ಮನೆಯಲ್ಲೇ ಹಿರಿಯ ನಾಗರಿಕರಿಂದ ಮತದಾನ ಕ್ರಾಂತಿಕಾರಿ ಬೆಳವಣಿಗೆ-ಹೊಸಗೌಡ್ರ

| Published : Apr 30 2024, 02:03 AM IST

ಮನೆಯಲ್ಲೇ ಹಿರಿಯ ನಾಗರಿಕರಿಂದ ಮತದಾನ ಕ್ರಾಂತಿಕಾರಿ ಬೆಳವಣಿಗೆ-ಹೊಸಗೌಡ್ರ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಮನೆಯಲ್ಲಿಯೇ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಚುನಾವಣಾ ಪ್ರಕ್ರಿಯೆಯಲ್ಲಿ ಬಹುದೊಡ್ಡ ಕ್ರಾಂತಿಕಾರಿ ಬೆಳವಣಿಗೆಯಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಮತಾ ಹೊಸಗೌಡ್ರ ತಿಳಿಸಿದರು.

ಬ್ಯಾಡಗಿ: ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಮನೆಯಲ್ಲಿಯೇ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಚುನಾವಣಾ ಪ್ರಕ್ರಿಯೆಯಲ್ಲಿ ಬಹುದೊಡ್ಡ ಕ್ರಾಂತಿಕಾರಿ ಬೆಳವಣಿಗೆಯಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಮತಾ ಹೊಸಗೌಡ್ರ ತಿಳಿಸಿದರು.

ಶನಿವಾರ ಪಟ್ಟಣದ ಶೆಟ್ಟರ ಓಣಿಯಲ್ಲಿ ಬ್ಯಾಡಗಿ ವಿಧಾನಸಭೆ ಮತಕ್ಷೇತ್ರದ ಹಿರಿಯ ನಾಗರಿಕರ ಮನೆಗೆ ತೆರಳಿ ಮತಗಟ್ಟೆ ಸಿಬ್ಬಂದಿ ಮೂಲಕ ಮತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ಭಾರತದಲ್ಲಿ ಬಹುದೊಡ್ಡ ಸಂಖ್ಯೆಯ ಮತದಾರರನ್ನು ಹೊಂದಿದೆ. ಹೀಗಿರುವಾಗ ಎಲ್ಲರಿಗೂ ಸೌಲಭ್ಯಗಳನ್ನು ಕಲ್ಪಿಸುವುದು ಸುಲಭದ ಮಾತಲ್ಲ. ಆದರೆ ಚುನಾವಣೆ ಆಯೋಗ ವಯೋವೃದ್ಧರು ಕೂಡ ಮತದಾನ ಹಕ್ಕಿನಿಂದ ದೂರ ಉಳಿಯದಂತೆ ಅವರಿದ್ದಲ್ಲಿಯೇ ತಾತ್ಕಾಲಿಕ ಮತಗಟ್ಟೆ ಸ್ಥಾಪಿಸಿ ಮತದಾನಕ್ಕೆ ಕಲ್ಪಿಸಿರುವ ಕಾರ್ಯ ಅತ್ಯಂತ ಶ್ಲಾಘನೀಯ ಹಾಗೂ ಸ್ವಾಗತಾರ್ಹ ಎಂದರು.ಸಹಾಯವಾಣಿ ಆರಂಭ: ಹಾವೇರಿ ಲೋಕಸಭೆ ವ್ಯಾಪ್ತಿಯಲ್ಲಿ ಮೇ 7ರಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ. ಇದಕ್ಕಾಗಿ ಎಲ್ಲ ಮತಗಟ್ಟೆಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಸಿಬ್ಬಂದಿಗಳು ಮೇಲ್ವಿಚಾರಕರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿಗಳನ್ನು ತಿಳಿಸಲಾಗಿದೆ. ಮತದಾರರ ಸಮಸ್ಯೆಗಳ ಪರಿಹಾರಕ್ಕೆ ಸಹಾಯವಾಣಿ ತೆರೆಯಲಾಗಿದೆ, ಎಲ್ಲ ಮತದಾರರಿಗೆ ತೊಂದರೆಗಳನ್ನು ತಪ್ಪಿಸಲು ಮತ ಚೀಟಿಗಳನ್ನು ಮತಗಟ್ಟೆ ಕೇಂದ್ರದ ಬಿಎಲ್‌ಓಗಳ ಮೂಲಕ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ ಎಂದರು.

ಒಟ್ಟು 212567 ಮತದಾರರು: ಬ್ಯಾಡಗಿ ವಿಧಾನಸಭೆ ಮತಕ್ಷೇತ್ರದಲ್ಲಿ 107609 ಪುರುಷರು ಹಾಗೂ 104955 ಮಹಿಳೆಯರು ಸೇರಿದಂತೆ ಒಟ್ಟು 212567 ಮತದಾರರಿದ್ದು, ಇದಕ್ಕಾಗಿ 3 ವಿಶೇಷ ಸೇರಿದಂತೆ ಒಟ್ಟು 247 ಹಾಗೂ ಮತಗಟ್ಟೆಗಳನ್ನು ಸ್ಥಾಪಿ ಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ಮತಗಟ್ಟಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.ಹಿರಿಯರಿಗೆ ವಿಶೇಷ ವ್ಯವಸ್ಥೆ: ಬ್ಯಾಡಗಿ ಮತಕ್ಷೇತ್ರದಲ್ಲಿ 85 ವರ್ಷ ತುಂಬಿದ ಹಿರಿಯ ಹಾಗೂ ಅಂಗವಿಕಲ ಹೊಂದಿರುವ 202 ಮತದಾರರು ಮನೆಯಲ್ಲಿ ಮತದಾನ ಮಾಡಲು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 85 ವರ್ಷ ತುಂಬಿದ 115 ಹಿರಿಯ ಜೀವಿಗಳು ಹಾಗೂ 85 ಜನ ಅಂಗವಿಕಲ ಮತದಾರರಿದ್ದು ಎಲ್ಲರೂ ಮತದಾನದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಈ ವೇಳೆ ತಹಸೀಲ್ದಾರ್ ಪುಟ್ಟರಾಜಗೌಡ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಅಧಿಕಾರಿ ಎಸ್.ಜಿ. ಕೋಟಿ, ಪೋಲಿಂಗ್ ಸಿಬ್ಬಂದಿಗಳಾದ ವಾಯ್.ಕೆ. ಮಟಗಾರ, ಟಿ. ಪ್ರಕಾಶ, ಬಿಎಲ್‌ಓ ಎಸ್.ಎಂ. ಹಂಜಗಿ, ಆರ್.ಆರ್. ಬಿನ್ನಾಳ ಇದ್ದರು.