸಹಾಯಕ ನಿರ್ದೇಶಕ (ಪಂ ರಾಜ್) ರಘು ಬಿ.ಎನ್, ತಾಪಂ ಯೋಜನಾಧಿಕಾರಿ ರಾಜಶೇಖರ ಕಡೆಮನಿ, ಸಿಬ್ಬಂದಿ ಎಸ್.ವಿ.ಹಿರೇಮಠ, ಮಂಜುನಾಥ ಕಾರೆಕಾರ, ಬಸವರಾಜ ಮುನವಳ್ಳಿ, ಮಂಜುನಾಥ ಶಿಗಿಹಳ್ಳಿ, ಎಂ.ಬಿ.ಶಿವಾಪೂರ, ರಮೇಶ ಮುನ್ನೆನ್ನಿ, ತಾಲೂಕು ಪಂಚಾಯತಿ ಎಲ್ಲ ಸಿಬ್ಬಂದಿ ವರ್ಗ ಮತ್ತು ತಾಲೂಕಿನ ಎಲ್ಲ ಗ್ರಂಥಾಲಯದ ಗ್ರಂಥ ಸಹಾಯಕರು ಹಾಜರಿದ್ದರು. ಮತದಾನ ಜಾಗೃತಿಯ ಪ್ರತಿಜ್ಞಾ ವಿಧಿಯನ್ನು ಸಂಗನಗೌಡ ಸಂಗನೌಡರ ಬೋಧಿಸಿದರು.