ಸಾರಾಂಶ
ರಾಷ್ಟ್ರೀಯ ಮತದಾರರ ದಿನಾಚರಣೆ । ಮತದಾರರ ಹಕ್ಕು, ಕರ್ತವ್ಯ ಕುರಿತು ಉಪನ್ಯಾಸ
ಕನ್ನಡ ಪ್ರಭ ವಾರ್ತೆ ಹೊನ್ನಾಳಿಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರ, ಮತದಾನ ಎರಡು ಬಹು ಪ್ರಮುಖ ಪಾತ್ರವಹಿಸುತ್ತವೆ ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ದೇವದಾಸ್ ಹೇಳಿದರು.
ತಾಲೂಕಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ತಾಲೂಕು ಆಡಳಿತ, ತಾಲೂಕು ವಕೀಲರ ಸಂಘ, ಕಾನೂನು ಸೇವಾ ಸಮಿತಿ ಹಾಗೂ ಚುನಾವಣಾ ಸಾಕ್ಷರತಾ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಒಂದು ದೇಶದ ಅಭಿವೃದ್ದಿ ಮತ್ತು ಭವಿಷ್ಯ ದೇಶದ ಮತದಾರರು ಚುನಾವಣೆಗಳಲ್ಲಿ ಆಯ್ಕೆಮಾಡುವ ನಾಯಕರುಗಳ ಮೇಲೆ ಅವಲಂಭಿತವಾಗಿರುತ್ತದೆ ದೇಶದ ಸಂವಿಧಾನ ಈ ದೇಶದ ಪ್ರಜೆಗಳಿಗೆ ಮತದಾನ ಎನ್ನುವ ಗುರುತರ ಜವಾಬ್ದಾರಿಯುತ ಹಕ್ಕನ್ನು ದಯಪಾಲಿಸಿದೆ, ಈ ಹಕ್ಕನ್ನು ಉಪಯೋಗಿಸಿಕೊಂಡು ಯಾವುದೇ ರೀತಿಯ ಪ್ರಲೋಭೆಗಳಿಗೆ ಒಳಗಾಗದೇ ಮತದಾರ ಉತ್ತಮರನ್ನು ಆಯ್ಕೆ ಮಾಡಿದಾಗ ದೇಶದ ಆಡಳಿತ ಕೂಡ ಉತ್ತಮ ಹಾಗೂ ಜನಪರವಾಗಿರುತ್ತದೆ ಎಂದು ಹೇಳಿದರು.
ಇದೇ ಸಂದದರ್ಭದಲ್ಲಿ ತಮ್ಮ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಎಂದು ಕಾಲೇಜಿನ ವಿದ್ಯಾರ್ಥಿಗಳು ನ್ಯಾಯಾಧೀಶರ ಗಮನಕ್ಕೆ ತಂದಾಗ, ಎಲ್ಲ ವಿದ್ಯಾರ್ಧಿಗಳು ಕಡ್ಡಾಯವಾಗಿ ಬಸ್ ನಲ್ಲಿಯೇ ಕಾಲೇಜಿಗೆ ಬಂದು ಹೋಗುವುದು ಮಾಡುತ್ತೇವೆ ಎಂದು ಹೇಳಿದರೆ ಮಾತ್ರ ತಾನು ಸಂಬಂಧಿಸಿದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹೇಳಿ ಬಸ್ ಬಿಡಿಸುವ ವ್ಯವಸ್ಥೆ ಮಾಡುತ್ತೇನೆ ಸಾರಿಗೆ ಸಂಸ್ಥೆಯವರಿಗೊ ನಷ್ಠವಾಗದಂತೆ ವಿದ್ಯಾರ್ಥಿಗಳು ಹೆಚ್ಚಾಗಿ ಬಸ್‌ನಲ್ಲಿ ಕಾಲೇಜಿಗೆ ಬರುವುದನ್ನು ರೂಢಿಮಾಡಿಕೊಳ್ಳಬೇಕು ಎಂದು ಹೇಳಿದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಪುಣ್ಯಕೋಟಿ ಮಾತನಾಡಿ, ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಕಾಲೇಜುಗಳಲ್ಲಿಯೇ ಮಾಡುವ ಉದ್ದೇಶ ಇಲ್ಲಿ ಹಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇರುತ್ತಾರೆ ಅವರಿಗೆ ಮತದಾನದ ಮಹತ್ವ ತಿಳಿಯಬೇಕಾಗಿದೆ ಜೊತೆಗೆ ಕಡ್ಡಾಯವಾಗಿ 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು, ಈ ಬಗ್ಗೆ ಅವರಿಗೆ ತಿಳುವಳಿಕೆ ನೀಡುವ ಕಾರಣಕ್ಕೆ ಕಾಲೇಜುಗಳಲ್ಲಿ ಮತದಾರರ ದಿನಾಚರೆಣೆ ಅಚರಿಸಲಾಗುತ್ತಿದೆ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಗುರುತಿನ ಚೀಟಿ ಪಡೆದು ಚುನಾವಣೆಗಳ ಸಂದರ್ಭದಲ್ಲಿ ತಪ್ಪದೇ ಮತಚಲಾಯಿಸಬೇಕು
ಪ್ರಸ್ತಾವಿಕವಾಗಿ ಉಪವಿಭಾಗಾಧಿಕಾರಿ ಅಭಿಷೇಕ್ ಮಾತನಾಡಿ, ಚುನಾವಣೆ ನೀತಿ ಸಂಹಿತೆ, ಮತದಾರರ ಪಟ್ಟಿ ತಯಾರಿಕೆ ವಿಷಯಗಳ ಕುರಿತು ಮಾಹಿತಿ ನೀಡಿದರು. ತಹಶೀಲ್ದಾರ್ ಪಟ್ಟರಾಜ ಗೌಡ ಅವರು ಮತದಾನದ ಬಗ್ಗೆ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು. ವಕೀಲರಾದ ಕರುಣಾಕರ ಎಚ್. ಅವರು ಮತದಾರರ ಹಕ್ಕು ಮತ್ತು ಕರ್ತವ್ಯ ಕುರಿತು ಉಪನ್ಯಾಸ ನೀಡಿದರು.ಕಾಲೇಜಿನ ಪ್ರಾಂಶುಪಾಲ ಟಾಕಪ್ಪ ಚೌವ್ಙಾಣ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಪಿ.ಜಯಪ್ಪ ಅವರು ಸಂವಿಧಾನ, ಚುನಾವಣೆಗಳ ಕುರಿತು ಮಾತನಾಡಿದರು.
ಸರ್ಕಾರಿ ಸಹಾಯಕ ಅಭಿಯೋಜಕ ಭರತ್ ಭೀಮಯ್ಯ, ಸಿಪಿಐ. ಅನಿಲ್ ಕುಮಾರ್, ತಾಪಂ ಇಒ ಎಂ.ಆರ್.ಪ್ರಕಾಶ್, ಬಿ.ಆರ್.ಸಿ., ತಿಪ್ಪೇಶಪ್ಪ, ವಕೀಲರಾದ ಚಂದ್ರಪ್ಪ ಮಡಿವಾಳ್, ಬಿ.ಎಂ. ಪುರುಷೋತ್ತಮ್, ಕಾಲೇಜಿನ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು ಇದ್ದರು.ಉಪನ್ಯಾಸಕ ಡಾ. ಓಂಕಾರ ನಾಯ್ಕ ನಿರೂಪಿಸಿದರು. ಮಾಲತಿ ಜಿ.ಆರ್. ಸ್ವಾಗತಿಸಿದರು. ಹಾಗೂ ದೊಡ್ಡಸ್ವಾಮಿ ಅವರು ವಂದಿಸಿದರು.