ಯಾರಿಗೂ ಹೆದರದೆ ಮತ ಹಾಕಿ: ಚಂದ್ರಮ್ಮ ಮನವಿ

| Published : May 24 2025, 12:18 AM IST

ಸಾರಾಂಶ

ಮಾಗಡಿ: ಬಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಯಾರಿಗೂ ಹೆದರದೆ ಮತದಾರು ಎನ್‌ಡಿಎ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಯಾದ ನನಗೆ ಮತ ಹಾಕುವಂತೆ ಮಾಗಡಿ ಕ್ಷೇತ್ರದ ಅಭ್ಯರ್ಥಿ ಚಂದ್ರಮ್ಮ ಕೆಂಪೇಗೌಡ ಮತದಾರರಲ್ಲಿ ಮನವಿ ಮಾಡಿದರು.

ಮಾಗಡಿ: ಬಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಯಾರಿಗೂ ಹೆದರದೆ ಮತದಾರು ಎನ್‌ಡಿಎ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಯಾದ ನನಗೆ ಮತ ಹಾಕುವಂತೆ ಮಾಗಡಿ ಕ್ಷೇತ್ರದ ಅಭ್ಯರ್ಥಿ ಚಂದ್ರಮ್ಮ ಕೆಂಪೇಗೌಡ ಮತದಾರರಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಬಾ, ಮಾಡಬಾಳ್, ಸೋಲೂರು ಹೋಬಳಿಯ ಮೋಟಗೊಂಡನಹಳ್ಳಿ, ರಾಮನಗರ ತಾಲೂಕಿನ ಜಾಲಮಂಗಲ ಹಾಗೂ ಅಕ್ಕೂರು ಪಂಚಾಯಿತಿ ವ್ಯಾಪ್ತಿಯಲ್ಲಿ 147 ಮತಗಳಿದೆ. ವಿರೋಧಿಗಳ ಆಮಿಷಗಳಿಗೆ ಒಳಗಾಗದೆ, ಭಯ ಪಡದೆ ನಿರ್ಭೀತಿಯಿಂದ ಮತ ಚಲಾಯಿಸಿ ಮಹಿಳಾ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.

ನನ್ನ ಪತಿ ಕೆಂಪೇಗೌಡರು 50 ವರ್ಷಗಳ ರಾಜಕೀಯ ಜೀವನದಲ್ಲಿದ್ದು ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಗೆಲುವಿಗೆ ಸಹಕರಿಸಿದ್ದಾರೆ. ನಾನು ಹುಚ್ಚಹನುಮೇಗೌಡರ ಪಾಳ್ಯದಲ್ಲಿ ನಿವಾಸಿಯಾಗಿದ್ದು, ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದೇನೆ. ಡೈರಿ ಅಧ್ಯಕ್ಷಳಾಗಿ ರೈತರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇನೆ. ರೈತರಿಗೆ ಮತ್ತಷ್ಟು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಸ್ವರ್ಧಿಸಿದ್ದು ನೀವೆಲ್ಲರೂ ಅವಕಾಶ ಕಲ್ಪಿಸುತ್ತೀರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಇದೇ ವೇಳೆ ತಗ್ಗೀಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಹೊಸಹಳ್ಳಿ ರಂಗಣ್ಣಿ, ಜೆಡಿಎಸ್ ಯುವ ಘಟಕದ ತಾಲೂಕು ಅಧ್ಯಕ್ಷ ವಿಜಯ್‌ಕುಮಾರ್, ಧನುಷ್, ದಿನೇಶ್, ಕೃಷ್ಣಮೂರ್ತಿ ಇತರರು ಭಾಗವಹಿಸಿದ್ದರು.

(ಫೋಟೊ ಕ್ಯಾಪ್ಷನ್‌)

ಮಾಗಡಿ ಜೆಡಿಎಸ್ ಕಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿ ಚಂದ್ರಮ್ಮ ಕೆಂಪೇಗೌಡ ಡೈರಿ ನಿರ್ದೇಶಕ ಸ್ಥಾನಕ್ಕೆ ಮತಯಾಚಿಸಿದರು.