ಮತದಾರರ ಜಾಗೃತಿಗಾಗಿ ಮತದಾರರ ದಿನಾಚರಣೆ

| Published : Jan 28 2024, 01:19 AM IST

ಮತದಾರರ ಜಾಗೃತಿಗಾಗಿ ಮತದಾರರ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾರರನ್ನು ಜಾಗೃತಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತದೆ

ಹೊಸದುರ್ಗ: ಮತದಾರರನ್ನು ಜಾಗೃತಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತದೆ ಎಂದು ತಹಸೀಲ್ದಾರ್ ತಿರುಪತಿ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತವತಿಯಿಂದ ಗುರುವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.

ನಾಗರೀಕರು ತಪ್ಪದೇ ಮತ ಚಲಾಯಿಸುವ ಮೂಲಕ ಮತದಾನದ ಪಾವಿತ್ರ್ಯತೆ ಕಾಪಾಡಬೇಕು. ಜಾತಿ, ಧರ್ಮ, ಹಣ, ಹೆಂಡದಂತಹ ಆಮಿಷಗಳಿಗೆ ಒಳಗಾಗಿ ಮತ ಚಲಾಯಿಸಬಾರದು. ಉತ್ತಮ ನಾಯಕರ ಆಯ್ಕೆ ಮಾಡಲು ನಿಮಗೆ ನೀಡಿರುವ ಮತದಾನದ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಬಿಇಓ ಸೈಯದ್ ಮೋಸಿನ್ ಮಾತನಾಡಿ, 2011ರಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಶೇ.100ರಷ್ಟು ಮತದಾನ ಆಗಲಿ ಎಂಬುದು ಆಚರಣೆಯ ಮುಖ್ಯ ಉದ್ದೇಶ ಎಂದರು.

ತಾಪಂ ಇಒ ಸುನೀಲ್ ಕುಮಾರ್, ಪುರಸಭೆ ಮುಖ್ಯಧಿಕಾರಿ ತಿಮ್ಮರಾಜು, ಪಿಎಸ್‌ಐ ಮಹೇಶ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ಬ್ರಹರಾಂಭ, ಜ್ಯುನಿಯರ್ ಕಾಲೇಜು ಪ್ರಾಶುಪಾಲ ವಿಶ್ವನಾಥ್, ಜ್ಯುನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದ ಪ್ರಾಶುಪಾಲ ನಾಗೇಂದ್ರಪ್ಪ ಮತ್ತಿತರಿದ್ದರು.