ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾನ ಜಾಗೃತಿ

| Published : Apr 13 2024, 01:03 AM IST

ಸಾರಾಂಶ

ರಬಕವಿ-ಬನಹಟ್ಟಿ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ರಬಕವಿ ಶಿಶು ಅಭಿವೃದ್ಧಿ ಯೋಜನೆ ಜಮಖಂಡಿ, ಚೈತನ್ನ ಮಹಿಳಾ ಸಂಘ ಮುಧೋಳ ಎಫ್‌ಎಸ್‌ಡಬ್ಲೂಟಿಐ ಯೋಜನೆ ರಬಕವಿ - ಬನಹಟ್ಟಿ ಇವರ ಸಹಯೋಗದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ನಿಮಿತ್ತ ರಬಕವಿ-ಬನಹಟ್ಟಿ ರಬಕವಿ ಹಳೆ ಬಸ್‌ ನಿಲ್ದಾಣದಿಂದ ಮಹಾಲಿಂಗಪೂರ ಸರ್ಕಲ್‌ವರೆಗೆ ಲೈಂಗಿಕ ಕಾರ್ಯಕರ್ತೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾನ ಜಾಗೃತಿ ಜಾಥಾ ಅಭಿಯಾನ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ತಾಲೂಕು ಪಂಚಾಯತ್, ರಬಕವಿ ಶಿಶು ಅಭಿವೃದ್ಧಿ ಯೋಜನೆ ಜಮಖಂಡಿ, ಚೈತನ್ನ ಮಹಿಳಾ ಸಂಘ ಮುಧೋಳ ಎಫ್‌ಎಸ್‌ಡಬ್ಲೂಟಿಐ ಯೋಜನೆ ರಬಕವಿ - ಬನಹಟ್ಟಿ ಇವರ ಸಹಯೋಗದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ನಿಮಿತ್ತ ರಬಕವಿ-ಬನಹಟ್ಟಿ ರಬಕವಿ ಹಳೆ ಬಸ್‌ ನಿಲ್ದಾಣದಿಂದ ಮಹಾಲಿಂಗಪೂರ ಸರ್ಕಲ್‌ವರೆಗೆ ಲೈಂಗಿಕ ಕಾರ್ಯಕರ್ತೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾನ ಜಾಗೃತಿ ಜಾಥಾ ಅಭಿಯಾನ ಹಮ್ಮಿಕೊಳ್ಳಲಾಯಿತು.

ಚೈತನ್ಯ ಮಹಿಳಾ ಸಂಘ ಮುಧೋಳದ ಅಧ್ಯಕ್ಷೆ ಮಧು ನಡುವಿನಮನಿ ಅಭಿಯಾನಕ್ಕೆ ಚಾಲನೆ ನೀಡಿದರು. ತಾಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿಗಳಾದ ಎಸ್. ಎಂ. ಕಾಂಬಳೆ, ನಗರ ಸಭೆಯ ಮ್ಯಾನೆಜರ್ ಸುರೇಶ ಬಾಗೇವಾಡಿ, ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಣಾ ಅಧಿಕಾರಿ ಮಧು ಲೋಕಾಪೂರ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಹಿರಿಯ ಮೇಲ್ವಿಚಾರಕಿ ಎಸ್.ಎಸ್.ಚೆನ್ನಿ ಹಾಗೂ ರಬಕವಿ-ಬನಹಟ್ಟಿಯ ತಾಲೂಕು ಪಂಚಾಯತಿ ಸಿಬ್ಬಂದಿ, ನಗರ ಸಭೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಮುದಾಯದ ದಮನಿತ ಮಹಿಳೆಯರು, ಹಾಗೂ ಚೈತನ್ಯ ಮಹಿಳಾ ಸಂಘದ ಸಿಬ್ಬಂದಿ ಇದ್ದರು.