ಮತದಾನ ಜಾಗೃತಿಗೆ ಚಾಲನೆ

| Published : Mar 28 2024, 12:45 AM IST

ಸಾರಾಂಶ

ಅಮೀನಗಡ: ಲೋಕಸಭಾ ಚುನಾವಣೆ ಹಿನ್ನೆಲೆ ಅಮೀನಗಡ ಹಾಗೂ ಕಮತಗಿ ಪಟ್ಟಣದ ಪ.ಪಂ, ನಾಡ ಕಾರ್ಯಾಲಯ ಹಾಗೂ ಮತಗಟ್ಟೆಗಳಿಗೆ ಬಾಗಲಕೋಟೆ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅಮೀನಗಡ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಮತಗಟ್ಟೆ ಕೊಠಡಿಗಳ ದುರಸ್ತಿ, ಶೌಚಾಲಯ ಹಗೂ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಲು ಸೂಚಿಸಿದರು.

ಅಮೀನಗಡ: ಲೋಕಸಭಾ ಚುನಾವಣೆ ಹಿನ್ನೆಲೆ ಅಮೀನಗಡ ಹಾಗೂ ಕಮತಗಿ ಪಟ್ಟಣದ ಪ.ಪಂ, ನಾಡ ಕಾರ್ಯಾಲಯ ಹಾಗೂ ಮತಗಟ್ಟೆಗಳಿಗೆ ಬಾಗಲಕೋಟೆ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅಮೀನಗಡ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಮತಗಟ್ಟೆ ಕೊಠಡಿಗಳ ದುರಸ್ತಿ, ಶೌಚಾಲಯ ಹಗೂ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಲು ಸೂಚಿಸಿದರು. ಮತಗಟ್ಟೆ ಬಿಎಲ್‌ಒಗಳಾದ ಎಚ್.ಟಿ.ರಂಗಾಪುರ, ಪ.ಪಂ.ನ ಎಸ್.ವಿ.ಮಾಗುಂಡಪ್ಪ, ಗ್ರಾಮ ಲೆಕ್ಕಾಧಿಕಾರಿ ಸುರೇಶ ಹುದ್ದಾರ ಅವರುಗಳಿಗೆ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಸಲಹೆ, ಸೂಚನೆ ನೀಡಿದರು. ಈ ವೇಳೆ ಮತದಾನ ಜಾಗೃತಿಗೆ ಚಾಲನೆ ನೀಡಲಾಯಿತು. ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಷಿ, ಆರೋಗ್ಯ ನಿರೀಕ್ಷಕ ಸಂತೋಷ ವ್ಯಾಪಾರಿಮಠ, ಕಂದಾಯ ವೃತ್ತ ನಿರೀಕ್ಷಕ ಡಿ.ಬಿ.ಯತ್ನಟ್ಟಿ, ಹೆಚ್.ಟಿ.ರಂಗಾಪುರ, ಸುರೇಶ ಹುದ್ದಾರ, ಎಸ್.ವಿ.ಮಾಗುಂಡಪ್ಪ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ಇದ್ದರು.