ಸ್ವೀಪ್‌ ಸಮಿತಿ ಪ್ರಯತ್ನದಿಂದಾಗಿ ಹೊಳೆನರಸೀಪುರದಲ್ಲಿ ಮತದಾನ ಪ್ರಮಾಣ ಏರಿಕೆ

| Published : Apr 28 2024, 01:21 AM IST

ಸ್ವೀಪ್‌ ಸಮಿತಿ ಪ್ರಯತ್ನದಿಂದಾಗಿ ಹೊಳೆನರಸೀಪುರದಲ್ಲಿ ಮತದಾನ ಪ್ರಮಾಣ ಏರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ತಾಲೂಕಿನಲ್ಲಿ ಶೇ. ೮೨.೦೭ರಷ್ಟು ಮತದಾನವಾಗಿದ್ದು, ಸಹಾಯಕ ಚುನಾವಣಾಧಿಕಾರಿ ಸತೀಶ್ ಬಾಬು ನೇತೃತ್ವದಲ್ಲಿ ತಾಲೂಕು ಸ್ವೀಪ್ ಕಮಿಟಿಯ ಕೈಗೊಂಡ ಮತದಾನ ಜಾಗೃತಿಯಿಂದಾಗಿ ಏರಿಕೆಯಾಗಿದೆ.

ತಾಲೂಕಲ್ಲಿ ಹೆಚ್ಚು ಶೇ. ೮೨.೦೭ ಮತದಾನ । ಸಹಾಯಕ ಚುನಾವಣಾಧಿಕಾರಿ ಸತೀಶ್ ಬಾಬು ನೇತೃತ್ವದಲ್ಲಿ ನಡೆಸಿದ್ದ ಜಾಗೃತಿ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನಲ್ಲಿ ಶೇ. ೮೨.೦೭ರಷ್ಟು ಮತದಾನವಾಗಿದ್ದು, ಸಹಾಯಕ ಚುನಾವಣಾಧಿಕಾರಿ ಸತೀಶ್ ಬಾಬು ನೇತೃತ್ವದಲ್ಲಿ ತಾಲೂಕು ಸ್ವೀಪ್ ಕಮಿಟಿಯ ಕೈಗೊಂಡ ಮತದಾನ ಜಾಗೃತಿಯಿಂದಾಗಿ ಏರಿಕೆಯಾಗಿದೆ.

ಹೊಳೆನರಸೀಪುರ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ೨,೨೩,೨೦೯ ಮತದಾರರಲ್ಲಿ ೧,೮೩,೧೮೯ ಮತಗಳು ಚಲಾವಣೆಗೊಂಡಿದೆ. ಪುರುಷರು ೯೧೬೭೪, ೯೧೫೧೪ ಮಹಿಳೆಯರು ಮತ್ತು ಇತರೆ ಒಬ್ಬರು ಮತ ಚಲಾಯಿಸಿದ್ದಾರೆ. ಶೇ.೮೨.೦೭ ರಷ್ಟು ಮತದಾನವಾಗಿದೆ. ೨೦೧೯ ಚುನಾವಣೆಗೆ ಹೊಲಿಕೆ ಮಾಡಿದರೆ ಶೇ. ೦.೮೫ರಷ್ಟು ಮತದಾನ ಏರಿಕೆಯಾಗಿದೆ. ಹೊಸದಾಗಿ ೧೦೭೪೯ ಮತದಾರರು ಸೇರ್ಪಡೆಯಾಗಿದ್ದಾರೆ.

ತಾಲೂಕಿನಲ್ಲಿ ೨೦೧೯ರ ಏಪ್ರಿಲ್ ೧೮ ರಂದು ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ೨೧೨೪೬೦ ಮತದಾರರಲ್ಲಿ ೧೭೨೫೬೧ ಮತಗಳು ಚಲಾವಣೆಗೊಂಡಿದ್ದವು. ಪುರುಷರು ೮೭೦೬೬ ಮತ್ತು ೮೫೪೯೫ ಮಹಿಳೆಯರು ಮತ ಚಲಾಯಿಸಿದ್ದರು. ಶೇ.೮೧.೨೨ ರಷ್ಟು ಮತದಾನವಾಗಿತ್ತು.

ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಚುನಾವಣಾಧಿಕಾರಿಗಳ ನಿರ್ದೇಶನದಂತೆ ಕೈಗೊಂಡ ಮತದಾನ ಜಾಗೃತಿ ಅಭಿಯಾನಗಳಿಂದ ಶೇಕಡಾವಾರು ಮತದಾನ ಸಂಖ್ಯೆ ಏರಿಯಾಗಿರುವ ಜತೆಗೆ ನಾಗರಿಕರು ಬಿಸಿಲಿನ ತಾಪದಲ್ಲಿಯೂ ಮತಗಟ್ಟೆಗೆ ಆಗಮಿಸಿ, ಮತದಾನಕ್ಕೆ ತೋರಿದ ಉತ್ಸಾಹ ಅಧಿಕಾರಿಗಳ ಕರ್ತವ್ಯದ ಜತೆಗೆ ಮತದಾರರ ಬದ್ಧತೆಗೆ ಸಾಕ್ಷಿಯಾಗಿದೆ.

ಪ್ರಜಾಪ್ರಭುತ್ವ ಯಶಸ್ಸಿಗೆ ಎಲ್ಲರೂ ಮತದಾನ ಮಾಡಬೇಕು: ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ

ಬೇಲೂರು: ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿ ನಡೆಯಬೇಕಾದರೆ ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮತದಾನ ನಡೆಸಬೇಕು ಎಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ ತಿಳಿಸಿದರು.ಲೋಕಸಭಾ ಚುನಾವಣೆ ೨೦೨೪ ಅಂಗವಾಗಿ ಬೇಲೂರು ತಾಲೂಕಿನ ಹಳೇಬೀಡು ಸಮೀಪದ ಸಿದ್ದಾಪುರ ಗ್ರಾಮದ ಮತಗಟ್ಟೆಯಲ್ಲಿ ಮತದಾನ ನಡೆಸಿದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ಮತದಾನವು ನಮ್ಮ ದೇಶದ ಭವಿಷ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಪ್ರಮುಖ ನಾಗರಿಕ ಕರ್ತವ್ಯವಾಗಿದೆ. ಮತದಾನವು ರಾಜಕಾರಣಿಗಳನ್ನು ಅವರ ಕಾರ್ಯಗಳಿಗೆ ಜವಾಬ್ದಾರರಾಗಿರಲು ಸಹಾಯ ಮಾಡುತ್ತದೆ. ನಮ್ಮ ಪ್ರಜಾಪ್ರಭುತ್ವದ ಚೌಕಟ್ಟನ್ನು ಸೃಷ್ಟಿಸುತ್ತದೆ’ ಎಂದು ಹೇಳಿದರು. ಮತದಾನ ಪ್ರಮಾಣವು ಪ್ರಜಾಪ್ರಭುತ್ವ ವ್ಯವಸ್ಥೆಯ ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯನ್ನು ಬಲಪಡಿಸುತ್ತದೆ. ಮತದಾನವು ಹಕ್ಕು ಮಾತ್ರವಲ್ಲ, ನಾಗರಿಕ ಕರ್ತವ್ಯವೂ ಆಗಿದೆ. ಅದನ್ನು ಚಲಾಯಿಸುವ ಮೂಲಕ ವ್ಯಕ್ತಿಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ದೇಶದ ಸಮಗ್ರ ಪ್ರಗತಿಗೆ ಕೊಡುಗೆ ನೀಡಬಹುದು ಎಂದರು.ಹೊಳೆನರಸೀಪುರ ಪಟ್ಟಣದ ಮತಗಟ್ಟೆ ಸಂಖ್ಯೆ ೨೮೩ರಲ್ಲಿ ಅಜ್ಜಿ, ಅತ್ತೆ, ಸೊಸೆ, ಮೊಮ್ಮಕ್ಕಳು ಒಟ್ಟಿಗೆ ಆಗಮಿಸಿ, ಮತದಾನ ಮಾಡಿ ಸಂಭ್ರಮಿಸಿದರು.