ಸಾರಾಂಶ
ದೇವರ ಹಿಪ್ಪರಗಿ: ತಾಲೂಕಿನ ಸಾತಿಹಾಳ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಸ್ಥಳಕೆ ಭೇಟಿ ನೀಡಿದ ತಾಪ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜುನ್ನೂರ, ತಾಲೂಕಾ ಸ್ವೀಪ್ ಸಮಿತಿ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ಗ್ರಾಮದ ಕಾಲುವೆ ಹೂಳೆತ್ತುವ ನರೇಗಾ ಕೆಲದಲ್ಲಿ ತೊಡಗಿರುವ ಕೂಲಿ ಕಾರ್ಮಿಕರಿಗೆ ಅಧಿಕಾರಿಗಳು ಚುನಾವಣಾ ಪ್ರತಿಜ್ಞಾವಿಧಿ ಭೋದಿಸಿದರು.

ಓ ವೇಳೆ ಇಓ ಸಂಜೀವ ಕುಮಾರ ಬನ್ನೂರು, ಮತದಾನ ಎಂಬುದು ಭಾರತ ಸಂವಿಧಾನ ನಮಗೆ ನೀಡಿರುವ ಹಕ್ಕು. ಪ್ರಜಾಪ್ರಭುತ್ವದ ಏಳಿಗೆಗಾಗಿ ಉತ್ತಮ ಪ್ರಜೆಯನ್ನು ಆಯ್ಕೆ ಮಾಡಿಕೊಳ್ಳಲು, ನಾವೆಲ್ಲರೂ ಮೇ.7ರಂದು ತಪ್ಪದೇ ಮತದಾನ ಮಾಡೋಣ ಎಂದರು.ಗ್ರಾಮ ಪಂಚಾಯಿತಿಯ ಎಂ.ಎನ್.ಕತ್ತಿ ಮಾತನಾಡಿ, ಭಾರತದ ಪ್ರತಿ ಒಬ್ಬ ಪ್ರಜೆಯು ಮತದಾನದಲ್ಲಿ ಭಾಗಿಯಾಗಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಶ್ರಮಿಸೋಣ ಎಂದರು. 45 ಹೆಣ್ಣು ಮತ್ತು 8 ಪುರುಷ ಒಟ್ಟು 53 ಜನ ಕೂಲಿಕಾರರು ಸ್ಥಳದಲ್ಲಿದ್ದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ಶರಣಗೌಡ ಪಾಟೀಲ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಜಿ.ಎಸ್.ರೋಡಗಿ, ಎಂಜಿನಿಯರ್ ಅರ್ಷದ ಕೋಟ್ನಾಳ, ತಾಂಡಾ ರೋಜಗಾರ ಮಿತ್ರ ವಿನೋದ ರಾಠೋಡ, ಹಣಮಂತರಾಯ ಬಿರಾದಾರ, ಶಿವಾನಂದ ಬಿರಾದಾರ, ಮಹಾದೇವ ಡೋಮನಾಳ ಹಾಜರಿದ್ದರು.