ವಿದ್ಯಾರ್ಥಿಗಳಿಗೆ ಈಗಾಗಲೇ ಸಾಕಷ್ಟು ಬಾರಿ ಪಾಠಗಳ ಪುನರಾವರ್ತನೆ, ಹಿಂದಿನ ವರ್ಷದ ಪ್ರಶ್ನೆಪತ್ರಿಕೆ ಬಿಡಿಸಿದ್ದು, ಇಲಾಖೆಯು ಸಹ 3 ಸಿದ್ಧತಾ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು, ಶಿಕ್ಷಕರು ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ.
ನರಗುಂದ: ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಭಯ ಪಡಬಾರದು. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದರೆ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿ ಅಂದಾನಯ್ಯ ವಿರಕ್ತಮಠ ತಿಳಿಸಿದರು.
ಪಟ್ಟಣದ ಜ್ಞಾನಮುದ್ರ ಪಬ್ಲಿಕ್ ಶಾಲೆಯ 2025- 26ರ ಎಸ್ಎಸ್ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಮಹಾಸರಸ್ವತಿ ಪೂಜಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಸರಳ ಪ್ರಶ್ನೆಗಳಿಗೆ ಮೊದಲು ಉತ್ತರಿಸಬೇಕೆಂದರು.ವಿದ್ಯಾರ್ಥಿಗಳಿಗೆ ಈಗಾಗಲೇ ಸಾಕಷ್ಟು ಬಾರಿ ಪಾಠಗಳ ಪುನರಾವರ್ತನೆ, ಹಿಂದಿನ ವರ್ಷದ ಪ್ರಶ್ನೆಪತ್ರಿಕೆ ಬಿಡಿಸಿದ್ದು, ಇಲಾಖೆಯು ಸಹ 3 ಸಿದ್ಧತಾ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು, ಶಿಕ್ಷಕರು ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ ಎಂದರು.
ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಜೀವನದ ಪ್ರಮುಖ ಘಟ್ಟ. ಪರೀಕ್ಷೆ ಎದುರಿಸಲು ಆರೋಗ್ಯ ತುಂಬಾ ಮುಖ್ಯ. ಸಮರ್ಪಕವಾಗಿ ಸಮಯ ನಿರ್ವಹಣೆ ಮಾಡಬೇಕು. ಸಮಾಜಕ್ಕೆ ಮಾದರಿಯಾಗಿ, ತಂದೆ- ತಾಯಿಗಳಿಗೆ ಹೆಮ್ಮೆಯ ಪುತ್ರರಾಗಿ ಮತ್ತು ಶಾಲೆಗೆ ಕೀರ್ತಿ ತರಬೇಕೆಂದರು.ಇದೇ ಸಂದರ್ಭದಲ್ಲಿ ದೀಪಾರ್ಪಣೆ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವಿ.ಜಿ. ಮಮಟಗೇರಿ, ಉಪಾಧ್ಯಕ್ಷರಾದ ಸಿ.ಎನ್. ಮಂಟೂರ, ಖಜಾಂಚಿ ಗಿರೀಶ್ ಜವಳಿ, ನಿರ್ದೇಶಕರಾದ ಅನಿತಾ ಕಲ್ಮಠ, ಶಿವಪ್ರಕಾಶ ಹೊಸಕೇರಿಮಠ, ಪ್ರಾಚಾರ್ಯರಾದ ದೀಪಾ ಕುಲಕರ್ಣಿ, ಶಾಲೆಯ ಆಡಳಿತಾಧಿಕಾರಿ ಮಂಜುನಾಥ ನಾಯಕ, ಪ್ರವೀಣ ದಾದಿ, ಸುಭಾಸ, ಬಾಳಪ್ಪ ಸೇರಿದಂತೆ ಮುಂತಾದವರು ಇದ್ದರು. ಸ್ನೇಹಾ, ವೈಷ್ಣವಿ ಸ್ವಾಗತಿಸಿದರು. ಸ್ವಪ್ನ ಹಟ್ಟಿ ಅಕ್ಷರಾ ಗುಡಿಸಾಗರ ಕಾರ್ಯಕ್ರಮ ನಿರೂಪಿಸಿದರು. ಅನುಶ್ರೀ ರಂಗರಡ್ಡಿಯವರ ವಂದಿಸಿದರು.