ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ

| Published : Mar 29 2024, 12:49 AM IST

ಸಾರಾಂಶ

ನರೇಗಾ ಕೂಲಿ ಕಾರ್ಮಿಕರು ಬೆಳಗ್ಗೆ ಬೇಗ ಹೋಗಿ ಕೊಟ್ಟ ಅಳತೆಯಲ್ಲಿ ಕೆಲಸ ಮಾಡಿ ಸರಿಯಾದ ಸಮಯಕ್ಕೆ ಹಾಜರಿ ಪಡೆದು ಮನೆಗೆ ಬಂದ ತಕ್ಷಣ ಮತದಾನ ಮಾಡಬೇಕು.

ಹರಪನಹಳ್ಳಿ: ಲೋಕಸಭಾ ಚುನಾವಣೆ ಮೇ 7ರಂದು ನಡೆಯಲಿದ್ದು, ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು ಎಂದು ಹರಪನಹಳ್ಳಿ ತಾಪಂ ನರೇಗಾ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ್ ಹೇಳಿದರು.

ತಾಲೂಕಿನ ಪುಣಭಗಟ್ಟ ಗ್ರಾಪಂ ವ್ಯಾಪ್ತಿಯ ನಂದಿಕಂಬ ಗ್ರಾಮದ ಕೆರೆ ಅಂಗಳದ ನರೇಗಾ ಕಾಮಗಾರಿ ಸ್ಥಳದಲ್ಲಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವೀಪ್ ಕಾರ್ಯಕ್ರಮದಲ್ಲಿ ಮಾತನಾಡಿದರು.ನರೇಗಾ ಕೂಲಿ ಕೆಲಸಕ್ಕೆ ಹೋದರೂ ಮನೆಗೆ ಬಂದ ತಕ್ಷಣ ಕೂಲಿಕಾರರು ತಪ್ಪದೇ ಮತದಾನ ಮಾಡಬೇಕು. ನರೇಗಾ ಕೂಲಿ ಕಾರ್ಮಿಕರು ಬೆಳಗ್ಗೆ ಬೇಗ ಹೋಗಿ ಕೊಟ್ಟ ಅಳತೆಯಲ್ಲಿ ಕೆಲಸ ಮಾಡಿ ಸರಿಯಾದ ಸಮಯಕ್ಕೆ ಹಾಜರಿ ಪಡೆದು ಮನೆಗೆ ಬಂದ ತಕ್ಷಣ ಮತದಾನ ಮಾಡಬೇಕು. ಕೆಲಸಕ್ಕೆ ಹೋಗಿ ಮನೆಗೆ ಬಂದ ತಕ್ಷಣ ಮಲಗುವುದು ಅಲ್ಲ. ಅಗತ್ಯ ಬಿದ್ದರೆ 5ರಿಂದ 10ನಿಮಿಷ ವಿಶ್ರಾಂತಿ ಪಡೆದು ಆದರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನರೇಗಾ ಕೂಲಿ ಕಾರ್ಮಿಕರು ಕಡ್ಡಾಯ ಕೆಲಸ ಹಾಗೂ ಕೂಲಿ ಹಣ ಪಡೆಯುತ್ತೇವೆಯೋ ಅದೇ ರೀತಿ ಮತದಾನವನ್ನೂ ಮಾಡಬೇಕು. ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ತಮ್ಮ ಹಕ್ಕು ಚಲಾಯಿಸಬೇಕು ಎಂದು ತಿಳಿಸಿದರು.ನರೇಗಾ ಕೂಲಿ ಕಾರ್ಮಿಕರು ಒಂದೇ ವೇಳೆ ವೋಟರ್ ಐಡಿ ಕಾರ್ಡ್ ಕಳೆದುಕೊಂಡಿದ್ದರೂ ನರೇಗಾ ಉದ್ಯೋಗ ಚೀಟಿ ತೋರಿಸಿಯಾದರೂ ಮತ ಚಲಾಯಿಸಬಹುದು. ಆದರೆ, ಮತದಾರರಪಟ್ಟಿಯಲ್ಲಿ ಹೆಸರು ಇರಬೇಕು. ಇದರ ಜತೆಗೆ 80 ವರ್ಷ ಮೇಲ್ಪಟ್ಟವರು ಹಾಗೂ ನಡೆದಾಡಲು ಸಾಧ್ಯವೆ ಇಲ್ಲ ಅನ್ನುವಂತ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.ಹರಪನಹಳ್ಳಿ ತಾಲೂಕಿನೆಲ್ಲೆಡೆ ಜಾಗೃತಿ:ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಹಾಗೂ ಗ್ರಾಪಂ ವ್ಯಾಪ್ತಿಯ ಎಲ್ಲ ಕೇಂದ್ರ ಸ್ಥಾನ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಿರಂತರ ಕೆಲಸದ ಜತೆಗೆ ನಮ್ಮ ನಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಅರ್ಥೈಸಿಕೊಂಡು ನಮ್ಮ ಹಕ್ಕು ಚಲಾಯಿಸಿದಲ್ಲಿ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆ ಹೆಚ್ಚಲು ಸಾಧ್ಯ ಎಂದು ತಿಳಿಸಲಾಯಿತು.ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ತಾಲೂಕು ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ಪಿಡಿಒ ಸಮುದ್ರಿ ಮಂಜುನಾಥ, ತಾಂತ್ರಿಕ ಸಹಾಯಕ ಅಭಿಯಂತರ ಮಹಾಂತೇಶ್ ಎಂ, ಬಿಎಫ್‌ಟಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ನರೇಗಾ ಕೂಲಿಕಾರರು ಇತರರಿದ್ದರು.ಚುನಾವಣೆಯಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಯಾವುದೇ ನೆಪ, ಕಾರಣ ಹೇಳದೇ ಎಲ್ಲರೂ ವೋಟ್ ಹಾಕಬೇಕು. ಪ್ರತೀ ಚುನಾವಣೆಯಲ್ಲಿ ಪ್ರತಿಯೊಬ್ಬ ನಾಗರಿಕ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಿದೆ ಎನ್ನುತ್ತಾರೆ ನರೇಗಾ ಎಡಿ ತಾಪಂ ಹರಪನಹಳ್ಳಿ ಯು.ಎಚ್. ಸೋಮಶೇಖರ್.