ಮತದಾನ ಪ್ರಜಾಪ್ರಭುತ್ವದ ಜೀವಾಳ: ಪಿಎಸ್‌ಐ ಪ್ರವೀಣ ವಾಲಿಕಾರ

| Published : Apr 09 2024, 12:45 AM IST

ಸಾರಾಂಶ

ಮತದಾನ ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ಪ್ರತಿಯೊಬ್ಬ ಪ್ರಜೆಯೂ ತಮ್ಮ ಧ್ವನಿಯನ್ನು ಕೇಳಲು ಮತ್ತು ಭವಿಷ್ಯವನ್ನು ರೂಪಿಸಲು ಇರುವ ಒಂದು ಅವಕಾಶವಾಗಿದೆ ಎಂದು ಪಿಎಸ್‌ಐ ಪ್ರವೀಣ ವಾಲಿಕಾರ ಹೇಳಿದರು.

ರಾಣಿಬೆನ್ನೂರು: ಮತದಾನ ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ಪ್ರತಿಯೊಬ್ಬ ಪ್ರಜೆಯೂ ತಮ್ಮ ಧ್ವನಿಯನ್ನು ಕೇಳಲು ಮತ್ತು ಭವಿಷ್ಯವನ್ನು ರೂಪಿಸಲು ಇರುವ ಒಂದು ಅವಕಾಶವಾಗಿದೆ ಎಂದು ಪಿಎಸ್‌ಐ ಪ್ರವೀಣ ವಾಲಿಕಾರ ಹೇಳಿದರು.ತಾಲೂಕಿನ ಕುಮಾರಪಟ್ಟಣಂ ಪೊಲೀಸ್ ಠಾಣೆಯ ಆವರಣದಲ್ಲಿ ಚಿತ್ರ ಕಲಾವಿದ ಡಾ.ಜಿ.ಜೆ. ಮೆಹೆಂದಳೆ ರಚಿಸಿದ ದೇಶದ ಭವಿಷ್ಯಕ್ಕಾಗಿ, ಪ್ರಜೆಗಳ ಅಭಿವೃದ್ಧಿಗಾಗಿ ನಮ್ಮ ಮತದಾನ ಮಹತ್ವದ್ದು ಎಂಬ ಕೊಲಾಜ್ ಚಿತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಒಬ್ಬ ನಾಗರಿಕನಾಗಿ ನಮ್ಮ ಜವಾಬ್ದಾರಿಯನ್ನು ಪೂರೈಸಲು, ಪ್ರಜಾಪ್ರಭುತ್ವವನ್ನು ಬಲಪಡಿಸಲು, ಉತ್ತಮ ನಾಯಕನನ್ನು ಆಯ್ಕೆ ಮಾಡಲು ಮತದಾನವು ಅತ್ಯವಶ್ಯಕ ಎಂದರು.ಜಿ.ಜೆ.ಮೆಹೆಂದಳೆ ಮಾತನಾಡಿ, ಪ್ರತಿ ಮತವೂ ಕೂಡ ನಿರ್ಣಾಯಕ. ಪ್ರತಿಯೊಬ್ಬರ ಮತ ದೇಶದ ಅಭಿವೃದ್ಧಿಯ ಪಥ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಮತ ಜಾಗೃತಿ ಮೂಡಿಸುವ ಅಂಗವಾಗಿ ಈ ಕೊಲಾಜ್ ಚಿತ್ರ ರಚಿಸಲಾಗಿದೆ. ಯಾವುದೇ ಆಮಿಷಗಳಿಗೆ ಒಳಗಾಗದೇ ದೇಶದ ರಕ್ಷಣೆ, ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವ ಜನಪ್ರತಿನಿಧಿಗಳಿಗೆ ನಿಮ್ಮ ಮತ ನೀಡಿ. ಮತದಾನದ ದಿನ ನಿಮ್ಮ ನಿಮ್ಮ ಊರುಗಳಲ್ಲಿ ಉಳಿದು ಮತದಾನ ಮಾಡಿರಿ ಎಂದರು.ಧನ್ಯೋಸ್ಮಿ ಭರತಭೂಮಿ ತಂಡದ ಜಿಲ್ಲಾಧ್ಯಕ್ಷ ಚರಣ ಅಂಗಡಿ ಮಾತನಾಡಿದರು. ಮಹಿಳಾ ಪಿಎಸ್‌ಐ ಸಂಗೀತಾ ದೊಡ್ಡಮನಿ, ಎಎಸ್‌ಐ ಬಿ.ಕೆ. ಕಂಬಳಿ, ಪೇದೆ ಇ.ಬಿ. ವಾಸನದ, ಸತೀಶ ಅಂಗಡಿ, ಪ್ರಕಾಶ ಅರಳಿಕಟ್ಟಿ, ಸಿದ್ದು ಗುಡ್ಡೇಕಾರ, ಸಂತೋಷ ಗದ್ದಿ, ಮಹೇಶ ಮಲ್ಲನಗೌಡರ, ಪರಮೇಶ ಚನ್ನಪ್ಪನವರ, ವಿಜಯ ಬಾತಿ, ಮಂಜುನಾಥ, ಮಲ್ಲೇಶಪ್ಪ ನೆಗಳೂರ, ಶ್ಯಾಮಾಚಾರಿ ವಿ.ಬಿ. ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.