ಪ್ರಜಾಪ್ರಭುತ್ವ ಯಶಸ್ವಿಗೆ ಮತದಾನದ ಅರಿವು ಅಗತ್ಯ: ಜಿ.ವಿ.ಗೌಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಾಜರಸ್

| Published : Nov 24 2024, 01:49 AM IST

ಪ್ರಜಾಪ್ರಭುತ್ವ ಯಶಸ್ವಿಗೆ ಮತದಾನದ ಅರಿವು ಅಗತ್ಯ: ಜಿ.ವಿ.ಗೌಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಾಜರಸ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾಪ್ರಭುತ್ವ ರಾಷ್ಟ್ರದೊಳಗೆ ಜವಾಬ್ದಾರಿ ಪ್ರಜೆಗಳಾಗಬೇಕಾದರೆ ವಿದ್ಯಾರ್ಥಿಗಳು ಮತ್ತು ಪ್ರಜೆಗಳು ಮತದಾನದ ಬಗ್ಗೆ ತಿಳಿದು ಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಮತಚಲಾಯಿಸಬೇಕು. ಅವರಿಗೆ ಮತದಾನದ ಅರಿವು ಅಗತ್ಯವಾಗಿದೆ ಎಂದು ಶ್ರೀ ಜಿ.ವಿ.ಗೌಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಾಜರಸ್ ಹೇಳಿದರು. ಹನೂರಿನಲ್ಲಿ ಮತದಾರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಮಾತನಾಡಿದರು.

ರಾಷ್ಟ್ರೀಯ ಮತದಾರ ದಿನಾಚರಣೆ

ಕನ್ನಡಪ್ರಭ ವಾರ್ತೆ ಹನೂರು

ಪ್ರಜಾಪ್ರಭುತ್ವ ರಾಷ್ಟ್ರದೊಳಗೆ ಜವಾಬ್ದಾರಿ ಪ್ರಜೆಗಳಾಗಬೇಕಾದರೆ ವಿದ್ಯಾರ್ಥಿಗಳು ಮತ್ತು ಪ್ರಜೆಗಳು ಮತದಾನದ ಬಗ್ಗೆ ತಿಳಿದು ಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಮತಚಲಾಯಿಸಬೇಕು. ಅವರಿಗೆ ಮತದಾನದ ಅರಿವು ಅಗತ್ಯವಾಗಿದೆ ಎಂದು ಶ್ರೀ ಜಿ.ವಿ.ಗೌಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಾಜರಸ್ ಹೇಳಿದರು.

ಪಟ್ಟಣದಲ್ಲಿ ರಾಷ್ಟ್ರೀಯ ಮತದಾರ ದಿನಾಚರಣೆಯ ಪ್ರಯುಕ್ತ ಕಾಲೇಜಿನಲ್ಲಿ ಸಾಕ್ಷರತಾ ಮತದಾರ ಸಮಿತಿ ಮತ್ತು ಚುನಾವಣಾ ಆಯೋಗದ ವತಿಯಿಂದ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮವನ್ನು ನಡೆಸಲಾಯಿತು

ಪ್ರಬುಧ್ದ ಭಾರತವನ್ನು ನಿರ್ಮಾಣ ಮಾಡಲು ಮತದಾನ ಮಾಡಬೇಕು. ವಿದ್ಯಾರ್ಥಿಗಳಿಗೆ ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ, ಮತದಾನದ ಬಗ್ಗೆ ಕಡ್ಡಾಯವಾಗಿ ಮಾಹಿತಿ ಅರಿವು ಅಗತ್ಯವಾಗಿದೆ ಎಂದರು.

ಸರ್ವಾಧಿಕಾರತ್ವ ಇರುವ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ಇರುವುದಿಲ್ಲ. ಅಲ್ಲಿ ಒಬ್ಬ ವ್ಯಕ್ತಿಯ ದಬ್ಬಾಳಿಕೆಯಿಂದ ಆಡಳಿತ ನಡೆಯುತ್ತದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳು ಇಲ್ಲಿ ಎಲ್ಲಾ ಅಧಿಕಾರ ಪ್ರಜೆಗಳ ಕೈಯಲ್ಲಿರುತ್ತದೆ. ರಾಷ್ಟ್ರದ ಅಭಿವೃದ್ಧಿ ಮತದಾರರ ಮತದಾನದಿಂದ ನಿರ್ಧಾರಗೊಳ್ಳುತ್ತದೆ. ಅದರಿಂದ ಪ್ರತಿಯೊಬ್ಬ ಪ್ರಜೆಯು ಮತದಾನದ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ತಾಲೂಕಿನ ಲೊಕ್ಕನಹಳ್ಳಿ, ಕೌದಳ್ಳಿ, ಬಂಡಳ್ಳಿ, ಪದವಿ ಪೂರ್ವ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿ ಚುನಾವಣಾ ಅರಿವಿಗೆ ಸಂಬಂಧಿಸಿದಂತೆ ಪ್ರಬಂಧ, ರಸಪ್ರಶ್ನೆ, ಚರ್ಚೆ ಸ್ಪರ್ಧೆ, ಭಿತ್ತಿ ಚಿತ್ರಗಳ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಇಎಲ್‌ಸಿ ಸಂಚಾಲಕ ಮಹೇಂದ್ರ ಎಚ್.ಪಿ., ರಾಜ್ಯಶಾಸ್ತ್ರ ಉಪನ್ಯಾಸಕರಾದ ಜಗದೀಶ್, ಮಹೇಶ್, ವಂದನಾ, ಇತರ ಅಧ್ಯಾಪಕರು, ಸದಸ್ಯರು, ವಿದ್ಯಾರ್ಥಿಗಳು, ಇತರರು ಹಾಜರಿದ್ದರು.