ವಿಶೇಷಚೇತನರಿಂದ ತ್ರಿಚಕ್ರ ವಾಹನಗಳ ಮೂಲಕ ಮತದಾನದ ಜಾಗೃತಿ

| Published : Apr 20 2024, 01:04 AM IST

ಸಾರಾಂಶ

ಮಾನ್ವಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿಶೇಷಚೇತನರಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜಗದೀಶ್ ಚೌರ್ ಚಾಲನೆ ನೀಡಿದರು.

ಮಾನ್ವಿ: ವಿಶೇಷಚೇತನರಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜಗದೀಶ್ ಚೌರ್ ಚಾಲನೆ ನೀಡಿದರು.

ಪಟ್ಟಣದ ಡಾ.ಬಿ.ಆರ್,ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ, ತಾಲೂಕು ಸ್ವೀಪ್‌ ಸಮಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಲು ವಿವಿಧ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ವಿಶೇಷಚೇತನರಿಂದ ತ್ರಿಚಕ್ರ ವಾಹನದ ಮೂಲಕ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬ ವಿಶೇಷ ಚೇತನ ಹಾಗೂ ಹಿರಿಯ ನಾಗರಿಕರು ಮೇ.7ರಂದು ಕಡ್ಡಾಯವಾಗಿ ತಮ್ಮ ಮತ ಚಾಲಯಿಸುವುದಕ್ಕೆ ಮತಗಟ್ಟೆಗಳಲ್ಲಿ ಅನುಕೂಲವಾಗುವಂತೆ ತ್ರಿಚಕ್ರ ತಳ್ಳುವ ಗಾಡಿ ಹಾಗೂ ಸಹಾಯಕರ ವ್ಯವಸ್ಥೆ, ಕುಡಿವ ನೀರು, ನೆರಳಿನ ವ್ಯವಸ್ಥೆ, ಬೆಳಕಿನ ಸೌಲಭ್ಯ ಮಾಡಲಾಗಿದೆ ಎಂದರು.

ಪಟ್ಟಣದ ಡಾ.ಬಿ.ಆರ್,ಅಂಬೇಡ್ಕರ್ ವೃತ್ತದಿಂದ ಬಸವವೃತ್ತದವರೆಗೆ ವಿಶೇಷಚೇತನರಿಂದ ತ್ರಿಚಕ್ರವಾಹನಗಳ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೊಡ್ಡಮನಿ, ಸಹಾಯಕ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮನ್ಸೂರ್ ಅಹಮ್ಮದ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಪ್ರ.ದ.ಸ ವಿನಾಯಕ ರಾವ್, ಕ್ಷೇತ್ರ ಶಿಕ್ಷಣಾ ಇಲಾಖೆ ಅಧಿಕಾರಿ, ಎಂ.ಆರ್.ಡಬ್ಯ್ಲೂ ಹನುಮಂತ ಕಪಗಲ್, ಗ್ರಾಪಂ, ಪಪಂ, ಪುರಸಭೆ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು, ಹಾಗೂ ವಿಕಲಚೇತನರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಇನ್ನಿತರು ಇದ್ದರು.