ಸಾರಾಂಶ
ಮಸ್ಕಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು. ನ್ಯಾಯಾಲಯಕ್ಕೆ ಬಂದ ಕಕ್ಷಿದಾರರಿಗೆ, ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕನ್ನಡಪ್ರಭ ವಾರ್ತೆ ಮಸ್ಕಿ
ಮತದಾರರು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ ಜಾತಿ, ಮತ, ಭಾಷೆ ಸೇರಿದಂತೆ ಯಾವುದೇ ಪ್ರೇರಣೆಗಳಿಗೆ ಒಳಗಾಗದೆ ತಪ್ಪದೆ ಮತದಾನ ಮಾಡಿ ಮತದಾರರು ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಮಸ್ಕಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಆನಂದಪ್ಪ.ಎಂ ಅವರು ಹೇಳಿದರು.ಮಸ್ಕಿ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾ ವಿದಿಯನ್ನು ನ್ಯಾಯಾಲಯಕ್ಕೆ ಬಂದ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ಬೋಧಿಸಿದ ನಂತರ ಅವರು ಮಾತನಾಡಿದರು.
ಪ್ರತಿಯೊಬ್ಬ ಮತದಾರ ಯಾವುದೇ ಚುನಾವಣೆ ಇರಲಿ ಕಡ್ಡಾಯವಾಗಿ ಮತದಾನ ಮಾಡಿ ಮತದಾನ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯುವುಸು ಬಹು ಮುಖ್ಯವಾಗಿದೆ. ಆದ್ದರಿಂದ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಯಾವುದಕ್ಕೂ ಭಯಪಡದೆ ನ್ಯಾಯಯುತವಾಗಿ ಮತದಾನ ಮಾಡಬೇಕು ಎಂದರು.ಮತದಾನ ಶಕ್ತಿಯನ್ನು ವಿವೇಕಯುತವಾಗಿ ಬಳಸಿ ಸಶಕ್ತ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಸ್ಕಿ ವಕೀಲರ ಸಂಘದ ಅದ್ಯಕ್ಷರ ಈಶಪ್ಪ ದೇಸಾಯಿ ವಕೀಲರು, ರಾಮಣ್ಣ ವಕೀಲರು, ಆನಂದ ರಾಠೋಡ್, ವೆಂಕೋಬ ದೇಸಾಯಿ,ಬಾರ.ಕೆ. ನಾಗರಾಜ, ವೀರಭದ್ರಪ್ಪ ಹೊಸಮನಿ, ವೀಜಯ ಭಾಸ್ಕರ ರಡ್ಡಿ, ಶಿವರಾಜ ಕಡಬೂರು, ಚನ್ನಪ್ಪ, ಮಂಜುನಾಥ, ಬಾಬುಸಾಬ್ ರಂಗಾಪೂರು, ನಭಿರಸೂಲ್ ಶೇಡ್ಮೀ, ಕರಿಯಪ್ಪ ವಂದ್ಲಿ ಸೇರಿದಂತೆ ಇತರರು ಇದ್ದರು.